ನಿವೃತ್ತ ನೌಕರ ಜಯರಾಮ್ ನಿಧನ

1 Min Read

ಚಿತ್ರದುರ್ಗ ಆಗಸ್ಟ್. 30 :  ನಗರಸಭೆ ಸದಸ್ಯೆ ಶ್ರೀಮತಿ ನಾಗಮ್ಮ ಅವರ ಪತಿ ಹಾಗೂ ಅರೋಗ್ಯ ಇಲಾಖೆಯ ನಿವೃತ್ತ ನೌಕರ ಜಯರಾಮ್ (82 ವರ್ಷ) ಅವರು ಶುಕ್ರವಾರ ಮುಂಜಾನೆ ನಿಧನ ಹೊಂದಿದರು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿಂದ ಬಿಡುಗಡೆಯಾದ ಬಳಿಕ ಚಿತ್ರದುರ್ಗದ ವೇದಾಂತ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ

ಮೃತರು ಪತ್ನಿ , ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗದವರನ್ನು  ಅಗಲಿದ್ದಾರೆ.  ಜಯರಾಮ್ ಅವರ ಪುತ್ರ ಮಹೇಶ್ ಮೂರು ಅವಧಿಗೆ ನಿರಂತರವಾಗಿ ನಗರಸಭೆಗೆ ಸದಸ್ಯರಾಗಿ ಆಯ್ಕೆ ಆಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪತ್ನಿ ಶ್ರೀಮತಿ ನಾಗಮ್ಮ ಅವರು ಚುನಾವಣೆ ಸ್ಪರ್ಧಿಸಿ ಗೆದ್ದಿದ್ದರು. ಮೃತರ ಅಂತ್ಯ ಕ್ರಿಯೆ ಶುಕ್ರವಾರ ಸಂಜೆ ಜೋಗಿಮಟ್ಟಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ಜಯರಾಮ್ ಅವರ ನಿಧನ ವಿಷಯ ತಿಳಿದ ಕೂಡಲೇ ಅಪಾರ ಸಂಖ್ಯೆಯಲ್ಲಿ ಬಂದುಗಳು ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರು ಆಗಮಿಸಿ ಮೃತರಿಗೆ ಅಂತಿಮ ನಮನ ಸಲ್ಲಿಸಿದರು.

ನಗರ ಸಭೆ ಅಧ್ಯಕ್ಷೆ ಸುಮಿತಾ ,ಉಪಾದ್ಯಕ್ಷರಾದ ಶ್ರೀದೇವಿ ಸದಸ್ಯರಾದ ಹೆಚ್ .ಭಾಸ್ಕರ್ , ಹೆಚ್. ಶ್ರೀನಿವಾಸ್ . ರಮೇಶ್ .ವೆಂಕಟೇಶಪ್ಪ , ದಾರುಕ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ರಾಮಸ್ವಾಮಿ,  ಗುತ್ತಿಗೆದಾರ ಶಿವಕುಮಾರ್ . ಅಶೋಕ್ , ಸೇರಿದಂತೆ ಹಲವಾರು ಆಗಮಿಸಿ ನಮನ ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *