ಟರ್ಕಿಯಲ್ಲಿಮತ್ತಷ್ಟು ತೀವ್ರಕರ ಭೂಕಂಪ ಸಂಭವಿಸಿದೆ. ಪದೇ ಪದೇ ಭೂಕಂಪ ಸಂಭವಿಸುತ್ತಿದ್ದು, ಕಟ್ಟಡಗಳು ಕುಸಿತಾ ಇದೆ, ರಸ್ತೆಗಳು ಬಾಯ್ಬಿಡ್ತಾ ಇದೆ. ಜನ ಜೀವ ಕೈನಲ್ಲಿಡಿದುಕೊಂಡು, ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಸದ್ಯ ರಕ್ಷಾಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಟರ್ಕಿ, ಸಿರಿಯಾದ ಪರಿಸ್ಥಿತಿಗೆ ಭಾರತ, ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳು ಮರುಗಿವೆ. ಟರ್ಕಿಯ ಜೊತೆಗೆ ನಾವಿದ್ದೀವಿ ಅಂತ ಬೆಂಬಲ ಸೂಚಿಸಿವೆ. ಈಗಾಗಲೇ ಭೂಕಂಪದ ತೀವ್ರತೆಗೆ ಎರಡು ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ.
ಟರ್ಕಿಯಲ್ಲಿ ಆಗಾಗ ಭೂಕಂಪನವಾಗುತ್ತಲೇ ಇರುತ್ತದೆ. ಈ ದೇಶ ಬವೂದೋಷ ಇರುವಂತ ರೇಖೆಗಳ ಮೇಲೆ ಕುಳಿತಿದೆ. ಇದೇ ಕಾರಣಕ್ಕೆ ಇಲ್ಲಿ ಆಗಾಗ ಭೂಕಂಪ ಸಂಭವಿಸುತ್ತೆ ಎನ್ನಬಹುದು. ಈ ಬಾರಿ ಉಂಟಾಗಿರುವ ಭೂಕಂಪನವನ್ನು ಟರ್ಕಿಯ ಅಧ್ಯಕ್ಷ ಅತಿದೊಡ್ಡ ಭೂಕಂಪ ಎಂದು ಕರೆದಿದ್ದಾರೆ.