ಸುದ್ದಿಒನ್ : ಕೆಲವೊಂದು ಪದಾರ್ಥಗಳು ಆರೋಗ್ಯದ ಸಮಸ್ಯೆಯ ಜೊತೆಗೆ ದೇಹದ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ ಎಂದರೆ ದುಪ್ಪಟ್ಟು ಖುಷಿಯಾದಂತೆ ಅಲ್ಲವೆ. ಆ ರೀತಿಯ ನಾಒ್ಕಾರು ಪ್ರಯೋಜನ ಇರುವುದು ಸಾಸಿವೆ ಎಣ್ಣೆಯಲ್ಲಿ. ಸಾಸಿವೆ ಎಣ್ಣೆಯ ಪ್ರಯೋಜನ ಸಾಕಷ್ಟು ಜನರಿಗೆ ತಿಳಿದಿರುತ್ತದೆ. ಆರೋಗ್ಯದ ಜೊತೆಗೆ ದೇಹದ ಸೌಂದರ್ಯಕ್ಕೂ ಹೇಗೆಲ್ಲಾ ಪ್ರಯೋಜನವಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಸಾಸಿವೆ ಎಣ್ಣೆಯಲ್ಲಿ ವಿಟಮಿನ್ ಗಳು ಅಧಿಕವಾಗಿದೆ. ಮುಖ್ಯವಾಗಿ ಇ ವಿಟಮಿನ್ ಸಿಗಲಿದೆ. ಇದು ಆಕ್ಸಿಡೆಂಟ್ ಹಾನಿಯಿಂದ ಅಂಗಾಂಶಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಸಿವೆ ಎಣ್ಣೆಯನ್ನು ದೇಹದ ನೋವಿಗೆ ಮಸಾಜ್ ಮಾಡುವುದಕ್ಕೂ ಬಳಕೆ ಮಾಡಲಾಗುತ್ತದೆ. ಮೆಗ್ನೀಸಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಉತ್ತಮ ಗುಣಮಟ್ಟದಲ್ಲಿ ಇದೆ. ಹೀಗಾಗಿ ಎಲ್ಲಾ ನೋವಿಗೂ ಸಾಸಿವೆ ಎಣ್ಣೆ ಪರಿಹಾರ.
* ಉಸಿರಾಟದ ಸಮಸ್ಯೆ ಇರುವವರು ಸಾಸಿವೆ ಎಣ್ಣೆ ಬಳಕೆ ಮಾಡಬಹುದು. ಬಿಸಿ ನೀರಿಗೆ ಸಾಸಿವೆ ಎಣ್ಣೆ ಹಾಕಿ, ಸ್ಟೀಮ್ ತೆಗೆದುಕೊಂಡರೆ ಉಸಿರಾಟದ ಸಮಸ್ಯೆಯಿಂದ ಬಚಾವ್ ಆಗಬಹುದು.
* ಕಿವಿ ನೋವು, ಕಿವಿಯ ಸೋಂಕು ಇದ್ದವರು, ಸಾಸಿವೆ ಎಣ್ಣೆಯನ್ನು ಉಗುರು ಬೆಚ್ಚಗೆ ಮಾಡಿ, ಕಿವಿಗೆ ಬಿಡುವುದರಿಂದ ಕಿವಿಯ ಸೋಂಕು ಸರಿಯಾಗುತ್ತದೆ.
* ಸಂಧಿವಾತ ಅಥವ ದೇಹದಲ್ಲೇನಾದರೂ ನೋವುಗಳಾಗಿದ್ದರೆ ಆ ನೋವಿನ ಜಾಗಕ್ಕೆ ಸಾಸಿವೆ ಎಣ್ಣೆ ಹಾಕಿ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
* ಬಿಸಿ ಸಾಸಿವೆ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡರೆ ಅದರಿಂದ ಒಣ ಹಾಗೂ ಒಡೆದ ತ್ವಚೆಯ ಸಮಸ್ಯೆಯು ದೂರ ಆಗುವುದು. ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸೋಂಕು ತಡೆಯಲು ಸಹಕಾರಿ ಹಾಗೂ ಇದು ಗಾಯ ಗುಣಪಡಿಸುವುದು. ಚರ್ಮಕ್ಕೆ ಹಚ್ಚುವ ಮೊದಲು ಇದು ಅಲರ್ಜಿ ಉಂಟು ಮಾಡುತ್ತದೆಯಾ ಎಂದು ತಿಳಿಯಿರಿ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)