ಬೆಳಗಾವಿ: ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿಗಾಗಿ ಶಾಸಜ ಯತ್ನಾಳ್ ಕೂಡ ಓಡಾಟ ನಡೆಸುತ್ತಿದ್ದಾರೆ. ಸರ್ಜಾರದಿಂದ ಭರವಸೆಯಷ್ಟೇ ಸಿಗುತ್ತಿದ್ದು, ಅಧಿಕೃತವಾಗಿ ಕಾರ್ಯರೂಪಕ್ಕೆ ಬಾರದೆ ಇರುವುದಕ್ಕೆ ಮತ್ತಷ್ಟು ರೊಚ್ಚುಗೆದ್ದಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 24 ಗಂಟೆಯಲ್ಲಿ ಮೀಸಲಾತಿ ಸಿಗಬೇಕು. ನಿಮ್ಮ ತಾಯಿ ಮೇಲೆ ಗೌರವ ಇದ್ದರೆ ಹೇಳು. ಅವರ ಮೇಲೆ ಪ್ರಮಾಣ ಮಾಡಿ ಹೇಳಿ. ನಾವೂ ಇಲ್ಲಿ ಧಮ್ಕಿ ಹಾಕಿ ಮೀಸಲಾತಿ ಕೇಳುತ್ತಿಲ್ಲ. ಧಮ್ಕಿ ಹಾಕಿ ಮೀಸಲಾತಿ ಕೇಳಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತಿದ್ದೆವು. ಆಗ ನಿಮ್ಮನ್ನು ಮೂತ್ರ ವಿಸರ್ಜನೆಗೂ ಬಿಡುತ್ತಾ ಇರಲಿಲ್ಲ. ಏನು ಮಾಡದೆ ಇದ್ದರು ಧಮ್ಕಿ ಅಂತ ಅಪವಾದ ಕೊಡುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಅಧಿವೇಶದನಲ್ಲಿ ನಮ್ಮ ಸಮುದಾಯಕ್ಕೆ ಮೀಸಲಾತಿ ನೀಡುವ ಭರವಸೆಯನ್ನು ನೀಡಿದ್ದರು. ವರದಿ ಕೊಡು ಪುಣ್ಯಾತ್ಮ ಅಂತ ಕೇಳಿದ್ರೆ ಮಳೆ ಐತಿ, ಕೊರೊನಾ ಐತಿ ಅಂತ ನಾಟಕ ಮಾಡಿದ್ರು. ಇದರ ಹಿಂದೆ ಶಿಕಾರಿಪುರದ ರಾಜ ಇದ್ದಾರೆ. ಬಸವರಾಜ್ ಬೊಮ್ನಾಯಿ ಸಿಎಂ ಆದಾಗಿನಿಂದ ಈ ಪರಿಸ್ಥಿತಿ ಬಂದಿದೆ ಎಂದು ಮುಖ್ಯಮಂತ್ರಿಗಳ ಮೇಲೆ ಹರಿಹಾಯ್ದಿದ್ದಾರೆ.