ಮಾದಿಗರಿಗೆ ಕೇವಲ ಅಧಿಕಾರ ಪಡೆಯಲಿಕ್ಕಾಗಿ ಮೀಸಲಾತಿ ಕೊಟ್ಟಿಲ್ಲ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

2 Min Read

ವರದಿ : ಸುರೇಶ್ ಪಟ್ಟಣ್ 

ಚಿತ್ರದುರ್ಗ,(ಜ.02) : ಮಾದಿಗರಿಗೆ ಕೇವಲ ಅಧಿಕಾರ ಪಡೆಯಲಿಕ್ಕಾಗಿ ಮೀಸಲಾತಿ ಕೊಟ್ಟಿಲ್ಲ. ಉನ್ನತ ಶಿಕ್ಷಣ ಪಡೆಯಲು ಹಾಗೂ ಗುಡಿಸಲಿನಲ್ಲಿ ವಾಸ ಮಾಡುವ ಜನರು ಸಮಾಜದ ಮುಖ್ಯವಾಹಿನಿಗೆ ಬರಲೆಂದು ಮೀಸಲಾತಿ ನೀಡಿರುವುದು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಇಂದು  ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದಿಂದ ಹಮ್ಮಿಕೊಂಡೊದ್ದ ಮಾದಿಗ ಸಮುದಾಯದ ನೂತನ ಐಪಿಎಸ್ ಅಧಿಕಾರಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಕೂಡ ಮಾದಿಗ ಸಮುದಾಯದ 3 ಜನ ಮಾತ್ರ ಐಎಎಸ್ ಅಧಿಕಾರಿಗಳಿದ್ದು, ದೇಶದಲ್ಲಿನ ಶೇಕಡ 98 ರಷ್ಟು ಆರ್ಥಿಕ ಹುದ್ದೆಗಳನ್ನು ಪಡೆದರೆ ಕೇವಲ 2 % ಮಾತ್ರ ನಾವು ಪಡೆಯುತ್ತಿದ್ದೇವೆ ಎಂದರು.

ನಮ್ಮ ನಡೆ ನುಡಿ ಯಾವ ರೀತಿ ಇರಬೇಕು ಎಂಬುದನ್ನು ಸನ್ಮಾನಗಳು ಪ್ರೇರಣೆಯಾಗಿದೆ. ಇದರಿಂದ ಇನ್ನಷ್ಟು ಸಾಧನೆಗೆ ಅನುಕೂಲವಾಗಲಿದೆ ಎಂದು ಹೇಳಿದ  ಅವರು, ನಮಗೆ ಮೀಸಲಾತಿ ನೀಡುವ ಮೂಲಕ ನಮ್ಮ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮ ಪಟ್ಟಂತಹ ಮಹಾನ್ ವ್ಯಕ್ತಿಗಳನ್ನು ನಾವುಗಳು ಆದರ್ಶವಾಗಿಟ್ಟುಕೊಂಡು ನ್ಯಾಯಯುತವಾಗಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮಾಜದಲ್ಲಿ ಅವಶ್ಯ ಜ್ಞಾನವನ್ನು ಪಡೆಯಬೇಕಿದೆ. ಈ ನಿಟ್ಟಿನಲ್ಲಿ ನಾವು ಶಿಕ್ಷಣ ಪಡೆದು ನಮಗೆ ನಾವೇ ಶಿಲ್ಪಿಗಳಾಗಬೇಕು. ಇಲ್ಲಿ ನಮನ್ನು ಯಾರು ಕೂಡ ಉದ್ದಾರ ಮಾಡಲ್ಲಾ ಎಂಬುದನ್ನು ನಾವುಗಳು ತಿಳಿದು ಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ ಮಾತಾನಾಡಿ, ನೂತನ ಐಪಿಎಸ್ ಅಧಿಕಾರಿಗಳನ್ನು ತಮ್ಮಂತೆ ನಾಲ್ಕು ಜನ ಐಎಎಸ್ , ಐಪಿಎಸ್ ಅಧಿಕಾರಿಗಳನ್ನು ತಯಾರು ಮಾಡುವ ಕೆಲಸ ಮಾಡಬೇಕು. ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸ್ವ ಸಮಾಜಕ್ಕೂ ಹೆಸರು ತರುವಂತ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.

ಪೊಲೀಸ್ ಇಲಾಖೆ ಅಧಿಕಾರಿಗಳ ಬಳಿಗೆ ನೊಂದ ಜನರೇ ಬರುತ್ತಾರೆ. ಅಂಥವರಿಗೆ ಸಾಂತ್ವನ ಹೇಳಿ ಕಣ್ಣೀರು ಒರೆಸುವ ಮಾನವೀಯ ಮೌಲ್ಯದ ಕೆಲಸ ಮಾಡಬೇಕು. ನೊಂದವರಿಗೆ ನ್ಯಾಯ ಒದಗಿಸುವ ದಕ್ಷ ಅಧಿಕಾರಿಗಳಾಗಿ ಜನ ಮೆಚ್ಚುಗೆ ಗಳಿಸಬೇಕು ಎಂದು ಹೇಳಿದ ಅವರು, ಸಮುದಾಯದ ಜನರು ಮತ್ತು ವಿದ್ಯಾರ್ಥಿಗಳು, ಮಕ್ಕಳು ಈ ಕಾರ್ಯಕ್ರಮದಿಂದ ಪ್ರೇರಣೆ ಪಡೆಯಬೇಕು. ದೊಡ್ಡ ಮಟ್ಟದ ಅಧಿಕಾರಿಗಳು ಆಗುವ ನಿಟ್ಟಿನಲ್ಲಿ ಶ್ರಮವಹಿಸಬೇಕೆಂದು ಕರೆ ನೀಡಿದರು.

ನೂತನ ಐಪಿಎಸ್ ಅಧಿಕಾರಿಗಳಾದ ಆರ್.ಜಯಪ್ರಕಾಶ್, ಡಾ.ಬಿ.ಟಿ.ಕವಿತಾ, ಎಂ.ರಾಜೀವ್ ಗೆ ಅಭಿನಂದನೆ ಸಲ್ಲಿಸಲಾಯಿತು. ಪುಷ್ಪಾರ್ಚನೆ ಮಾಡಿ ಹೂವು, ಪೇಟ ತೊಡಸಿ ಮಾದಾರಚೆನ್ನಯ್ಯ ಶ್ರೀ ಆಶೀರ್ವದಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚೆನ್ನಯ್ಯ ವಹಿಸಿದ್ದು, ಹರಳಯ್ಯ ಮಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ, ಶಾಸಕರಾದ ಎಂ.ಚಂದ್ರಪ್ಪ, ಟಿ.ರಘುಮೂರ್ತಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಅನಿಲ್ ಕುಮಾರ್, ಜಿ.ಎಸ್.ಮಂಜುನಾಥ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *