Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಸಂಶೋಧಕರು ಹಂಪಿ ವಿಶ್ವವಿದ್ಯಾನಿಲಯಕ್ಕೆ ಸ್ಪರ್ಧೆ ನೀಡುವವರು : ಡಾ.ಎಸ್.ವೈ.ಸೋಮಶೇಖರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಆ.19) : ಅನೇಕ ಆಕರಗಳನ್ನು ಸಂಗ್ರಹಿಸಿ ಒಂದು ಕಡೆ ತರುವ ಪ್ರಯತ್ನ ಕೃತಿಯಲ್ಲಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಎಸ್.ವೈ.ಸೋಮಶೇಖರ್ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿ ಸಿ.ಎಂ.ತಿಪ್ಪೇಸ್ವಾಮಿರವರ ರಕ್ಕಸದಂಗಡಿ ಕದನ ಕೃತಿಯನ್ನು ಡಿ.ಡಿ.ಪಿ.ಐ. ಕಚೇರಿಯ ಎಸ್.ಎಸ್.ಕೆ. ಸಭಾಂಗಣದಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಚಿತ್ರದುರ್ಗ ಒಂದು ಬಗೆಯಲ್ಲಿ ಸಂಶೋಧನೆಯ ತಾಣ. ಹಂಪಿ ವಿಶ್ವವಿದ್ಯಾನಿಲಯಕ್ಕೆ ಸ್ಪರ್ಧೆ ನೀಡುವವರೆಂದರೆ ಚಿತ್ರದುರ್ಗದ ಸಂಶೋಧಕರು. ಅತಿ ಹೆಚ್ಚು ಪಿ.ಹೆಚ್.ಡಿ. ಪಡೆದವರು ಚಿತ್ರದುರ್ಗ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ.

ರಕ್ಕಸದಂಗಡಿ ಯುದ್ದ ನಿರ್ಣಾಯಕ. 333 ವರ್ಷಗಳ ಕಾಲ ವಿಜಯನಗರದಲ್ಲಿ ಅರಸರು ಆಳ್ವಿಕೆ ನಡೆಸಿದ್ದಾರೆ. 92 ಪುಟಗಳ ಈ ಕೃತಿಯಲ್ಲಿ ವೈವಿದ್ಯಮಯ ಆಕರಗಳಿವೆ. ರಕ್ಕಸಗಿ ಮತ್ತು ತಂಗಡಗಿ ಎರಡು ಗ್ರಾಮಗಳ ವಿಷಯಕ್ಕನುಗುಣವಾಗಿ ರಾಮರಾಯನ ಹಿನ್ನೆಲೆಯನ್ನು ಕಟ್ಟಿಕೊಡಲಾಗಿದೆ ಎಂದು ತಿಳಿಸಿದರು.

ರಕ್ಕಸಗಿ ತಂಗಡಗಿ ಯುದ್ದಕ್ಕೆ ಭೂಮಿಕೆಯಾಗಿ ಹಿಂದಿನ ಇತಿಹಾಸವನ್ನು ಕೃತಿಯಲ್ಲಿ ನೋಡಬಹುದಾಗಿದೆ. ವಿಜಯನಗರ, ಶಾಹಿಸುಲ್ತಾನರ ಯುದ್ದಗಳು ಮುಖಾಮುಖಿಯಾಗಿ ನಡೆದಿಲ್ಲ. ಸಿಡಿಮದ್ದನ್ನು ಹದಿನಾಲ್ಕನೆ ಶತಮಾನದಲ್ಲಿ ಪ್ರಯೋಗಿಸಲಾಯಿತು. ವಿಜಯನಗರಕ್ಕಿಂತ ಮುಂಚೆಯೇ ವಿರುಪಾಕ್ಷ ದೇವಾಲಯವಿತ್ತು ಹೀಗೆ ಅನೇಕ ಅಂಶಗಳು ಕೃತಿಯಲ್ಲಿವೆ. ಒಟ್ಟಾರೆ ಇದೊಂದು ಒಳ್ಳೆಯ ಪುಸ್ತಕ. ಯುದ್ದದ ಎಲ್ಲಾ ಬಗೆಯ ಶಾಸನ, ಸಾಹಿತ್ಯ, ಆಕರ, ಅಧ್ಯಯನ ಬಖೈರನ್ನು ಸಿ.ಎಂ.ತಿಪ್ಪೇಸ್ವಾಮಿ ಸಂಗ್ರಹಿಸಿ ಬರಹದ ಮೂಲಕ ಕೃತಿಯಲ್ಲಿ ಕೊಟ್ಟಿರುವುದು ಒಂದು ವಿಶೇಷ ಎಂದು ಗುಣಗಾನ ಮಾಡಿದರು.

ಇತಿಹಾಸ ಸಂಶೋಧಕರ ಡಾ.ಬಿ.ರಾಜಶೇಖರಪ್ಪ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಲೇಖಕ ಕ್ಷೇತ್ರ ಕಾರ್ಯ ಮಾಡಿದಾಗ ಕೃತಿಗೆ ಬಲ ತುಂಬುವುದರ ಜೊತೆಗೆ ಇತಿಹಾಸ ಸಂಶೋಧನೆಗೆ ದೃಢತೆ ತಂದುಕೊಡುತ್ತದೆ. ಈ ನಿಟ್ಟಿನಲ್ಲಿ ಹೊಸಬರಾಗುತ್ತಾರೆ ಎಂದು ಹೇಳಿದರು.

ಭಾರತೀಯ ಜನ ಇತಿಹಾಸವೆಂದರೆ ಇಷ್ಟ ಪಡುತ್ತಿರಲಿಲ್ಲ. ಪುರಾಣೀಕರಣಗೊಳಿಸಿ ಹೇಳಿದಾಗ ಕುತೂಹಲದಿಂದ ಕೇಳುತ್ತಾರೆ. ಕೃತಿಕಾರ ಸಿ.ಎಂ.ತಿಪ್ಪೇಸ್ವಾಮಿ ವೈಯಕ್ತಿಕವಾಗಿ ಏನು ಸಂಶೋಧನೆ ಮಾಡಿಲ್ಲ ಎಂದು ಬರಹದಲ್ಲಿ ಹೇಳಿಕೊಂಡಿದ್ದಾರಾದರೂ ಇರುವುದನ್ನೆ ಅಚ್ಚುಕಟ್ಟಾಗಿ ಪೋಣಿಸಿ ಇತಿಹಾಸದ ಯಾವ ವಿವರವನ್ನು ಬಿಡದೆ ಚೌಕಟ್ಟಿನಲ್ಲಿ ಸೇರಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತ್ಯ, ಇತಿಹಾಸವನ್ನು ಸಮಾನ ಅಭಿರುಚಿಯಲ್ಲಿ ಅಧ್ಯಯನ ಮಾಡಬೇಕು. ಸಾಹಿತ್ಯ ಸದಾ ಅರ್ಥ ಸಾಧ್ಯತೆಗೆ ತೆರೆದುಕೊಂಡಿರುತ್ತದೆ. ಲೇಖಕ ಕ್ಷೇತ್ರ ಕಾರ್ಯ ಮಾಡಿದಾಗ ಇತಿಹಾಸಕ್ಕೆ ಬೆಲೆ. ಸಾಹಿತ್ಯದ ಮನಸ್ಸನ್ನು ಮುದ ಹದಗೊಳಿಸುತ್ತದೆ. ಇತಿಹಾಸ, ಸಾಹಿತ್ಯ ಪರಸ್ಪರ ಪೂರಕ ಎಂದರು.
ರಕ್ಕಸದಂಗಡಿ ಕೃತಿಗೆ ಮುನ್ನುಡಿ ಬರೆದಿರುವ ಇತಿಹಾಸ ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಗೋಪಾಲಕೃಷ್ಣರಾವ್ ಮಾತನಾಡಿ ತಾಳಿಕೋಟೆ ಯುದ್ದ ಘನಘೋರವಾಗಿತ್ತು ಎನ್ನುವುದನ್ನು ಸಿ.ಎಂ.ತಿಪ್ಪೇಸ್ವಾಮಿ ತಮ್ಮ ಬರಹದಲ್ಲಿ ಚಿತ್ರಿಸಿದ್ದಾರೆಂದು ಪ್ರಶಂಶಿಸಿದರು.

ಕೃತಿಕಾರ ಸಿ.ಎಂ.ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ರಕ್ಕಸದಂಗಡಿ ಕೃತಿಯನ್ನು ರಚಿಸಲು ವರ್ಷಗಟ್ಟಲೆ ಸಾಕಷ್ಟು ಕೆಲಸ ಮಾಡಬೇಕಾಯಿತು. ಎಲ್ಲೆಲ್ಲಿ ಏನೇನು ನಡೆಯಿತು ಎನ್ನುವುದನ್ನು ಕ್ಷೇತ್ರ ಸುತ್ತಾಡಿ ಮಾಹಿತಿ ಸಂಗ್ರಹಿಸಿದ್ದೇನೆ. ಸ್ವಂತಕ್ಕೇನು ಸಂಶೋಧನೆ ಮಾಡಿಲ್ಲ. ಅನೇಕರ ಸಂಶೋಧನೆಗಳನ್ನು ಓದಿ ವಿಚಾರ ತಿಳಿದುಕೊಂಡು ರಕ್ಕಸದಂಗಡಿ ಕೃತಿಗೆ ಹೊರ ರೂಪ ಕೊಟ್ಟಿದ್ದೇನಷ್ಟೆ ಎಂದು ಹೇಳಿದರು.
ವಿನಾಯಕ ಡಿಜಿಟಲ್‍ನ ಕಾರ್ತಿಕ್ ವೇದಿಕೆಯಲ್ಲಿದ್ದರು.

ಶಿಕ್ಷಕ ಕೆ.ಕರಿಬಸಪ್ಪ ಪ್ರಾರ್ಥಿಸಿದರು. ನಿವೃತ್ತ ಬಿ.ಇ.ಓ. ತಿಪ್ಪೇಸ್ವಾಮಿ ಸ್ವಾಗತಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕ ಟಿ.ಪಿ.ಉಮೇಶ್ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕರ್ನಾಟಕದಲ್ಲಿಯೇ ತೀರ್ಥಹಳ್ಳಿಯಲ್ಲಿ ಬೆಳೆಯುವ ಅಡಿಕೆ ಬೆಸ್ಟ್ : ಸಂಶೋಧನೆಯಲ್ಲಿ ಬಯಲಾಯ್ತು ಸತ್ಯ

  ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅಡಿಕೆಯನ್ನು ಬೆಳೆಯುತ್ತಾರೆ. ಆದರೆ ರಾಜ್ಯದೆಲ್ಲೆಡೆ ಆಲ್ಮೋಸ್ಟ್ ಎಲ್ಲಾ ಜಿಲ್ಲೆಯಲ್ಲೂ ಅಡಿಕೆ ತೋಟವನ್ನು ಮಾಡಿರುತ್ತಾರೆ. ಆದರೆ ಅಡಿಕೆಯ ಗುಣಮಟ್ಟದ ವಿಚಾರಕ್ಕೆ ಬಂದರೆ ತೀರ್ಥಹಳ್ಳಿಯ ಅಡಿಕೆ ಉತ್ತಮ ಎನ್ನಲಾಗುತ್ತದೆ. ಕೃಷಿ

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..!

ಅಕ್ಷಯ ತೃತೀಯಕ್ಕೆ ಚಿನ್ನದ ಬೆಲೆ ಬಲು ದುಬಾರಿ.. ಏರುತ್ತಲೆ ಇದೆ ದರ..! ಬಂಗಾರ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಬಂಗಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರಿಗೂ ಆಸೆ‌. ಆದರೆ ಇತ್ತಿಚಿನ ದಿನಗಳಲ್ಲಿ ಬಂಗಾರವನ್ನು ಮಧ್ಯಮವರ್ಗದವರು ಮುಟ್ಟುವುದಕ್ಕಾದರೂ ಸಾಧ್ಯವ..?

ಹಸಿಮೆಣಸಿನಕಾಯಿ ಗ್ಯಾಸ್ಟ್ರಿಕ್ ಅಲ್ಲ.. ಇದರಿಂದ ಇದೆ ಅನೇಕ ಲಾಭಗಳು

ಸುದ್ದಿಒನ್ : ಹಸಿರು ಮೆಣಸಿನಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅರೋಗ್ಯದ ದೃಷ್ಟಿಯಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ. ಹಸಿರು ಮೆಣಸು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿ ಸುಧಾರಿಸುತ್ತದೆ. ಕಣ್ಣಿನ ಸಮಸ್ಯೆಗಳನ್ನು

error: Content is protected !!