ದಾಂತೇವಾಡ: ಮಾವೋವಾದಿಗಳು ನಡೆಸಿದ ಸ್ಪೋಟಕ್ಕೆ ಹನ್ನೊಂದು ಮಂದಿ ಯೋಧರು ಸಾವನ್ನಪ್ಪಿರುವ ಘಟನೆ ಛತ್ತಿಸ್ಗಡದ ದಾಂತೇವಾಡದಲ್ಲಿ ನಡೆದಿದೆ. ಮಾವೋವಾದಿಗಳ ಸ್ಪೋಟದಿಂದ ಹತ್ತು ಮಂದಿ ಭದ್ರತಾ ಸಿಬ್ಬಂದಿ ಮತ್ತು ಕಾರು ಚಾಲಕ ಸೇರಿ, ಹನ್ನೊಂದು ಮಂದಿ ಜೀವ ಕಳೆದುಕೊಂಡಿದ್ದಾರೆ.
ನಕ್ಸಲ ನಿಗ್ರಾಹ ಕಾರ್ಯಾಚರಣೆ ನಡೆಸಿ, ಪೊಲೀಸರು ವಾಪಾಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿಯ ವಾಹನವನ್ನು ಸ್ಪೋಟಿಸಿ, ಈ ಕೃತ್ಯ ಎಸಗಲಾಗಿದೆ. ದಾಂತೇವಾಡದ ಅರಸಲುಪುರ ಬಳಿ ಸಿಬ್ಬಂದಿ ವಾಹನವನ್ನು ಸ್ಪೋಟಿಸಲಾಗಿದೆ.
ಘಟನೆಗೆ ಛತ್ತಿಸ್ಗಡ ಸಿಎಂ ಭೂಪೇಶ್ ಬಾಘೇಲ್ ಸಂತಾಪ ಸೂಚಿಸಿದ್ದಾರೆ. ಇದು ಬಹಳ ದುಃಖಕರ ಸಂಗತಿ. ಸಂತ್ರಸ್ತರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಹೋರಾಟ ಅದರ ಅಂತಿಮ ಹಂತದಲ್ಲಿದೆ. ನಕ್ಸಲರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.