ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ,(ಜು.24) : ನಗರದಲ್ಲಿ ಬೀದಿ ಬೀದಿಗಳಲ್ಲಿ ಓಡಾಡುತ್ತಿರುವ ಗೋವುಗಳ ರಕ್ಷಣೆ ಮಾಡುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ನಗರಸಭೆಯ ಪೌರಾಯುಕ್ತರಿಗೆ ಮನವಿ ಮಾಡಿದೆ.
ವಿಶ್ವ ಹಿಂದೂ ಪರಿಷತ್-ಬಜರಂಗದಳ ವತಿಯಿಂದ ಚಿತ್ರದುರ್ಗ ನಗರದಲ್ಲಿ ಬೀದಿ ಬೀದಿಗಳಲ್ಲಿ ಓಡಾಡುತ್ತಿರುವ ಮತ್ತು ಬೀದಿ ಬೀದಿಗಳಲ್ಲಿ ಮಲಗಿರುವ ಗೋವುಗಳ ರಕ್ಷಣೆ ಮತ್ತು ಅವುಗಳ ಸಂರಕ್ಷಣೆ ಮಾಡುವ ಜವಾಬ್ದಾರಿಯನ್ನು ನಗರಭೆಯ ವತಿಯಿಂದ ರಕ್ಷಿಸಿ ಗೋ ಮಾಲೀಕರಿಗೆ ಒಪ್ಪಿಸಿ, ಮಾಲೀಕರುಗಳು ಸಿಗದಿದ್ದ ಪಕ್ಷದಲ್ಲಿ ಗೋಶಾಲೆಗೆ ಕಳುಹಿಸುವ ವ್ಯವಸ್ಥೆಯನ್ನು ಮಾಡಬೇಕು. ಮತ್ತು ಗೋವುಗಳನ್ನು ರಕ್ಷಣೆ ಮಾಡುವುದು ನಮ್ಮ-ನಿಮ್ಮ ಆಧ್ಯ ಕರ್ತವ್ಯವವಾಗಿರುತ್ತದೆ. ಗೋವುಗಳು, ಚಿತ್ರದುರ್ಗ ನಗರದಲ್ಲಿ ಎಲ್ಲಿ ಬೇಕೆಂದರಲ್ಲಿ ನಡು ರಸ್ತೆಯ ಬದಿಯಲ್ಲಿ ಮಲಗುವುದು ಮತ್ತು ಓಡಾಡು ಮಾಡುತ್ತಿರುವುದರಿಂದ ವಾಹನ ಚಾಲಕರಿಗೆ, ಓಡಾಡುವವರಿಗೆ ತೊಂದರೆಯಾಗಿರುತ್ತದೆ. ತಾವುಗಳು ದಯಮಾಡಿ ತುರ್ತಾಗಿ ಗೋವುಗಳನ್ನು ರಕ್ಷಣೆ ಗೋವುಗಳ ಮಾಲೀಕರಿಗೆ ಅಥವಾ ಗೋಶಾಲೆಗೆ ಬಿಡುವಂತೆ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ನಗರ ಗೋರಕ್ಷ ಪ್ರಮುಖ ಕಿಶೋರ್, ರಂಗನಾಥ್, ತಿಪ್ಪೇಶ್, ಗೌತಮ್ಮ ಸೇರಿದಂತೆ ಇತರರು ಭಾಗವಹಿಸಿದ್ದರು.