ನವದೆಹಲಿ: ಗಣರಾಜಗಯೋತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಗಣರಾಜ್ಯೋತ್ಸವ ಆಚರಣೆ ನೋಡಲು ದೇಶದ ಜನ ಖುಷಿಯಿಂದ, ಭಕ್ತಿಯಿಂದ ಕಾಯ್ತಿರುತ್ತಾರೆ. ಇದೀಗ ಅದರ ಸಿದ್ಧತೆ ಬಗ್ಗೆಯೂ ಅಷ್ಟೇ ಕುತೂಹಲ ಇರುತ್ತೆ. ಈಗಾಗಲೇ ದೆಹಲಿಯಲ್ಲಿ ಗಣರಾಜ್ಯೋತ್ಸವ ಪಥದ ಸಿದ್ಧತೆ ನಡೆಯುತ್ತಿದೆ.
ಸೈನಿಕರು ತಮ್ಮ ಪೂರ್ಣ ಉಡುಗೆಯಲ್ಲಿ ರಾಜಪಥದಲ್ಲಿ ಪರೇಡ್ ಗಾಗಿ ಪೂರ್ವಾಭ್ಯಾಸ ನಡೆಸಿದ್ದಾರೆ. ಹೆಲಿಕಾಪ್ಟರ್ ಗಳು ಕೂಡ ರಾಜಪಥದ ಮೇಲೆ ಹಾರಾಡಿವೆ. ನಾಲ್ಕು ಮಿಗ್ 17 ಹೆಲಿಕಾಪ್ಟರ್ ಗಳು ವೈನ್ ಗ್ಲಾಸ್ ರಚನೆಯಲ್ಲಿ ಹಾರಾಟ ನಡೆಸಿವೆ.
ಇನ್ನು ಪ್ರತಿ ವರ್ಷ ಜನವರಿ 24 ರಿಂದ ಗಣರಾಜ್ಯೋತ್ಸವದ ಸಿದ್ಧತೆ ಆರಂಭವಾಗುತ್ತಿತ್ತು. ಆದ್ರೆ ಇಂದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನದ ನೆನಪಿಗಾಗಿ ಇಂದಿನಿಂದಲೇ ಗಣರಾಜ್ಯೋತ್ಸವದ ಸಿದ್ಧತೆ ಆರಂಭವಾಗಿದೆ. ಈ ಹಿನ್ನಲೆ ಇಂದು ಸಂಜೆ 6 ಗಂಟೆಗೆ ಇಂಡಿಯಾ ಗೇಟ್ ನಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನ ಅನಾವರಣಗೊಳಿಸಲಿದ್ದಾರೆ.