ಬೆಂಗಳೂರು: ಉಡುಪಿ ಜಿಲ್ಲೆಯ ಹಲವೆಡೆ ಮುಸ್ಲಿಂ ಸಮುದಾಯದವರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ಮಾಡುವಾಗಿಲ್ಲ ಎಂದಿದ್ದಾರೆ. ಇದು ಕೇವಲ ಉಡುಪಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯದ ಹಲವೆಡೆ ವ್ಯಾಪಿಸಿದೆ.
ಈಗಾಗಲೇ ಶಿವಮೊಗ್ಗ, ನೆಲಮಂಗಲಕ್ಕೂ ಈ ನಿರ್ಬಂಧ ಆವರಿಸಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಇದು ಮೂಲಭೂತ ಹಕ್ಕನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಇದು ಸಂಪೂರ್ಣ ಕಾನೂನು ಬಾಹಿರವಾಗಿದೆ ಎಂದು ಕಿಡಿಕಾರಿದ್ದಾರೆ.
ಮುಸ್ಲಿಂ ಸಮುದಾಯದವರಿಗೆ ಅಂಗಡಿ ಮುಗ್ಗಟ್ಟು ತೆರೆಯದಂತೆ ಈ ರೀತಿ ಅವಕಾಶ ನಿರಾಕರಣೆ ಮಾಡುವುದು ದೌರ್ಜನ್ಯ. ಅಂಗಡಿ ಮುಗ್ಗಟ್ಟುಗಳನ್ನ ಹಾಕ್ಬೇಡಿ, ನಿಲ್ಲಿಸಿ ಅನ್ನೋದು ಅವರ ಹಕ್ಕುಗಳನ್ನ ಚ್ಯುತಿ ಮಾಡಿದಂತೆ. ಇವ್ರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಅಂತ ನಾನು ಹೇಳೋದು ಅದಕ್ಕೆ. ಕಾನೂನಿನಲ್ಲಿ ಈ ರೀತಿ ಮಾಡೋದಕ್ಕೆ ಅವಕಾಶವಿಲ್ಲ. ಈ ರೀತಿ ಮಾಡಿದ್ದು ತಪ್ಪು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.