ಹುಬ್ಬಳ್ಳಿ: ರಾಜ್ಯದಲ್ಲಿ ಆಗಾಗ ದಲಿತ ಮುಖ್ಯಮಂತ್ರಿ ವಿಚಾರ ಸದ್ದು ಮಾಡುತ್ತಲೇ ಇರುತ್ತದೆ. ಇತ್ತಿಚೆಗಷ್ಟೇ ಬಿಕೆ ಹರಿಪ್ರಸಾದ್ ದಲಿತ ಸಿಎಂ ಬಗ್ಗೆ ಮಾತನಾಡಿದ್ದರು. ಜಿ ಪರಮೇಶ್ವರ್ ಅವರಿಗೆ ಬೆಂಬಲ ನೀಡಿದ್ದರು. ಇದೀಗ ದಲಿತ ಸಿಎಂ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
‘ಮುಖ್ಯಮಂತ್ರಿ ಸ್ಥಾನವನ್ನು ದಲಿತರಿಗೆ ಕೊಡಬೇಕು. ಇಲ್ಲ ಅಂತೇನಿಲ್ಲ. ಆದರೆ ತಕ್ಷಣಕ್ಕೆ ಯಾವುದು ಬರುವುದಿಲ್ಲ. ಕಾಯಬೇಕಾಗುತ್ತದೆ. ಅದರಲ್ಲೂದೃಷ್ಟಿಯನ್ನ ಇಟ್ಟುಕೊಳ್ಳಬೇಕು ದಲಿತ ಸಿಎಂ ಹೇಳಿಕೆ ನೀಡಿದರೆ ತಪ್ಪೇನು ಇಲ್ಲ. ಎಲ್ಲದ್ದಕ್ಕಿಂತ ದೊಡ್ಡದು ಪಕ್ಷ ಇದೆ. ಪಕ್ಷ ನಿರ್ಧಾರ ಮಾಡುತ್ತದೆ.
ದಲಿತರು ಸಿಎಂ ಆಗುವುದನ್ನು ಮಾತನಾಡುವುದಕ್ಕೆ ಬಿಡುವುದಕ್ಕೆ ಇದು ಸೂಕ್ತವಾದ ಸಮಯ ಅಲ್ಲ. ಈಗ ಮುಖ್ಯಮಂತ್ರಿ ಇದ್ದಾರೆ, ಅವರೇ ಮುಂದುವರೆಯುತ್ತಾರೆ. ಅವರು ಒಳ್ಳೆಯ ಕೆಲಸವನ್ನೆ ಮಾಡುತ್ತಾರೆ. ಯಾರೂ ಏನು ಹೇಳಿದ್ದಾರೋ ನೀವೂ ಅವರ ಬಳಿಯೇ ಹೋಗಿ ಕೇಳಬೇಕು. ಅದರ ಬಗ್ಗೆ ಚರ್ಚೆ ಮಾಡುವುದಕ್ಕೆ ನಮ್ಮ ಪಲ್ಷ ದೊಡ್ಡದಿದೆ. ನೂರಾರು ಜನ ನಾಯಕರಿದ್ದಾರೆ. ಅದೇನೆ ಸಮಸ್ಯೆ ಆದರೂ ಪರಿಹಾರ ಮಾಡುತ್ತಾರೆ ಎಂದು ಬಿಕೆ ಹರಿಪ್ರಸಾದ್ ಮಾತಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದು,, ಆ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಯಾರೇ ಸೇರಿದರೂ ನಾವೂ ಸಮರ್ಥವಾಗಿ ಹೆಚ್ಚು ಸೀಟುಗಳನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕು. ಗೆಲ್ಲುತ್ತೇವೆ ಎಂದಿದ್ದಾರೆ.
ಇದೆ ವೇಳೆ ಡಿ ಸುಧಾಕರ್ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅದಕ್ಕೆ ಎಂದು ಕಾನೂನು ಇದೆ. ಕಾನೂನು ಎಲ್ಲವನ್ನು ನೋಡಿಕೊಳ್ಳಲಿದೆ. ಯಾಕೆ ಹಾಕಿದ್ದಾರೆ..? ಏನು ಎಂಬ ಮಾಹಿತಿ ಅವರಿಗೆ ಗೊತ್ತಿದೆ. ಪ್ರಕರಣ ಎದುರಿಸಬೇಕಾದದ್ದು ಅವರ ಕರ್ತವ್ಯ. ಎಲ್ಲದಕ್ಕೂ ರಾಜೀನಾಮೆ ಕೊಡುವುದಕ್ಕೆ ಆಗುವುದಿಲ್ಲ. ಬಿಜೆಪಿ ಸರ್ಕಾರದಲ್ಲೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು, ಯಾರೂ ಕೂಡ ರಾಜೀನಾಮೆ ನೀಡಿರಲಿಲ್ಲ ಎಂದಿದ್ದಾರೆ.