Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋಡಿ ಹರಿಸುವ ಹಠ ಬಿಟ್ಟು ಹಿನ್ನೀರಿನ ರೈತರ ಕಷ್ಟಕ್ಕೆ ಸ್ಪಂದಿಸಿ; ಶಾಸಕ ಬಿ.ಜಿ. ಗೋವಿಂದಪ್ಪ

---Advertisement---

ಚಿತ್ರದುರ್ಗ: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಲು ಕೆಲ ಅಡಿಗಳಷ್ಟೇ ಬಾಕಿಯಿದ್ದು, ಇದೀಗ ಕೋಡಿ ವಿಚಾರ ಮುನ್ನಲೆಗೆ ಬಂದಿದೆ.

ಹೊಸದುರ್ಗದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಾಸಕ ಬಿ.ಜಿ. ಗೋವಿಂದಪ್ಪ, ‘ಹಿರಿಯೂರು ರೈತರು ಮಾತ್ರ ಸುಖವಾಗಿದ್ದರೆ ಸಾಲದು, ಹಿನ್ನೀರಿನ ರೈತರ ಕಷ್ಟಗಳಿಗೂ ಸ್ಪಂದಿಸಬೇಕು. ಈ ಗುಣ ರೈತರು ಹಾಗೂ ರಾಜಕೀಯ ನೇತಾರರಿಗೂ ಇರಬೇಕು’ ಎಂದರು.

‘ವಿವಿ ಸಾಗರದಲ್ಲಿ ನೀರು 130 ಅಡಿಗಿಂತ ಹೆಚ್ಚು ಬಂದಾಗ ಹಲವು ಪ್ರದೇಶಗಳು ಮುಳುಗಡೆ ಯಾಗುತ್ತವೆ. ಬಾಗಿನ ಅರ್ಪಿಸುವುದಕ್ಕೆ ಜಲಾಶಯ ತುಂಬಿ‌ಸುವ ಬದಲು, ಜನರ ಉಪಯೋಗಕ್ಕೆ ತುಂಬಿಸುವ ಅಗತ್ಯವಿದೆ’ ಎಂದು ತಿಳಿಸಿದರು.

‘2022ರಲ್ಲಿ ವಾಣಿ ವಿಲಾಸ ಸಾಗರ ಜಲಾಶಯ ಕೋಡಿ ಹರಿದಿದ್ದರಿಂದ ಹಿನ್ನೀರಿನ ಜನರು ಸಾಕಷ್ಟು ನಷ್ಟ ಅನುಭವಿಸಿದರು. ಪ್ರತಿ ವರ್ಷ ಕೋಡಿ ಹರಿಸಬೇಕು ಎಂಬ ಹಠಕ್ಕೆ ಬೀಳಬಾರದು. ತಾಲ್ಲೂಕಿನ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯ’ ಎಂದು ತಿಳಿಸಿದರು.

‘ವಿವಿ ಸಾಗರದಲ್ಲಿ ದಿನೇ ದಿನೇ ನೀರಿನ ಪ್ರಮಾಣ ಹೆಚ್ಚುತ್ತಿದೆ. ಹಿನ್ನೀರಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಂತ್ರಜ್ಞರು, ಅಧಿಕಾರಿಗಳ ಸಲಹೆ ಮೇರೆಗೆ ಕಾನೂನಾತ್ಮಕವಾಗಿ ರೈತರಿಗೆ ಶಾಶ್ವತ ಪರಿಹಾರ ನೀಡಲು ಎಲ್ಲರ ಸಹಕಾರ ಅಗತ್ಯ’ ಎಂದು ತಿಳಿಸಿದರು.

‘ ಮೈಸೂರು ಮಹಾರಾಜರು ತಾಲ್ಲೂಕಿನಲ್ಲಿ ವಿವಿ ಸಾಗರ ನಿರ್ಮಾಣ ಮಾಡಿದರು. ಅದಕ್ಕಾಗಿ 25,000 ಎಕರೆ ಭೂಮಿ ನೀಡಿದ ಹೊಸದುರ್ಗ ರೈತರದು ದೊಡ್ಡಗುಣ. ಆಗ ಕೆಲವು ಹಳ್ಳಿಗಳನ್ನು ಮಾತ್ರ ಸ್ಥಳಾಂತರಗೊಳಿಸಿ ಸೂಕ್ತ ಜಾಗ ನೀಡಲಾಗಿದೆ. ಇನ್ನೂ ಕೆಲವರು ಸಂಕಷ್ಟದಲ್ಲಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಭೂಮಿ ನೀಡಬೇಕಾಗಿದೆ’ ಎಂದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...