ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಎ2 ಆರೋಪಿಯಾಗಿದ್ದಾರೆ. ಸದ್ಯ ಸಾಕ್ಷಿಗಳ ವಿಚಾರಣೆ ಇಂದಿನಿಂದ ಆರಂಭವಾಗಿದೆ. ಬೆಂಗಳೂರಿನ 64ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ಶುರುವಾಗಿದೆ. ದರ್ಶನ್, ಪವಿತ್ರಾಗೌಡ ಸೇರಿದಂತೆ 7 ಜನ ಆರೋಪಿಗಳು ಕೂಡ ತಮ್ಮ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು. ಇನ್ನುಳಿದ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದು, ನೇರವಾಗಿ ಕೋರ್ಟ್ ಗೆ ಬಂದಿದ್ದರು.
ಇನ್ನು ಚಿತ್ರದುರ್ಗದ ಅನುಕುಮಾರ್ ಕೋರ್ಟ್ ಬಳಿ ಮನವಿಯೊಂದನ್ನ ಮಾಡಿಕೊಂಡರು. ನಮ್ಮ ತಾಯಿ ಆರೋಗ್ಯ ಸರಿಯಿಲ್ಲ. ಹೀಗಾಗಿ ನನ್ನನ್ನು ಚಿತ್ರದುರ್ಗ ಜೈಲಿಗೆ ವರ್ಗಾವಣೆ ಮಾಡು ಎಂದು ಮನವಿ ಮಾಡಿಕೊಂಡರು. ನಿಮ್ಮ ಅರ್ಜಿ ಇನ್ನೂ ವಿಚಾರಣೆಯ ಹಂತದಲ್ಲಿದೆ ಎಂದು ಜಡ್ಜ್ ಕೂಡ ಹೇಳಿದರು. ಇದೇ ವೇಳೆ ಎಸ್ಪಿಪಿ ಸಚಿನ್ ಅವರು ಈ ಕೊಲೆ ಕೇಸ್ ನ ಸಾಕ್ಷಿಗಳಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಮನವಿ ಮಾಡಿಕೊಂಡರು. ಯಾವ ಸಾಕ್ಷಿಗಳಿಗೆ ನೋಟೀಸ್ ನೀಡಿ ವಿಚಾರಣೆಗೆ ಕರೆಸಲಾಗುತ್ತದೆ ಎಂಬುದನ್ನು ನಮಗೂ ತಿಳಿಸಿ, ಸಾಕ್ಷಿಗಳ ಪಟ್ಟಿಯನ್ನು ನೀಡುವಂತೆ ನಟ ದರ್ಶನ್ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಮೊದಲು ಕೊಲೆ ಕೇಸ್ ನ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸಬೇಕು.
ಸಾಕ್ಷಿ ಸಂಖ್ಯೆ 7 ಮತ್ತು 8 ಕ್ಕೆ ಸಮನ್ಸ್ ನೀಡುವಂತೆ ಕೋರ್ಟ್ ಗೆ ಎಸ್‌ಪಿಪಿ ಸಚಿನ್ ಮನವಿ ಮಾಡಿಕೊಂಡರು. ಇಂದಿನಿಂದ ವಿಚಾರಣೆ ಆರಂಭವಾಗಿದ್ದು, ಆರೋಪ ಸಾಬೀತಾಗುವ ಮೇಲೆ ಶಿಕ್ಷೆಯನ್ನು ನಿಗದಿ ಮಾಡಲಾಗುತ್ತದೆ.
