ಮುಂಬೈ: ಕಾನೂನಿನ ವಿಚಾರದಲ್ಲಿ ಮುಸ್ಲಿಂರಿಗೆ ಸಲಹೆಯನ್ನು ನೀಡಿರುವ ಎಂಎನ್ಎಸ್ ನಾಯಕ ರಾಜ್ ಠಾಕ್ರೆ, ಕಾನೂನಿಗಿಂತ ಧರ್ಮ ದೊಡ್ಡದ್ದಲ್ಲ ಎಂಬುದನ್ನು ಅರ್ತ್ ಮಾಡಿಕೊಳ್ಳಿ ಎಂದಿದ್ದಾರೆ. ಪ್ರಾರ್ಥನೆ ಸಲ್ಲಿಸುವುದನ್ನು ಯಾರು ವಿರೋಧಿಸುವುದಿಲ್ಲ. ಆದರೆ ಮುಸ್ಲಿಂ ರು ಇದನ್ನು ಧ್ವನಿವರ್ಧಕದಲ್ಲಿ ಮಾಡುದರೆ, ನಾವೂ ಅದಕ್ಕೆ ಪ್ರತಿಯಾಗಿ ಧ್ವನಿವರ್ಧಕಗಳನ್ನೇ ಬಳಸುತ್ತೇವೆ ಎಂದಿದ್ದಾರೆ.
ಮೇ 3ರ ತನಕ ನೋಡುತ್ತೇವೆ. ಆ ಬಳಿಕವೂ ಧ್ವನಿವರ್ಧಕ ತೆಗೆಯದೆ ಹೋದರೆ ಮಸೀದಿ ಮುಂದೆ ಧ್ವನಿವರ್ಧಕ ಬಳಸಿ ಹನುಮಾನ್ ಚಾಲಿಸಾ ಹಾಕುತ್ತೇವೆ ಎಂದು ರಾಜ್ ಠಾಕ್ರೆ ಹೇಳಿದ್ರೆ ಅತ್ತ ಸಂಜಯ್ ರಾವತ್ ಬೇರೆಯೆ ಹೇಳುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ಶಾಂತಿಗೆ ಧಕ್ಕೆ ತರುವ ಕೆಲಸವಾಗುತ್ತಿದೆ. ಆದರೆ ಇಲ್ಲಿನ ಜನ ಮತ್ತು ಪೊಲೀಸರು ಇದಕ್ಕೆ ಅವಕಾಶ ನೀಡಿಲ್ಲ. ರಾಮ ಹನುಮನ ಹೆಸರಲ್ಲಿ ಹಿಂದೂ ಒವೈಸಿಯಂಥವರು ಗಲಭೆ ಸೃಷ್ಟಿಸುತ್ತಿದ್ದಾರೆ. ಅದಕ್ಕೆಲ್ಲ ನಾವೂ ಅವಕಾಶ ನೀಡಬಾರದು. ನಾನು ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಯುಪಿ ಚುನಾವಣೆಯಲ್ಲಿ ಗೆಲ್ಲಲು ಎಐಎಂಐಎಂನ ಓವೈಸಿ ಬಿಜೆಪಿಗೆ ಮಾಡಿದ ಕೆಲಸವನ್ನೇ ಮಹಾರಾಷ್ಟ್ರದ ಹೊಸ ಹಿಂದೂ ಓವೈಸಿಯಿಂದ ಬಿಜೆಪಿ ಕೇಳುತ್ತಿದೆ ಎಂದು ಕಿಡಿಕಾರಿದ್ದಾರೆ.