ಕಳಪೆ ಬೀಜದಿಂದ ಬೆಳೆ ನಷ್ಟವಾದದ್ದು ದೃಢಪಟ್ಟರೆ ಪರಿಹಾರ : ಬಿ ಸಿ ಪಾಟೀಲ್

suddionenews
1 Min Read

ಬೆಳಗಾವಿ: ಕಳೆದ ಕೆಲ ವರ್ಷಗಳಿಂದ ಬಿತ್ತನೆ ಬೀಜದಲ್ಲಿಯೂ ದಂಧೆ ಮಾಡಲು ಶುರು ಮಾಡಿದ್ದಾರೆ. ಅದರಿಂದ ಬೆಳೆ ಬೆಳೆದ ರೈತರಿಗೆ ಭಾರೀ ನಷ್ಟವುಂಟಾಗುತ್ತಿದೆ. ಸಾಲಾ ಸೋಲ ಮಾಡಿ ಬೆಳೆದ ಬೆಳೆ ಕೈ ಸೇರದೆ ಇದ್ದಾಗ, ರೈತ ಸಾವಿನತ್ತ ಮುಖ ಮಾಡುತ್ತಾನೆ. ಆದರೆ ಇದೀಗ ಬೆಳೆ ನಷ್ಟವಾದರೂ ಅದಕ್ಕೆ ಪರಿಹಾರ ನೀಡುವುದಾಗಿ ಸಚಿವ ಬಿಸಿ ಪಾಟೀಲ್ ಆಶ್ವಾಸನೆ ನೀಡಿದ್ದಾರೆ.

ಒಂದು ವೇಳೆ ಕಳಪೆ ಬೀಜದಿಂದ ಬೆಳೆ ನಾಶವಾದರೆ ಅದಕ್ಕೆ ಪರಿಹಾರ ನೀಡಲಾಗುವುದು ಎಂದಿದ್ದಾರೆ. ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯ ಎಸ್.ಎಲ್.ಬೋಜೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಪುಸಕ್ತ ಸಾಲಿನಲ್ಲಿ ರೈತರಿಗೆ ನೀಡುವ ಬಿತ್ತನೆ ಬೀಜಗಳ ಗುಣಮಟ್ಟ, ಕಡಿಮೆ ಮತ್ತು ಬೆಳೆ ನಷ್ಟವಾದ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ವರದಿಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪುಸಕ್ತ ಸಾಲಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಜಿಲೆನ್ಸ್ ತಂಡಗಳು ಮಾರಾಟ ಮಳಿಗೆಗಳ ತಪಾಸಣೆ ಕೈಗೊಂಡು ಅನಧಿಕೃತವಾಗಿ ದಾಸ್ತಾನು ಮಾಡಿದ 19 ಪುಕರಣಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.

13 ಪ್ರಕರಣಗಳಲ್ಲಿ ಪರವಾನಗಿಗಳನ್ನು ಅಮಾನತು ಮಾಡಲಾಗಿದೆ. 2 ಪಕರಣಗಳಲ್ಲಿ ಪರವಾನಗಿಗಳನ್ನು ರದ್ದು ಮಾಡಲಾಗಿದೆ. ಬಾಕಿ ಉಳಿದ 4 ಪುಕರಣಗಳಿಗೆ ನ್ಯಾಯಲಾಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಪ್ರಕರಣಗಳಲ್ಲಿ ಒಟ್ಟಾರ 434 ಕ್ವಿಂಟಾಲ್ 62.67 ಲಕ್ಷ ಮೌಲ್ಯದ ಬಿತ್ತನೆ ಬೀಜಗಳನ್ನು ಜಪ್ತಿಮಾಡಲಾಗಿದೆ. ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳ ಪೂರೈಕೆಯಿಂದ ರೈತರಿಗೆ ಬೆಳೆ ನಷ್ಟವಾದಲ್ಲಿ ರೈತರು ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ, ಬೀಜಗಳ ಗುಣಮಟ್ಟದಿಂದ ಬೆಳೆ – ನಷ್ಟವಾಗಿರುವುದು ದೃಢಪಟ್ಟಲ್ಲಿ ನಿಯಮಾನುಸಾರ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದು ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *