
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಮಾ.15): ಜಿ.ಮಲ್ಲಿಕಾರ್ಜುನಪ್ಪ ಮತ್ತು ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ ಭೀಮಸಮುದ್ರ, ಜಿ.ಎಸ್.ಅನಿತ್‍ಕುಮಾರ್ ಅಭಿಮಾನಿಗಳ ಬಳಗ ಚಿತ್ರದುರ್ಗ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಮಾ.17 ರಂದು ಮಧ್ಯಾಹ್ನ 3-30 ಕ್ಕೆ ಶಕ್ತಿ ದೇವತೆಗಳ ಸಂಗಮ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ಬಿಜೆಪಿ.ಯುವ ಮುಖಂಡ ಜಿ.ಎಸ್.ಅನಿತ್‍ಕುಮಾರ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮಹರ್ಷಿ ಆನಂದ್ ಗುರೂಜಿರವರಿಂದ ಮಹಾಲಕ್ಷ್ಮಿ ನಮೋಸ್ತುತೆ, ದುರ್ಗಾ ಹೋಮ, ಕುಂಕುಮಾರ್ಚನೆ ಮತ್ತು ಶಕ್ತಿ ದೇವತೆಗಳ ಸಂಗಮದಲ್ಲಿ ಮಹಿಳೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮವಿರುತ್ತದೆ.
ಏಕನಾಥೇಶ್ವರಿ. ಉಚ್ಚಂಗಿಯಲ್ಲಮ್ಮ, ಕಾಳಿಕಾಮಠೇಶ್ವರಿ ದೇವಿ, ಬರಗೇರಮ್ಮ, ದುರ್ಗಾದೇವಿ, ಮಲೆನಾಡು ಚೌಡೇಶ್ವರಿ ದೇವಿ, ಧರ್ಮದೇವತೆ ದೇವಿ, ಬನಶಂಕರಿ, ಗೌರಸಂದ್ರಮಾರಮ್ಮ ದೇವತೆಗಳ ಸಂಗಮದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿ.ಎಸ್.ಅನಿತ್‍ಕುಮಾರ್ ವಿನಂತಿಸಿದರು.
ಶ್ರೀಮತಿ ಜಿ.ಎಸ್.ಅನಿತ್‍ಕುಮಾರ್, ಶ್ರೀಮತಿ ರತ್ನಮ್ಮ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಪಾಸ್‍ಗಳಿಗಾಗಿ ಮೊ: 843179570, 9019513205 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.

GIPHY App Key not set. Please check settings