in

ಕಾಂಗ್ರೆಸ್ ಟ್ವೀಟ್ ಗೆ ಶಾಸಕ ರೇಣುಕಾಚಾರ್ಯ ಹೇಳಿದ್ದು ಹೀಗೆ..!

suddione whatsapp group join

ದಾವಣಗೆರೆ: RSS ಬಗ್ಗೆ ಇಂದು ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ತನ್ನ ಆಕ್ರೋಶ ಹೊರ ಹಾಕಿದೆ. ಸಿದ್ದರಾಮಯ್ಯ ಅವರು ಕೂಡ ಆರ್ ಎಸ್ ಎಸ್ ಆಯ ಕಟ್ಟಿನ ಜಾತಿಯವರಿಗೆ ಮಾತ್ರ ನೀಡಿದೆ. ಬೇರೆ ಜಾತಿಯವರಿಗೆ ಯಾಕೆ ಕೊಟ್ಟಿಲ್ಲ ಎಂದಿದ್ದರು. ಈ ಸಂಬಂಧ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನವರು ವಿಕೃತ ಮನಸ್ಥಿತಿಯವರು ಎಂದಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಪ್ರೇಮಿ ಸಂಘಟನೆ. ಇಲ್ಲಿ ಇರುವವರೆಲ್ಲ ದೇಶಪ್ರೇಮಿಗಳು. ದೇಶಪ್ರೇಮಿಗಳನ್ನು ವಿರೋಧ ಮಾಡುವಂತ ಮನಸ್ಥಿತಿ ಇರುವವರು ಯಾವತ್ತಿಗೂ ಭಯೋತ್ಪಾದಕರನ್ನು ಸಪೋರ್ಟ್ ಮಾಡುತ್ತಾರೆ. ಕಾಂಗ್ರೆಸ್ ನವರು ವಿಕೃತ ಮನಸ್ಸಿನವರು.

ನಮ್ಮ ಸಂಘ ಯಾವುದೇ ಬರ, ಅತಿವೃಷ್ಟಿ ಇದ್ದಾಗ ಅಲ್ಲಿ ನಮ್ಮ ಸಂಘಟನೆ ನಿಲ್ಲುತ್ತದೆ. ದೇಶಭಕ್ತರು ನಮ್ಮ ಸಂಘಟನೆಯವರು. ಈ ರೀತಿ ಮಾತನಾಡುವವರು ದೇಶದ್ರೋಹಿಗಳು. ಬಿಜೆಪಿ, ಆರ್ ಎಸ್ ಎಸ್ ಬೈಯದೆ ಇದ್ದರೆ ಕಾಂಗ್ರೆಸ್ ಅವರಿಗೆ ಸಮಾಧಾನವಾಗಲ್ಲ. ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಹೀಗೆ ಮಾತನಾಡುತ್ತಾರೆ.

ಭ್ರಷ್ಟಾಚಾರ ಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಈ ರಾಷ್ಟ್ರವನ್ನು ಲೂಠಿ ಹೊಡೆದವರು ಇವರು. ನಮ್ಮ ನಾಯಕರ ಬಗ್ಗೆಯೂ ಮಾತನಾಡುವ ನೈತಿಕತೆ ಇಲ್ಲ. ಹೆಡ್ಗೇವಾರ್ ಬಗ್ಗೆ ಮಾತನಾಡುತ್ತಾರೆ ಏನಿದೆ ನೈತಿಕತೆ. ಟಿಪ್ಪು ಜಯಂತಿ ಮಾಡುತ್ತಾರೆ ಇದರಲ್ಲಿ ಅವರಿಗೇ ಯಾವ ನೈತಿಕತೆ ಇದೆ. ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಆರ್ ಎಸ್ ಎಸ್ ಒಂದು ದೇಶ, ಜಾತಿಗೆ ಸೀಮಿತವಾಗಿಲ್ಲ. ದೇಶದ ಬಗ್ಗೆ ಮೆಚ್ಚಿ ಬಂದವರನ್ನು ಸೇರಿಸಿಕೊಳ್ಳುತ್ತಾರೆ. ಅಲ್ಲಿ ಸೇರುವವರು ದೇಶಭಕ್ತಿಯನ್ನು‌ಮೆರೆಯುತ್ತಾರೆ. ಪ್ರಣಬ್ ಮುಖರ್ಜಿಯವರು ಈ ಹಿಂದೆ ನಮ್ಮ ಸಂಘಟನೆಗೆ ಬಂದಾಗ ಹೊಗಳಿದ್ದರು. ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೆ ಏನು ಇಲ್ಲ ಬಿಡಿ. ಸಿದ್ದರಾಮಯ್ಯ ನವರೇ ಬಂದು ಆರ್ ಎಸ್ ಎಸ್ ಗೆ ಬಂದು ಸೇರಿಕೊಳ್ಳಲಿ. ಇಲ್ಲಿ ನಡೆಯುವುದು ಏನು ಎಂಬುದು ಗೊತ್ತಾಗಲಿದೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ಗಾಂಧಿ ಹತ್ಯೆ ಸಂಭ್ರಮಿಸುವ RSS ದೇಶಪ್ರೇಮಿ ಸಂಘಟನೆಯಾಗಲಾರದು : ಕಾಂಗ್ರೆಸ್

ಪಿಯುಸಿ ವಿಜ್ಞಾನ ಕನ್ನಡ ಮಾಧ್ಯಮ ಅನುಷ್ಠಾನಗೊಳಿಸಿ : ಅನ್ನದ ಭಾಷೆ ಕನ್ನಡ ವೇದಿಕೆ ಮನವಿ