ಬೆಂಗಳೂರು: ಪರಿಷತ್ ಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದೆ ತಡ ಎಲ್ಲಾ ರಾಜಕೀಯ ಪಕ್ಷಗಳು ಗರಿಗೆದರೋಕೆ ಶುರು ಮಾಡಿವೆ. ಅಭ್ಯರ್ಥಿಗಳ ಆಯ್ಕೆ, ಟಿಕೆಟ್ ಹಂಚಿಕೆ, ಗೆಲುವಿನ ತಂತ್ರ ಪ್ರತಿತಂತ್ರ ಹೀಗೆ ಎಲ್ಲದನ್ನು ಲೆಕ್ಕಚಾರ ಹಾಕುತ್ತಿದ್ದಾರೆ. ಈ ಮಧ್ಯೆ ದೊಡ್ಡ ಗೌಡರ ಕುಟುಂಬದಲ್ಲಿ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ರೇವಣ್ಣ ಅವರ ಜೇಷ್ಠ ಪುತ್ರ ಸೂರಜ್ ಅವರನ್ನು ಕಣಕ್ಕಿಳಿಸಲು ಫ್ಲ್ಯಾನ್ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆಯಂತೆ. ಜಿಲ್ಲೆಯ ಶಾಸಕರ ಸಭೆ ಕರೆದಿರುವ ದೇವೇಗೌಡರು, ಹಾಸನದಲ್ಲಿ ಜೆಡಿಎಸ್ ಸ್ಟ್ರಾಂಗ್ ಅಭ್ಯರ್ಥಿಯ ಕೊರತೆ ಇರುವ ಕಾರಣ ಕುಟುಂಬದವರನ್ನೇ ಕರೆತರಲು ನಿರ್ಧರಿಸಿರುವ ಬಗ್ಗೆ ಚರ್ಚಿಸಿದ್ದಾರಂತೆ.
ಈ ಬಾರಿಯ ಸ್ಪರ್ಧೆಯಲ್ಲಿ ಕುಟುಂಬಸ್ಥರೇ ಇಬ್ಬರಿದ್ದಾರೆ. ಕುಟುಂಬ ರಾಜಕಾರಣದ ಪಟ್ಟಿ ಮತ್ತೆ ಕಟ್ಟಿಕೊಳ್ಳುವ ಆತಂಕ ಕೂಡ ದೊಡ್ಡಗೌಡರಿಗೆ ಕಾಡ್ತಾ ಇದೆ. ಅದರಿಂದಲೂ ತಪ್ಪಿಸಿಕೊಳ್ಳಬೇಕು, ಪಕ್ಷವೂ ಗೆಲ್ಲಬೇಕು. ಹೀಗಾಗಿ ಈ ಬಾರಿ ಸೂರಜ್ ಅಥವಾ ಭವಾನಿ ರೇವಣ್ಣ ಅವರಿಗೆ ಟಿಕೆಟ್ ಕೊಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.