ನವದೆಹಲಿ: ಗಣರಾಜ್ಯೋತ್ಸವ ಆಚರಣೆ ಹತ್ತಿರ ಬರುತ್ತಿರುವಾಗಲೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನ ಹೊರ ತಂದಿದೆ. ಇನ್ಮುಂದೆ ಗಣರಾಜ್ಯೋತ್ಸವವನ್ನ ಜನವರಿ 23 ರಿಂದಲೇ ಆಚರಿಸಲು ನಿರ್ಧರಿಸಿದೆ.
ದೇಶದಲ್ಲಿ ಈ ಹಿಂದೆ ಗಣರಾಜ್ಯೋತ್ಸವದ ಆಚರಣೆಗಳು ಜನವರಿ 24 ರಿಂದ ಆರಂಭವಾಗುತ್ತಿದ್ದವು. ಆದರೆ ಇನ್ಮುಂದೆ ಅದು 23 ರಿಂದಲೇ ಅಂದ್ರೆ ಒಂದು ದಿನ ಮುಂಚಿತವಾಗಿಯೇ ಶುರುವಾಗಲಿದೆ. ಈ ನಿರ್ಧಾರಕ್ಕೆ ಬರಲು ಕಾರಣ ಸುಭಾಷ್ ಚಂದ್ರ ಬೋಸ್.
ಹೌದು, ಗಣರಾಜ್ಯೋತ್ಸವ ಆಚರಣೆಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನವನ್ನು ಆಚರಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಈ ನಿರ್ಧಾರವನ್ನ ತೆಗೆದುಕೊಂಡಿದೆ. ಜನವರಿ 23 ರಂದು ಸುಭಾಷ್ ಚಂದ್ರ ಬೋಸ್ ಅವರ ಹುಟ್ಟಿದ ದಿನವಾಗಿದೆ. ಆ ದಿನವನ್ನು ಗಣರಾಜ್ಯೋತ್ಸವ ಆಚರಣೆಗೆ ಜೊತೆಗೆ ಆಚರಿಸಲಾಗುತ್ತದೆ.