ಚಿತ್ರದುರ್ಗ : ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 74 ನೇ ಗಣರಾಜ್ಯ ದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸಂವಿಧಾನ ನಡೆದು ಬಂದು ದಾರಿ, ದೇಶ ಭಕ್ತಿ ಸಾರುವ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ದಿನಾಚರಣೆಯ ಅಂಗವಾಗಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ವಿಜಯ್ ಕುಮಾರ್ ಮಾತನಾಡುತ್ತಾ, ದೇಶದ ಮೂಲೆ ಮೂಲೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವುದರ ಮೂಲಕ ಈ ರಾಷ್ಟ್ರೀಯ ಹಬ್ಬವನ್ನು ಶ್ರದ್ದಾ, ಭಕ್ತಿಯಿಂದ ಆಚರಿಸಲಾಗುತ್ತದೆ. ಸಂವಿಧಾನ ರಚನೆ ಮತ್ತು ಜಾರಿಗೆ ತರುವಲ್ಲಿ ಹಲವಾರು ಮಹನೀಯರುಗಳು ತಮ್ಮ ಅಮೂಲ್ಯವಾದ ಸಮಯವನ್ನು ವ್ಯಯಿಸಿದ ಫಲವನ್ನು ನಾವು ನೀವುಗಳೆಲ್ಲ ಉಣ್ಣುತ್ತಿದ್ದೇವೆ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದರು.
ಸಂಸ್ಥೆಯ ಶಿಕ್ಷಕ ಎನ್ ಜಿ ತಿಪ್ಪೇಸ್ವಾಮಿ ಮಾತನಾಡುತ್ತಾ, ಸಂವಿಧಾನ ಇದು ಕೇವಲ ಸತ್ತವರ ಚರಿತ್ರೆಯಾಗಿರದೇ, ಬದುಕಿರುವವರ ಜೀವಂತ ದಾಖಲೆಯಾಗಿದೆ. ಪ್ರಪಂಚದಲ್ಲಿ 180 ರಾಷ್ಟ್ರಗಳಲ್ಲಿ ಸ್ವಂತ ಸಂವಿಧಾನ ಹೊಂದಿದ್ದು, ಪ್ರಜಾಪ್ರಭುತ್ವ ಹೊಂದಿರುವ ದೇಶಗಳಲ್ಲಿ ಭಾರತದ ಸಂವಿಧಾನ ಬೃಹತ್ ಮತ್ತು ಲಿಖಿತ ಸಂಧಾನ, ಎನ್ನುವುದು, ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.
ಸಂಸ್ಥೆಯ ಶಿಕ್ಷಕಿ ರೇಖಾ ಪಟ್ಟಾಣ್ ಮಾತನಾಡುತ್ತಾ, ಸಂವಿಧಾನ ರಚನೆಯಲ್ಲಿ ಅಂಬೇಡ್ಕರವರ ಕೊಡುಗೆ ಅನನ್ಯ, ಹಾಗಾಗಿ ಅವರನ್ನು ಭಾರತದ ಸಂವಿಧಾನದ ಪಿತಾಮಹ ಎನ್ನುತ್ತಾರೆ. ಸಂಧಾನ ರಚನೆಯಾಗಲು 2 ವರ್ಷ 11 ತಿಂಗಳು 18 ದಿನಗಳ ಸುದೀರ್ಘ ಕಾಲ ತೆಗೆದು ಕೊಂಡು ಅಂತಿಮವಾಗಿ ಜನವರ 26 1950 ರಂದು ಜಾರಿಗೆ ಬಂತು. ಭಾರತಕ್ಕೆ ಸ್ವತಂತ್ರ ಸಿಕ್ಕಿದ್ದು, 15 ಆಗಷ್ಟ್ 1947 ಆದರೂ ನಮ್ಮದೇ ಅಧಿಕೃತ ಆಳ್ವಿಕೆ ಪ್ರಾರಂಭವಾಗಿದ್ದು, ಸಂವಿಧಾನ ಜಾರಿಗೆ ಬಂದಾದ ಮೇಲೆ, ಎಂದರು.
ಕಾರ್ಯಕ್ರಮದ ಅಂಗವಾಗಿ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಕ್ಕಳಾದ ಹರಿಪ್ರಿಯ ಮತ್ತು ಪ್ರಜ್ವಲ್ ನಿರೂಪಿಸಿದರು, ಅಕ್ಷರ ಸ್ವಾಗತಿಸಿದರು, ಸಯದ ಅನಮ್ ವಂಧಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ ಪೃಥ್ವೀಶ್ ಎಸ್, ಎಂ. ಸಂಸ್ಥೆಯ ಆಡಳಿತಾಧಿಕಾರಿ ಡಾ|| ಸ್ವಾಮಿ ಕೆ ಎನ್. ಐಸಿಎಸ್ಇ ಪ್ರಾಂಶುಪಾಲರಾದ ಬಸವರಾಜಯ್ಯ ಪಿ. ಲಕ್ಮಿ ಜಾಧವ್ , ಶ್ವೇತಾ ಸಿ, ಚೈತ್ರ ಸಿ ಎನ್ ಮತ್ತು ದಿವ್ಯಾಕೆ ಎಸ್ ಹಾಗೂ ಮಹೇಶ್ ಪಿ ಯು ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಹಾಗೂ ಸಂಸ್ಥೆಯ ಬೋಧಕ/ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.