ರಾಯಚೂರು: ನಿವೃತ್ತ ಶಿರಸ್ತೇದಾರ ಪಂಪಾಪತಿ ಕೊಲೆ ಪ್ರಕರಣವನ್ನ ಪೊಲೀಸರು ಬೇಧಿಸಿದ್ದು, ಹಂತಕರನ್ನ ಬಂಧಿಸಿದ್ದಾರೆ. ಅಖಿಲೇಶ್ & ಗೌತಮ್ ಬಂಧಿತ ಆರೋಪಿಗಳು. ರಾಯಚೂರು ನಗರದ ನಿಜಲಿಂಗಪ್ಪ ಕಾಲೋನಿಯಲ್ಲಿ ನಡೆದಿದ್ದ ಕೊಲೆ. ಪಶ್ಚಿಮ ಠಾಣಾ ಪೊಲೀಸರಿಂದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.
ಇದೇ ನವೆಂಬರ್ ೨೧ ರಂದು ನ್ಯಾಯಾಂಗ ಇಲಾಖೆಯಲ್ಲಿ ನಿವೃತ್ತ ಶಿರಸ್ತೇದಾರನಾಗಿದ್ದ ಪಂಪಾಪತಿ ಕೊಲೆಯಾಗಿತ್ತು. ಅಜ್ಜಿ ಉಮಾದೇವಿ ಮನೆಯಿಂದ ಹೋಗುವವರೆಗೂ ಕಾಯ್ದಿದ್ದ ಮೊಮ್ಮಕ್ಕಳು ಬಾತ್ ರೂಂ ಬಳಿ ಸ್ಕೆಚ್ ಹಾಕಿದ್ದಾರೆ. ತಾತನ ಜೊತೆ ಇಡ್ಲಿ ಸಾಂಬರ್ ತಿಂದು ಹತ್ಯೆ ಮಾಡಿದ್ದಾರೆ. ಹತ್ಯೆ ವೇಳೆ ಗೌತಮ್ ಕೈಕಾಲು ಹಿಡಿದ್ರೆ, ಅಖಿಲೇಶ್ ಕತ್ತು ಸೀಳಿದ್ದ. ಕೊಲೆ ಬಳಿಕ ಮನೆಯಲ್ಲಿದ್ದ ೨೫ ನಗದು,೧ ಚೈನ್,೪ ಉಂಗುರ,೧ ಕಿವಿ ಓಲೆ ತೆಗೆದುಕೊಂಡು ಪರಾರಿಯಾಗಿದ್ದರು.
ಆ ಬಳಿಕ ಕೆರೆಯೊಂದರ ಬಳಿ ಬಟ್ಟೆ ಬದಲಿಸಿಕೊಂಡಿದ್ದರು. ದೋಚಿದ ಹಣದಲ್ಲಿ ಅಖಿಲೇಶ್ ಕಂಠಪೂರ್ತಿ ಕುಡಿದಿದ್ದ. ಆರೋಪಿ ಗೌತಮ್ ಕೊಲೆ ಮಾಡಿ ತಾನು ದೋಚಿದ ಹಣದಿಂದ ಕಾಲೇಜು ಫೀಸ್ ಕಟ್ಟಿದ್ದಾನೆ. ಅದೇ ದುಡ್ಡಲ್ಲಿ ಗರ್ಲ್ ಫ್ರೆಂಡ್ ಗೆ 14 ಸಾವಿರದ ಫೋನ್ ಕೂಡ ಗಿಫ್ಟ್ ಮಾಡಿದ್ದಾನೆ. ಈ ಬಗ್ಗೆ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..