ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್,ಚಿತ್ರದುರ್ಗ, ಜನವರಿ. 09 : ನಾನೆ ಬೆಳಕು ನನ್ನಿಂದಲೆ ಬದಲಾವಣೆ ಎಂಬ ಅಹಂನಿಂದಲೆ ವಿನಾಶ ಎಂಬುದು ಸಾಮ್ರಾಟ್ ಅಶೋಕ್ ಅಭಿಪ್ರಾಯವಾಗಿತ್ತೆಂದು ಗೌತಮ ಬುದ್ದ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.
ಮೋದೋರು ತೇಜರವರ ವಿರಚಿತ ದಯಾನಿಧಿ ದಂಡೆಯ ಮೇಲೆ ನಾಟಕ ಪ್ರದರ್ಶನವನ್ನು ತ.ರಾ.ಸು.ರಂಗಮಂದಿರದಲ್ಲಿ ಉದ್ಗಾಟಿಸಿ ಮಾತನಾಡಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರಿಂದ ಪ್ರೇರಣೆಗೊಂಡ ಬಹುತೇಕರು ಬೌದ್ದ ಸಾಹಿತ್ಯ ನೀತಿಯನ್ನು ಪೂರ್ಣವಾಗಿ ಅಧ್ಯಯನ ಮಾಡಿಲ್ಲ. ಧಮ್ಮ ಆಚರಣೆ ಬಗ್ಗೆ
ತರಬೇತಿಯನ್ನು ಪಡೆದಿಲ್ಲ. ಇಂತಹ ಸಂದರ್ಭದಲ್ಲಿ ಧ್ಯಾನಾಸಕ್ತ ಬುದ್ದಮೂರ್ತಿಯನ್ನು ಗೌರವಿಸುವ ಬದಲು ಕಣ್ಣು ಬಿಟ್ಟಿರುವ ಬುದ್ದನನ್ನು ಮಾತ್ರ ಗೌರವಿಸಬೇಕು.
ಧಮ್ಮವನ್ನು ಮುನ್ನಡೆಸಲು ಬಂತೇಜಿಗಳು ಬೇಕಾಗಿಲ್ಲ. ವಿಶ್ವಮಾನ್ಯ ಮಾಡಿರುವ ಬೌದ್ದರ ಪಂಚಶೀಲ ಧ್ವಜವನ್ನು ಅಂಬೇಡ್ಕರ್ ಅನುಯಾಯಿಗಳು ತಿರಸ್ಕರಿಸಿ ಧರ್ಮವನ್ನು ಕಟ್ಟಬೇಕೆನ್ನುವ ಗೊಂದಲಗಳಿಂದ ಮುಕ್ತರಾಗದೆ ಧರ್ಮವನ್ನು ಬೆಳೆಸಲು ಸಾಧ್ಯವಿಲ್ಲವೆಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ವೈಚಾರಿಕ, ವೈಜ್ಞಾನಿಕ ತರ್ಕಬದ್ದ ವಿವೇಚನೆಯೊಂದಿಗೆ 24 ಪವಿತ್ರ ಬೋಧನೆಗಳನ್ನು ಒಳಗೊಂಡಂತೆ ಮೌಢ್ಯಕ್ಕೆ ಪುರೋಹಿತಶಾಹಿಗಳಿಗೆ ಅವಕಾಶವಿಲ್ಲದೆ ಸಣ್ಣಪುಟ್ಟ ವ್ಯತ್ಯಾಸಗಳನ್ನು ಚರ್ಚೆಯ ಮೂಲಕ ಬಗೆಹರಿಸಿಕೊಂಡು ಧಮ್ಮವನ್ನು ಕಟ್ಟದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರಾದ ಬಿ.ಟಿ.ರುದ್ರಪ್ಪ ಮಾತನಾಡಿ ಸರ್ಕಾರಿ ವಿಜ್ಞಾನ ಕಾಲೇಜು ವಿದ್ಯಾರ್ಥಿಗಳು ತಂಡ ಕಟ್ಟಿಕೊಂಡು ಅಲ್ಪ ಅವಧಿಯಲ್ಲಿಯೇ ದಯಾನಿಧಿ ದಂಡೆಯ ಮೇಲೆ ನಾಟಕ ಆಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ರಂಗ ಕಲೆಯನ್ನು ಉಳಿಸಿ ಬೆಳೆಸಬೇಕಾಗಿರುವುದರಿಂದ ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ ಎಂದು ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಮಾದಿಗ ನೌಕರರ ಸಂಘದ ಖಜಾಂಚಿ ಮಲ್ಲಿಕಾರ್ಜುನ್, ನಾಟಕ ಕೃತಿಕಾರ ಮೋದೂರು ತೇಜ, ಶಿಕ್ಷಕಿ ಬಿ.ಟಿ.ಲೋಕಾಕ್ಷಮ್ಮ, ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ವೇದಿಕೆಯಲ್ಲಿದ್ದರು.