ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಹೋರಾಟ ನಡೆಯುತ್ತಿದೆ. ಈ ಸಂಬಂಧ ಇಂದು ಬೆಂಗಳೂರಿನಲ್ಲಿ 1 ಗಂಟೆಗೆ ಜಂಟಿ ಅಧಿವೇಶನದಲ್ಲಿ ತಿರ್ಮಾನ ಪ್ರಕಟಗೊಳ್ಳಲಿದೆ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಂದು ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಬಸವರಾಜ್ ಬೊಮ್ಮಯಿಯವರನ್ನ ಭೇಟಿ ಮಾಡಿ ಸುದೀರ್ಘ ಕಾಲ ಚರ್ಚೆ ನಡೆಸಿದರು.
ಇನ್ನೂ ಚರ್ಚೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಕುರಿತು ಇವತ್ತು ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿದ್ದೇವೆ, ಭಾರತೀಯ ವಿದ್ಯಾಮಂದಿರದಲ್ಲಿ ಪಂಚಮಸಾಲಿಗಳ ಜಂಟಿ ಅಧಿವೇಶನ ಇದೆ. ಈ ಸಭೆಯಲ್ಲಿ ಸರ್ಕಾರದ ಪರವಾಗಿ ಸಚಿವ ಸಿ ಸಿ ಪಾಟೀಲ್ ಅವರು ಇವತ್ತು ಭಾರತೀಯ ವಿದ್ಯಾಭವನಕ್ಕೆ ಬಂದು ಸರ್ಕಾರದ ನಿರ್ಧಾರವನ್ನ ಮಧ್ಯಾಹ್ನ 1 ಗಂಟೆಗೆ ಸಿ ಸಿ ಪಾಟೀಲ ರವರು ಸರ್ಕಾರದ ನಿರ್ಧಾರ ಪ್ರಕಟಿಸಲಿದ್ದಾರೆ. ಆ ನಂತರ ನಾವು ಚರ್ಚೆ ಮಾಡಿ ನಮ್ಮ ನಿರ್ಧಾರವನ್ನ ಪ್ರಕಟ ಮಾಡುತ್ತೇವೆ ಎಂದರು.
ಇನ್ನೂ ಈ ವೇಳೆ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಮಾತನಾಡಿ, ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ನಡೆಸಿದ್ದೇವೆ ಈ ಸಂದರ್ಭದಲ್ಲಿ
ಸತ್ಯಾಗ್ರಹ ಮಾಡುವುದು ಬೇಡ ಎಂದು ಮನವಿ ಮಾಡಲಾಗಿದೆ.
ಸರ್ಕಾರದ ನಿರ್ಧಾರವನ್ನು ನಾನು ಮಧ್ಯಾಹ್ನ 1 ಗಂಟೆಗೆ ಪಂಚಮಸಾಲಿಗಳ ಜಂಟಿ ಅಧಿವೇಶನದಲ್ಲಿ ಹೇಳ್ತೇನೆ. ಈಗಾಗಲೇ ಸಿಎಂ ಸಭೆಯಲ್ಲಿ ನಡೆದಿದ್ದನ್ನು ನಾನು ಬಹಿರಂಗಪಡಿಸೋದಿಲ್ಲ ಎಂದರು.