ರೇಣುಕಾಸ್ವಾಮಿ ಕೊಲೆ ಕೇಸ್ : ನವೆಂಬರ್ 10ಕ್ಕೆ ಮುಂದೂಡಿಕೆ

1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಕ್ಕೆ ಸಂಬಂಧಿದಂತೆ ಇಂದು ಎಲ್ಲಾ ಆರೋಪಿಗಳು ಕೋರ್ಟ್ ಗೆ ಹಾಜರಾಗಿದ್ದರು. ಅದರಲ್ಲೂ ಬಿಗಿ ಭದ್ರತೆಯೊಂದಿಗೆ ದರ್ಶನ್ ಅವರನ್ನು ಪೊಲೀಸರು ಕರೆದುಕೊಂಡು ಬಂದಿದ್ದರು. ಎರಡನೇ ಬಾರಿ ಅರೆಸ್ಟ್ ಆದಾಗಿನಿಂದ ಅಂದ್ರೆ 80 ದಿನಗಳಿಂದ ಕಂಪ್ಲೀಟ್ ಆಗಿ ಸೂರ್ಯನ ಕಿರಣವನ್ನ ಕಂಡಿರಲಿಲ್ಲ, ಹೊರಗಿನ ಪ್ರಪಂಚವೂ ತಿಳಿದಿರಲಿಲ್ಲ. ಬಹಳ ದಿನಗಳ ಬಳಿಕ ಕೋರ್ಟ್ ಗೆ ಬರುವುದಕ್ಕಾಗಿ ದರ್ಶನ್ ಹೊರಗೆ ಬಂದಿದ್ದಾರೆ.

ದರ್ಶನ್ ಕೋರ್ಟ್ ಗೆ ಬರ್ತಿದ್ದಾರೆ ಅಂತ ಹೇಳಿದ ಕೂಡಲೇ ಸಾಕಷ್ಟು ಜನ ನೆರೆದಿದ್ದರು. ದರ್ಶನ್ ಗೆ ಮೊದಲೇ ಅಭಿಮಾನಿಗಳ ಸಂಖ್ಯೆ ಜಾಸ್ತಿ ಇದೆ. ಹೀಗಿರುವಾಗ ಬಹಳ ದಿನಗಳ ಬಳಿಕ ದರ್ಶನ್ ಅವರು ಕೋರ್ಟ್ ಗೆ ಬಂದಿದ್ದರು. ಇಂದು ದೋಷಾರೋಪ ಸಲ್ಲಿಕೆಗೆ ಎಲ್ಲಾ ಸಿದ್ಧತೆಯೂ ನಡೆದಿತ್ತು. ಆದರೆ ಕೋರ್ಟ್ ನವೆಂಬರ್ 10ಕ್ಕೆ ಮುಂದೂಡಿಕೆ ಮಾಡಿದೆ. ಆದರೆ ಸಂಜೆ ನಾಲ್ಕು ಗಂಟೆಯ ಮೇಲೆ ಮತ್ತೆ ವಿಚಾರಣೆಗೆ ಬರಬಹುದು ಎಂಬ ಕಾರಣದಿಂದ ಜನರೆಲ್ಲಾ ಅಲ್ಲಿಯೇ ನೆರೆದಿದ್ದಾರೆ. ನೆಚ್ಚಿನ ನಟನನ್ನು ನೋಡುವುದಕ್ಕೆ ಕಾಯುತ್ತಿದ್ದಾರೆ.

ಪವಿತ್ರಾ ಗೌಡ ಕೂಡ ಕೋರ್ಟ್ ಮುಂದೆ ಹಾಜರಾಗಿದ್ದರು. ಬೇರೆ ಕೇಸ್ ಅನ್ನು ಕೈಗೆತ್ತಿಕೊಂಡ ಜಡ್ಜ್ ದರ್ಶನ್, ಪವಿತ್ರಾ ಗೌಡ ಕೇಸನ್ನ ನವೆಂಬರ್ 10ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಜನ ಜಾತ್ರೆಯನ್ನು ಮೀರಿ ಈಗ ದರ್ಶನ್ ಹಾಗೂ ಉಳಿದ ಆರೋಪಿಗಳನ್ನು ಮತ್ತೆ ಜೈಲಿಗೆ ಕರೆದುಕೊಂಡು ಹೋಗಬೇಕಿದೆ. ಹೆಚ್ಚಿನ ಜನ ಸೇರುವ ಆತಂಕ ಇರುವ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಮುಂದಿನ ವಿಚಾರಣೆಗೆ ಹಾಜರುಪಡಿಸಬಹುದು. ಸದ್ಯ ನವೆಂಬರ್ 10ಕ್ಕೆ ಹಾಗೇ ಟೆನ್ಶನ್ ಉಳಿಸಿದೆ ಕೋರ್ಟ್.

Share This Article