ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್ ಶೀಟ್ ನಲ್ಲಿ ಪವಿತ್ರಾ ಗೌಡಗೆ ಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿಯನ್ನು ಶೆಡ್ ನಲ್ಲಿ ಕೂಡಿ ಹಾಕಿದ್ದಾಗ ಪವಿತ್ರಾ ಗೌಡ ಅಲ್ಲಿಗೆ ಹೋಗಿದ್ದರು. ನಾನು ಕೇವಲ ಚಪ್ಪಲಿಯಲ್ಲಿ ಹೊಡೆದಿದ್ದೆ ಎಂದಿದ್ದರು. ಇದೀಗ ಚಪ್ಪಲಿಯೇ ಪವಿತ್ರಾ ಗೌಡಗೆ ಸಂಕಷ್ಟ ತಂದೊಡ್ಡಿದೆ.
ಪ್ರಕರಣ ನಡೆದಾಗ ತನಿಖೆ ನಡೆಸುತ್ತಿದ್ದ ಪೊಲೀಸರು ಪವಿತ್ರಾ ಗೌಡ ಮನೆಗೆ ತೆರಳಿ ಚಪ್ಪಲಿಯನ್ನು ವಶಕ್ಕೆ ಪಡೆದಿದ್ದರು. ಪರೀಕ್ಷೆಗೆ ಕಳುಹಿಸಿದಾಗ ಅದರಲ್ಲಿ ರಕ್ತದ ಮಾದರಿ ಸಿಕ್ಕಿದೆ. ರಕ್ತದ ಮಾದರಿ ರೇಣುಕಾಸ್ವಾಮಿಯದ್ದೇ ಎಂದು ಕನ್ಫರ್ಮ್ ಆಗಿದೆ. ಇದೇ ಪವಿತ್ರಾ ಗೌಡ ವಿರುದ್ಧ ಪ್ರಬಲ ಸಾಕ್ಷಿಯಾಗಲಿದೆ ಎನ್ನಲಾಗಿದೆ. ಇತರೆ ಆರೋಪಿಗಳು ಕೂಡ ಪವಿತ್ರಾ ಗೌಡ ಶೆಡ್ ಗೆ ಬಂದಾಗ ಏನು ಮಾಡಿದರು ಎಂಬುದನ್ನು ತಿಳಿಸಿದ್ದಾರೆ. ರೇಣುಕಾಸ್ವಾಮಿ ಹೊಡೆಯುವಾಗ ಆ ಜಾಗದಲ್ಲಿ ಆಕ್ರೋಶದ ಧ್ವನಿಯಲ್ಲಿ ಕಿರುಚುತ್ತಾ ಇದ್ದರಂತೆ.
ಬಿಡಬೇಡಿ ಅವನನ್ನು.. ಸಾಯಿಸಿ ಎಂದು ಜೋರಾಗಿ ಚೀರಿದ್ದರಂತೆ. ಈ ಮೂಲಕ ರೇಣುಕಾಸ್ವಾಮಿ ಕೊಲೆಗೆ ಪ್ರಚೋದನೆ ಕೊಟ್ಟಿದ್ದೆ ಪವಿತ್ರಾ ಗೌಡ ಎನ್ನಲಾಗಿದೆ. ಹೀಗಾಗಿ ಪ್ರಕರಣ ಇನ್ನಷ್ಟು ಸ್ಟ್ರಾಂಗ್ ಆಗಿದೆ. ರೇಣುಕಾಸ್ವಾಮಿಯನ್ನು ಬಿಡಬೇಡಿ ಸಾಯಿಸಿ ಎಂದು ಅಂದು ಪ್ರಚೋದನೆ ನೊಇಡೊದ ಹೇಳಿಕೆ ಆಧಾರದ ಮೇಲೆ ಪವಿತ್ರಾ ಗೌಡರನ್ನ ಎ1 ಆರೋಪಿಯನ್ನಾಗಿ ಮಾಡಲಾಗಿದೆ. ಪವಿತ್ರಾ ಗೌಡ ಜೈಲಿನಿಂದ ಬೇಗ ಹೊರಗೆ ಬರಬೇಕೆಂದು ಈಗಾಗಲೇ ಜಾಮೀನಿಗೆ ಅರ್ಜಿ ಹಾಕಿದ್ದರು. ಆದ್ರೆ ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು.