Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಸವಣ್ಣನವರಿಗೆ ಸಮಾಜ ಸುಧಾರಣೆ ಪ್ರೇರಣೆ ನೀಡಿದವರೇ ರೇಣುಕಾಚಾರ್ಯರು : ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ

Facebook
Twitter
Telegram
WhatsApp

 

ಮಾಹಿತಿ ಮತ್ತು ಫೋಟೋ ಕೃಪೆ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ,(ಮಾ.05) : ಬಸವಣ್ಣ ಹಾಗೂ ರೇಣುಕಾಚಾರ್ಯರು ಹೇಳಿದ ವಿಚಾರಗಳಲ್ಲಿ ಸಾಮ್ಯತೆ ಇದೆ ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಾಮಾನೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಬಸವಣ್ಣ ಮತ್ತು ರೇಣುಕಾಚಾರ್ಯರು ಹೇಳಿದ ವಿಚಾರಗಳಲ್ಲಿ ಸಾಮ್ಯತೆ ಹೆಚ್ಚಾಗಿದೆ. ರೇಣುಕಾಚಾರ್ಯರು ದಶ ಸೂತ್ರಗಳಲ್ಲಿ ದಯೆ, ಶಮೆ, ಸತ್ಯ, ಕಳ್ಳತನ ಮಾಡದೇ ಇರುವುದು, ಶಿವ ಪೂಜೆ, ದಾನ ಇತ್ಯಾದಿ ವಿಚಾರಗಳನ್ನು ಸಂಸ್ಕøತ ಭೂಯಿಷ್ಟವಾಗಿ ಹೇಳಿದ್ದಾರೆ. ಆದರೆ ಬಸವಣ್ಣ ಅವರು ಅದೇ ವಿಚಾರಗಳನ್ನು, ತತ್ವ, ಸಿದ್ದಾಂತ ಹಾಗೂ ಆದರ್ಶಗಳನ್ನು ಜನರಿಗೆ ಸರಳವಾಗಿ, ಅರ್ಥವಾಗುವಂತೆ ತಿಳಿಸಿದ್ದಾರೆ.

ಬಸವಣ್ಣನವರಿಗೆ ಸಮಾಜ ಸುಧಾರಣೆ ಮಾಡುವಂತಹ ಪ್ರೇರಣೆ ನೀಡಿದವರೇ ರೇಣುಕಾಚಾರ್ಯರು ಎಂದು ಅಭಿಪ್ರಾಯಪಟ್ಟರು.

ಸಮಾಜ ಸುಧಾರಕರು, ಸಂತರು, ದಾರ್ಶನಿಕರು, ಪುಣ್ಯಪುರುಷರು  ತೋರಿಸುವಂತಹ ದಾರಿಯಲ್ಲಿ ನಾವು ನೀವು ಹೋದರೆ, ಮಹನೀಯರ ಆದರ್ಶ ಮತ್ತು ತತ್ವಗಳನ್ನು ಪಾಲನೆ ಮಾಡಿದರೆ ಮಾನವನೂ ಮಹದೇವನಾಗುತ್ತಾನೆ ಎಂಬ ಕಲ್ಪನೆಯನ್ನು ರೇಣುಕಾಚಾರ್ಯರು ತಿಳಿಸಿದ್ದಾರೆ ಎಂದರು.

ಮಾಜಿ ಶಾಸಕ ಎಸ್.ಕೆ.ಬಸರಾಜನ್ ಮಾತನಾಡಿ, ಯಾವುದೇ ಒಂದು ಮಹಾತ್ಮರ ಜಯಂತಿ ಆಚರಣೆ ಮಾಡುವ ಉದ್ದೇಶ ಅವರಲ್ಲಿನ ಸಾಮಾಜಿಕ ಕಳಕಳಿ, ಧರ್ಮದ ಬಗ್ಗೆ ನಿಷ್ಠೆ ಅಂತಹ ವಿಚಾರಗಳನ್ನ ನಾವು ಮತ್ತೆ ಮತ್ತೆ ಮೆಲಕು ಹಾಕುವ ಉದ್ದೇಶದಿಂದ ಜಯಂತಿ ಆಚರಣೆ ಮಾಡುತ್ತೇವೆ.

ರಾಜ್ಯ ಸರ್ಕಾರವು ಸುಮಾರು 45 ಮಹನೀಯರ ಜಯಂತಿಗಳನ್ನು ಆಚರಣೆ ಮಾಡುವುದರ ಮೂಲಕ ಮಹನೀಯರ ತತ್ವ, ಸಿದ್ದಾಂತಗಳನ್ನು ಜನರಿಗೆ ತಿಳಿಸುವ ಕೆಲಸವಾಗುತ್ತಿದೆ. ಮೊದಲಬಾರಿಗೆ ರೇಣುಕಾಚಾರ್ಯರ ಜಯಂತಿ ಯುಗಮಾನೋತ್ಸವನ್ನು ಸರಳವಾಗಿ ಆಚರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದ್ದೂರಿಯಾಗಿ ಭಕ್ತಿಯಿಂದ ಆಚರಿಸೋಣ ಎಂದು ಹೇಳಿದರು.

ಬೃಹನ್ಮಠ ಪದವಿ ಪೂರ್ವ ಕಾಲೇಜು  ಪ್ರಾಚಾರ್ಯ ಎಸ್. ಷಡಾಕ್ಷರಯ್ಯ ಉಪನ್ಯಾಸ ನೀಡಿ, ಸಂತರು, ಮಹನೀಯರು ಸಮಾಜಕ್ಕೆ ನೀಡಿದರುವ ಆದರ್ಶಪ್ರಾಯವಾದ ಚಿಂತನೆ, ತತ್ವ, ಸಿದ್ದಾಂತಗಳನ್ನು ನಾವು ಸಮಾಜಕ್ಕೆ ಅಳವಡಿಸಬೇಕಾಗಿದೆ. ಮನುಷ್ಯ ಯಾವಾಗಲೂ ಒಳ್ಳೆಯ ಗುಣಗಳಿಂದ ನಡೆಯಬೇಕು ಹಾಗೂ ನುಡಿಯಬೇಕು ಎಂಬ ದಾರಿಯನ್ನು ಸಂತರು ನಮಗೆ ತೋರಿಸಿದ್ದಾರೆ ಎಂದರು.

ಸಮಾಜದಲ್ಲಿ ಅಶಾಂತಿ, ನೆಮ್ಮದಿ ಇಲ್ಲ. ಹಾಗಾಗಿ ನಮ್ಮ ಸಮಾಜಕ್ಕೆ ಆಧ್ಯಾತ್ಮಿಕ ಶಾಂತಿಯ ಅವಶ್ಯಕತೆ ಬೇಕಾಗಿದೆ. ಅಂತಹ ಆಧ್ಯಾತ್ಮಿಕ ಶಾಂತಿಯನ್ನು ಜಗದ್ಗುರು ರೇಣುಕಾಚಾರ್ಯರು ನಮಗೆ ನೀಡಿದ್ದಾರೆ. ರೇಣುಕಾಚಾರ್ಯರು ಸಿದ್ದಾಂತ ಶಿಖಾಮಣಿಯಲ್ಲಿ ವೈಜ್ಞಾನಿಕ ವಿಚಾರಗಳನ್ನು ನೀಡಿದ್ದಾರೆ. ಮಾನವ ಪ್ರತಿಯೊಂದು ವಿಚಾರದಲ್ಲಿಯೂ ಯಾವ ರೀತಿಯಾಗಿ ನಡೆದುಕೊಳ್ಳಬೇಕು, ಸತ್ಕಾರ್ಯಗಳನ್ನು ಕೈಗೊಳ್ಳಬೇಕು ಎಂಬ ವಿಚಾರಗಳನ್ನೂ ವೈಜ್ಞಾನಿಕವಾಗಿ ತಿಳಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಕೆ ಮಲ್ಲಿಕಾರ್ಜುನ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್, ಅಖಿಲ ಭಾರತ ವೀರಶೈವ ಸಮಾಜದ ಮಹಡಿ ಶಿವಮೂರ್ತಿ, ಕಾರ್ಯದರ್ಶಿ ಮಹೇಶ್, ಹಿರಿಯ ವಕೀಲ ಕೆ.ಎನ್.ವಿಶ್ವನಾಥಯ್ಯ, ನಿವೃತ್ತ ಪ್ರಾಧ್ಯಾಪಕ ಡಾ.ಪ್ರಭುದೇವ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಚಂದ್ರಶೇಖರ್ ಕಾಂಬ್ಳಿಮಠ್, ಸಾಹಿತಿ ನಿರಂಜನ ದೇವರಮನೆ ಸೇರಿದಂತೆ ವೀರಶೈವ ಲಿಂಗಾಯತ ಸಮಾಜಗಳ ಒಳಪಂಡಗಳ ಮುಖಂಡರಾದ ನಿರ್ಮಲ ಬಸವರಾಜು, ರುದ್ರೇಶ ಎಂ.ಕೆ.ಹಟ್ಟಿ, ಚಿನ್ಮಯಿ, ಬಿ.ಎಂ ಅರುಣ್ ಕುಮಾರ್, ಎಂ. ಶಶಿಧರ್ ಬಾಬು, ಬಿ.ಎಂ ಶರಣಯ್ಯ, ಕೆ.ಸಿ ರುದ್ರೇಶ್, ಲೀಲಾವತಿ ಕುಮಾರಸ್ವಾಮಿ, ಜಿ.ಎಂ ಸುರೇಶ್, ಐ.ಎಂ.ಬಸವರಾಜಯ್ಯ, ಜಯದೇವ್ ಮೂರ್ತಿ, ಕಾರ್ತಿಕ್, ಜೆ.ಆನಂದ್, ಕಿರಣ್ ಕುಮಾರ್, ಬಿ.ಎಂ.ಕರಿಬಸಯ್ಯ, ಎಂ.ವಿ.ಸಿದ್ಧೇಶ್ ಸೇರಿದಂತೆ ಮತ್ತಿತರರು ಇದ್ದರು. ಕೆಪಿಎಂ ಗಣೇಶಯ್ಯ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೊದಲ ಪ್ರಯತ್ನದಲ್ಲೇ ದಾಖಲೆ ಸೃಷ್ಟಿಸಿದ ಪ್ರಿಯಾಂಕಾ : ಗಾಂಧಿ ಕುಟುಂಬದ 10 ನೇ ಸದಸ್ಯೆಯಾಗಿ ಸಂಸತ್ ಪ್ರವೇಶ…!

  ಸುದ್ದಿಒನ್ :  ಎರಡು ದಶಕಗಳ ಹಿಂದೆ ಗಾಂಧಿ-ನೆಹರೂ ಕುಟುಂಬದ ವಾರಸುದಾರೆಯಾಗಿ ರಾಜಕೀಯಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿ ಪ್ರಥಮ ಬಾರಿಗೆ ನೇರ ಚುನಾವಣಾ ಕಣಕ್ಕೆ ಇಳಿದು ದಾಖಲೆ ಸೃಷ್ಟಿಸಿದ್ದಾರೆ. ಅವರು ಕೇರಳದ ವಯನಾಡ್ ಲೋಕಸಭಾ

ಸಿದ್ಧರಾಮಯ್ಯ ಅವರನ್ನು ಕೆಣಕಿದ್ದಕ್ಕೆ ಜನ ತಕ್ಕ ಉತ್ತರ : ಮಾಜಿ ಸಚಿವ ಎಚ್.ಆಂಜನೇಯ

  ಸುದ್ದಿಒನ್, ಚಿತ್ರದುರ್ಗ, ನ. 23 : ಸಿದ್ದರಾಮಯ್ಯ ನಾಡು ಕಂಡ ಅಪರೂಪದ ನಾಯಕ, 40 ವರ್ಷ ನಿಷ್ಕಳಂಕ ರಾಜಕಾರಣ ಮಾಡಿದ ಮುತ್ಸದ್ಧಿ. ಆದರೆ, ಅವರ ಹೆಸರಿಗೆ ಕಳಂಕ ತರಲು ಅನಗತ್ಯವಾಗಿ ಮುಡಾ ವಿಷಯ

ಬಿಜೆಪಿಗೆ ಹೀನಾಯ ಸೋಲು : ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸೋಲು

ಸುದ್ದಿಒನ್, ಬೆಂಗಳೂರು, ನವೆಂಬರ್.23 : ಕರ್ನಾಟಕದಲ್ಲಿ ನಡೆದ ಎಲ್ಲಾ ಮೂರು ವಿಧಾನಸಭಾ ಉಪಚುನಾವಣೆಗಳಾದ ಶಿಗ್ಗಾಂವ್, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಮತದಾರ

error: Content is protected !!