ಕಾಲುವೆ ನಿರ್ಮಾಣ ಕಾಮಗಾರಿ ತಡೆಗೆ ಅಸಮಧಾನ ; ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ

ಚಿತ್ರದುರ್ಗ : ಭದ್ರಾ ಮೇಲ್ದಂಡೆ ಯೋಜನೆ ಕಾಲುವೆ ನಿರ್ಮಾಣದ ಕಾಮಗಾರಿಗೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ರೈತರು ತಡೆ ಮಾಡಿರುವುದಕ್ಕೆ  ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಬಯಲು ಸೀಮೆ ರೈತರ ಬದುಕು ಹಸನಾಗಿಸುವ ಮಹತ್ವದ  ಯೋಜನೆಗೆ ರೈತರೇ ಅಡ್ಡಿಬಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯ ಪಟ್ಟಿದೆ.

ಈ ಸಂಬಂಧ ಬುಧವಾರ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಹೋರಾಟ ಸಮಿತಿ ನಿಯೋಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಅಲ್ಲಿನ ಎಸ್ಪಿ ಬಳಿ ಮಾತನಾಡಿ ಕಾಮಗಾರಿಗೆ ತಡೆ ಮಾಡದಂತೆ  ಅಗತ್ಯ ಕ್ರಮ ಕೈಗೊಳ್ಳವು ವಿನಂತಿಸಿದರು.

ಭದ್ರಾ ಮೇಲ್ದಂಡೆಯಡಿ ಕಾಲುವೆ ನಿರ್ಮಾಣಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅಬ್ಬಿನಹೊಳಲು ಬಳಿ ಸುಮಾರು 1.9 ಕಿಮೀ ಉದ್ದದ ಕಾಲುವೆ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳಲಾದ ಭೂಮಿಗೆ ನ್ಯಾಯಯುತ ಪರಿಹಾರ ಸಿಕ್ಕಿಲ್ಲವೆಂಬುದು ಅಲ್ಲಿನ ರೈತರ ಆರೋಪ.  ಭೂಮಿ ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರ ನೀಡುವ ವಿಚಾರದಲ್ಲಿ  ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಲ್ಲಿನ ರೈತರನ್ನು ಬೆಂಬಲಿಸುತ್ತದೆ ಎಂದು ಹೋರಾಟ ಸಮಿತಿ ಮುಖಂಡರು ಜಿಲ್ಲಾ„ಕಾರಿಗೆ ಮನವರಿಕೆ ಮಾಡಿದರು.

ಅಲ್ಲಿನ ರೈತರ ನ್ಯಾಯಯುತ ಪರಿಹಾರದ ಬಿಗಿ ಪಟ್ಟು ಕಾರಣಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಕಾಲುವೆ ನಿರ್ಮಾಣಕ್ಕೆ ರೈತರು ಸಮ್ಮತಿಸಿದ್ದರೆ ಕಳೆದ ವರ್ಷವೇ ಎರಡು ಪಂಪುಗಳ ಚಾಲನೆ ಮಾಡಿ ವಿವಿ ಸಾಗರ ಜಲಾಶಯವ ಭರ್ತಿ ಮಾಡಬಹುದಿತ್ತು.

ಅಬ್ಬಿನಹೊಳಲು ಪ್ರದೇಶದ 1.9 ಕಿಮೀ ಉದ್ದದ ಕಾಲುವೆ ನಿರ್ಮಾಣಕ್ಕೆ ಭೂ ಸ್ವಾ„ೀನವಾದ ಎಲ್ಲ ರೈತರು ವಿರೋಧ ವ್ಯಕ್ತಪಡಿಸುತ್ತಿಲ್ಲ. ಕೆಲವರು ಮಾತ್ರ ಪರಿಹಾರ ಮೊತ್ತ ಕಡಿಮೆ ಆಗಿದೆ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ, ಅಲ್ಲದೇ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.  ಜಲಸಂಪನ್ಮೂಲ ಸಚಿವ ಗೋವಿಂದಕಾರಜೋಳ ಕಳೆದ ವಾರ ಚಿತ್ರದುರ್ಗಕ್ಕೆ ಆಗಮಿಸಿದಾಗ  ಅಬ್ಬಿನಹೊಳಲು ಪ್ರದೇಶದ ಭೂ ಸ್ವಾದೀನ ಪ್ರಕ್ರಿಯೆ ತೊಡರುಗಳ ನಿವಾರಿಸುವಂತೆ ಸಮಿತಿಯಿಂದ ಮನವಿ ಮಾಡಿಕೊಳ್ಳಲಾಗಿತ್ತು.
ಈ ವೇಳೆ ಸಂಬಂಧಿಸಿದ ಅ„ಕಾರಿಗಳ ಜೊತೆ ಮಾತನಾಡಿದ್ದ ಸಚಿವರು ಭೂ ಸ್ವಾದೀನ ಅವಾರ್ಡ ಆಗಿ ಈಗಾಗಲೇ ಪರಿಹಾರ ತೆಗೆದುಕೊಂಡಿರುವ ರೈತರ ಜಮೀನಿನಲ್ಲಿ ಕಾಲುವೆ ನಿರ್ಮಾಣದ ಕೆಲಸ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದರು.
ಅದರಂತೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಸಂಬಂಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿ ಕಾಮಗಾರಿ ಆರಂಭಿಸವಂತೆ ಸಲಹೆ ಮಾಡಿದ್ದರು.

ಮೂರು ದಿನ ಕಾಲುವೆ ತೋಡುವ ಕೆಲಸದಲ್ಲಿ ಗುತ್ತಿಗೆದಾರ ಮಗ್ನನಾಗಿದ್ದ. ಆತಂಕಗಳು ನಿವಾರಣೆ ಆದವು ಎಂದು ನಿಟ್ಟುಸಿರುವ ಬಿಡುವ ವೇಳೆಗೆ ನಾಲ್ಕಾರು ಮಂದಿ ರೈತರು ಹೋಗಿ ಕಾಮಗಾರಿಗೆ ತಡೆ ಮಾಡಿ  ಜೆಸಿಬಿ ಯಂತ್ರವ ವಾಪಸ್ಸು ಕಳಿಸಿದ್ದಾರೆ. ಇದು ಸರಿಯಾದ ನಡವಳಿಕೆಯಲ್ಲ.

ಈಗಾಗಲೇ ಪರಿಹಾರ ತೆಗೆದುಕೊಂಡ ರೈತರ ಭೂಮಿಗಳು ಜಲಸಂಪನ್ಮೂಲ ಇಲಾಖೆ ಸುಪರ್ದಿಗೆ ಒಳ ಪಡುತ್ತವೆ. ಹೆಚ್ಚುವರಿ ಪರಿಹಾರದ ಬೇಡಿಕೆ ಇದ್ದರೆ ನ್ಯಾಯಾಲಯದ ಮೊರೆ ಹೋಗಲಿ. ಇದಕ್ಕೆ ಯಾರ ಅಭ್ಯಂತರವೂ ಇಲ್ಲ.  ಇಂತಹ ನಡೆಗಳು ಪ್ರಜಾಸತ್ತಾತ್ಮಕ ಆಶಯಗಳಿಗೆ ವಿರುದ್ದವಾಗಿದೆ.

ಸ್ವಾದೀನ ಪಡಿಸಿಕೊಂಡ ಜಮೀನುಗಳಲ್ಲಿ  ಕಾಮಗಾರಿ ನಡೆಯುವಂತೆ ನೋಡಿಕೊಳ್ಳುವುದು ಸಂಬಂಧಿಸಿದ ಜಿಲ್ಲಾಡಳಿತ ಹಾಗೂ ಅಲ್ಲಿನ ರಕ್ಷಣಾ ಇಲಾಖೆ ಕರ್ತವ್ಯ. ರಾಜ್ಯಸರ್ಕಾರ ಕೂಡಲೇ ಕಂದಾಯ ಹಾಗೂ ರಕ್ಷಣಾ ಇಲಾಖೆ ಉನ್ನತ ಅ„ಕಾರಿಗಳಿಗೆ ನಿರ್ದೇಶನ ನೀಡಿ ಕಾಮಗಾರಿ ನಿರ್ವಹಿಸಲು ಅಡೆತಡೆಗಳಾಗದಂತೆ ನೋಡಿಕೊಳ್ಳಬೇಕು. ರೈತರ ಮನವೊಲಿಸುವ ನಿಟ್ಟಿನಲ್ಲಿ ಯಶ ಸಾ„ಸಬೇಕು. ಯೋಜನೆ ಶೀಘ್ರ ಪೂರ್ಣಗೊಳ್ಳಲು ಬದ್ದತೆ ಪ್ರದರ್ಶಿಸಬೇಕೆಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.

ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಟಿ.ನುಲೇನೂರು ಎಂ.ಶಂಕರಪ್ಪ, ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‍ಬಾಬು, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಸಜ್ಜನಕೆರೆ ರೇವಣ್ಣ, ಕುರುಮರಡಿಕೆರೆ ಹನುಮಂತರೆಡ್ಡಿ, ಕಮ್ಯನಿಸ್ಟ್ ಪಕ್ಷದ ಸುರೇಶ್‍ಬಾಬು,  ಚಿಕ್ಕಪ್ಪನಹಳ್ಳಿ ಷಣ್ಮುಖ, ಎಸ್‍ಯುಸಿಐ ಸಂಚಾಲಕ ರವಿಕುಮಾರ್, ರಾಜಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!