ಬೆಂಗಳೂರು: ಬೆಳಗ್ಗೆಯಿಂದಾನು ನಂದಿನಿ ವರ್ಸಸ್ ಅಮೂಲ್ ಹಾಲಿನ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಗುಜರಾತ್ ನ ಬ್ರಾಂಡ್ ಆಗಿರುವ ಅಮೂಲ್ ಜೊತೆಗೆ ನಂದಿನಿಯನ್ನು ವಿಲೀನ ಮಾಡುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಈ ವಿಚಾರ ಕರುನಾಡ ಜನರನ್ನು ಆಕ್ರೋಶಭರಿತರನ್ನಾಗಿಸಿದೆ. ನಂದಿನಿ ಜೊತೆಗೆ ಅಮೂಲ್ ವಿಲೀನವಾಗುವುದು ಬೇಡ. ನಮ್ಮ ಸ್ವಂತದ ಬ್ರಾಂಡ್ ನಮ್ಮಲ್ಲಿಯೇ ಇರಲಿ ಎಂಬ ಎಚ್ಚರಿಕೆಯ ಧ್ವನಿ ಕೇಳಿಸುತ್ತಿದೆ.
ಗುಜರಾತ್ ಕೋ ಆಪರೇಟಿವ್ ಹಾಲು ಮಾರಾಟ ಮಹಾಮಂಡಳ ಅಮೂಲ್ ಹಾಲು ಉತ್ಪಾದಕತೆಯನ್ನು ನಡೆಸುತ್ತಿದೆ. ಇತ್ತಿಚೆಗಷ್ಟೇ ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸುವುದಾಗಿ ಘೋಷಿಸಿತ್ತು. ಏಪ್ರಿಲ್ 5 ರಂದು ಅಮೂಲ್ ಕನ್ನಡದಲ್ಲಿಯೇ ಒಂದು ಟ್ವೀಟ್ ಮಾಡಿತ್ತು. ಹಾಲು ಮತ್ತು ಮೊಸರಿನಿಂದ ತಾಜಾತನದ ಹೊಸ ಅಲೆ ಈಗ ಬೆಂಗಳೂರಿಗೆ ಬರುತ್ತಿದೆ. ಶೀಘ್ರದಲ್ಲಿಯೇ ಹೆಚ್ಚಿನ ಮಾಹಿತಿ ಬರಲಿದೆ” ಎಂದು ತಿಳಿಸಿತ್ತು.
ಈ ಕಡೆ ಕರ್ನಾಟಕದಲ್ಲಿ ಕೆಎಂಎಫ್ ಉತ್ಪಾದನೆ ಲಾಭದಾಯಕ ಹಾಗೂ ಉತ್ತಮ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ರಾಜ್ಯದಲ್ಲೆಡೆ ತನ್ನ ಉತ್ಪಾದನೆ ವಿಸ್ತರಿಸಿದ್ದು, ಗ್ರಾಮೀಣ ಭಾಗದಲ್ಲೂ ವಿಸ್ತರಿಸಿದೆ. ಗ್ರಾಮೀಣ ಭಾಗದಲ್ಲೂ ರೈತರ ಜೀವನೋಪಾಯದ ಒಂದು ಭಾಗವಾಗಿದೆ. ನಂದಿನಿ ಉತ್ಪನ್ನದಿಂದ ಕನ್ನಡಿಗರ ನಿತ್ಯ ಜೀವನ ನಡೆಯುತ್ತಿದೆ. ಆದರೆ ಈಗ ಅಮೂಲ್ ಜೊತೆಗೆ ವಿಲೀನ ಮಾಡಲು ಹೊರಟಿರುವುದನ್ನು ಜನ ಖಂಡಿಸುತ್ತಿದ್ದಾರೆ.