ರೇವಣ್ಣಗೆ ಸಿಕ್ತು ಷರತ್ತು ಬದ್ಧ ಜಾಮೀನು..!

 

 

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಮಹಿಳೆಯಿಬ್ಬರನ್ನು ಕಿಡ್ನ್ಯಾಪ್ ಮಾಡಿದ್ದ ಪ್ರಕರಣದಲ್ಲಿ ರೇವಣ್ಣ ಅರೆಸ್ಟ್ ಆಗಿದ್ದು, ಇಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ಕೋರ್ಟ್ ನಲ್ಲಿ ರೇವಣ್ಣ ಪರ ವಕೀಲ ಹಾಗೂ ಸರ್ಕಾರಿ ಪರ ವಕೀಲರ ನಡುವೆ ವಾದ – ಪ್ರತಿವಾದ ನಡೆದಿದೆ. ರೇವಣ್ಣ ಪರವಾಗಿ ವಕೀಲ ನಾಗೇಶ್ ವಾದ ಮಂಡಿಸಿದ್ದಾರೆ. ಎಸ್ಐಟಿ ಪರವಾಗಿ ಎಸ್ ಪಿ ಪಿ ಜಯ್ನ್ ಕೊಠಾರಿ ವಾದ ಮಂಡಿಸಿದ್ದಾರೆ. ಈ ಮೂಲಕ ರೇವಣ್ಣ ಅವರಿಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ.

 

 

ವಾದ ಪ್ರತಿವಾದದ ನಡುವೆ ಮೊದಲು ತನಿಖಾ ವರದಿಯನ್ನು ನೀಡುವಂತೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಕೇಳಿದ್ದಾರೆ. ಆದರೆ ಈ ವೇಳೆ ರೇವಣ್ಣ ಅವರ ವಕೀಲರು ಆ ವರದಿಯನ್ನು ನಮಗೂ ಕೊಟ್ಟಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಬಳಿಕ ಸರ್ಕಾರಿ ಪರ ವಕೀಲರು ಅವರಿಗೂ ಒಂದು ಕಾಪಿ ನೀಡಿದ್ದರು. ಇನ್ನು ಇದೇ ವೇಳೆ ಸರ್ಕಾರಿ ವಕೀಲರಾದ ಜಯ್ನಾ ಕೊಠಾರಿ, ಹಲವು ಪ್ರಕರಣಗಳನ್ನು ಉಲ್ಲೇಖ ಮಾಡಿದ್ದಾರೆ. ದೆಹಲಿ ಕೋರ್ಟ್ ನ ಗುರು ಚರಣ್ ಸಿಂಗ್ ಪ್ರಕರಣ ಉಲ್ಲೇಖಿಸಿದ್ದಾರೆ.

 

ವಾದ ಮುಂದುವರೆಸಿ, ರೇವಣ್ಣ ಅವರು ಪ್ರಭಾವಿ ರಾಜಕಾರಣಿ. ಮಗ ಸಂಸದ. ತಲೆ‌ಮರೆಸಿಕೊಂಡಿದ್ದಾರೆ. ಇದು ಕೇವಲ ಅಪಹರಣ ಪ್ರಕರಣದಲ್ಲಿ. ಅತ್ಯಾಚಾರಕ್ಕಿಳಗಾದ ಸಂತ್ರಸ್ತೆಯರ ಕಿಡ್ನ್ಯಾಪ್ ಆಗಿದೆ. ಪ್ರಕರಣದಲ್ಲಿ ಯಾವುದೇ ಸಂತ್ರಸ್ತೆಯರು ದೂರು ನೀಡದಂತೆ ತಡೆಯುವ ಪ್ರಯತ್ನವಾಗಿದೆ. ಹೀಗಾಗಿ ರೇವಣ್ಣ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದೆಂದು ಮನವಿ ಮಾಡಿದ್ದರು. ಆದರೆ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿ, ರೇವಣ್ಣ ಅವರಿಗೆ ಸಮಾಧಾನ ತಂದಿದೆ.

Share This Article
Leave a Comment

Leave a Reply

Your email address will not be published. Required fields are marked *