ಚಿತ್ರದುರ್ಗ,(ಡಿ.25) : ಧರ್ಮ, ಜಾತಿ, ದೇಶವನ್ನು ಮೀರಿದ ಕ್ರೀಡೆ ಯಾವುದಾದರೂ ಇದ್ದರೆ ಆದು ವಿಶೇಷ ಚೇತನ ಕ್ರೀಡೆಯೆಂದು ಮಾದಾರ ಚನ್ನಯ್ಯ ಗುರು ಪೀಠದ ಶ್ರೀ ಮಾದಾರ ಚನ್ನಯ್ಯ ಶ್ರೀಗಳು ತಿಳಿಸಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ಸ್ವಾಭೀಮಾನ ವಿಶೇಷ ಚೇತನರ ನಗರ ಮತ್ತು ಗ್ರಾಮೀಣಾಭೀವೃದ್ದಿ ಸಂಸ್ಥೆ ಮತ್ತು ರಾಜ್ಯ ಅಂಗವಿಕಲ ಕ್ರೀಡಾ ಕೂಟ ಸಂಸ್ಥೆ ಇವರ ಸಂಹಯೋಗದಲ್ಲಿ ವಿಶ್ವ ಅಂಗವಿಕಲ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಮಟ್ಟದ ವಿಶೇಷ ಚೇತನರ ಪುರುಷರ ಕಬಡ್ಡಿ ಪಂದ್ಯಾವಳಿ ಮತ್ತು ಇತರೆ ಕ್ರೀಡೆಗಳ ಸ್ವಾಭೀಮಾನ ಟ್ರೋಫಿಯನ್ನು ಉದ್ಘಾಟಿಸಿ ಮಾತನಾಡಿದರು.
ಬೇರೆ ಬೇರೆ ಕ್ರೀಡಾಕೂಟಗಳಿಗೆ ಅವರದ್ದೇ ಆದ ದೈಹಿಕ ಸಾಮಥ್ಯವನ್ನು ಹೂಂದಿರಬೇಕಿದೆ ಆದರೆ ನಿಮ್ಮ ಕ್ರೀಡಾ ಕೂಟಕ್ಕೆ ನಿಮ್ಮ ದೇಹವೇ ದೈಹಿಕ ಸಾಮಥ್ಯವಾಗಿದೆ. ಇದರಲ್ಲಿಯೇ ನಿಮ್ಮ ದೈಹಿಕ ಸಾಮಥ್ಯವನ್ನು ಆನಾವರಣ ಮಾಡಲು ಈ ಕ್ರೀಡಾಕೂಟ ನೇರವಾಗಲಿದೆ ಎಂದ ಶ್ರೀಗಳು, ಈ ರೀತಿಯಾದ ಕ್ರೀಡಾಕೂಟಕ್ಕೆ ಹೆಚ್ಚಿನ ರೀತಿಯಲ್ಲಿ ಪ್ರೇಕಕರು ಬಾರದೆ ಇರಬಹುದು ಪ್ರೋತ್ಸಾಹ ಕಡಿಮೆ ಇರಬಹುದು ಆದರೆ ಇದರ ಮಹತ್ವ ತಿಳಿದಿರುವವರು ಭಾಗವಹಿಸಿ ಬೆಂಬಲ, ಪ್ರೋತ್ಸಾಹ ನೀಡಿದ್ದಾರೆ ಎಂದರು.
ಮುಂದಿನ ದಿನಮಾನದಲ್ಲಿ ಈ ರೀತಿಯಾದ ಕ್ರೀಡಾಕೂಟವನ್ನು ನಡೆಸುವಾಗ ಮುಂಚಿತವಾಗಿ ತಿಳಿಸಿದರೆ ನಾವು ಸಹಾ ಸಹಕಾರವನ್ನ ನೀಡುವುದಾಗಿ ತಿಳಿಸಿ, ಎಲ್ಲಾ ಚೆನ್ನಾಗಿ ಇರುವವರಿಗೆ ಸಹಕಾರ ಮಾಡುವುದು ಸಾಮಾನ್ಯ ಆದರೆ ಈ ರೀತಿಯಾದ ವಿಕಲ ಚೇತನರಿಗೆ ಸಹಕಾರ ಮಾಡುವಲ್ಲಿ ತೃಪ್ತಿಯನ್ನು ನೀಡುತ್ತದೆ. ನಿಮ್ಮ ಕ್ರೀಡಾಕೂಟಕ್ಕೆ ಸಹಕಾರ ನೀಡುವವರನ್ನು ಬಳಕೆ ಮಾಡಿಕೂಂಡು ನಿಮ್ಮಲ್ಲಿರುವ ಪ್ರತಿಭೆಯನ್ನು ಆನಾವರಣ ಮಾಡಲು ಉತ್ತಮವಾದ ವೇದಿಕೆ ಇದಾಗಿದೆ ಎಂದು ಶ್ರೀಗಳು ತಿಳಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಸುನೀತಾ ಮಲ್ಲಿಕಾರ್ಜನ್ ಮಾತನಾಡಿ, ಎಲ್ಲಾ ಚನ್ನಾಗಿ ಇದ್ದು ಮನಸ್ಸಿನಲ್ಲಿ ಕೆಟ್ಟ ಭಾವನೆ ಇದ್ದರೆ ಅದು ಊನಾಗುತ್ತದೆ ಆದರೆ ನಿಮ್ಮ ದೇಹದಲ್ಲಿ ಊನು ಇದ್ದರೂ ಸಹಾ ಅದನ್ನು ಮರೆತು ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವುದು ತುಂಬಾ ಶ್ಲಾಘನೀಯವಾದದು, ನಿಮ್ಮನ್ನು ನೋಡಿ ದೈಹಿಕವಾಗಿ ಸರಿಯಿರುವವರು ತಿಳಿದುಕೂಳ್ಳಬೇಕಾದ ವಿಷಯ ಬಹಳ ಇದೆ. ಮದುವೆ, ವಯಸ್ಸಾಯಿತು ಎಂದು ಕ್ರೀಡೆಯಲ್ಲಿ ಭಾಗವಹಿಸುವುದನ್ನು ಬಿಡಬಾರದು. ಇತ್ತೀಚಿನ ದಿನದಲ್ಲಿ ಯುವ ಜನತೆಗಿಂತ ವಯಸ್ಸಾದವರು ಸಹಾ ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸುತ್ತಿರುವುದು ಕಂಡು ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ರೆಡ್ಡಿ, ನಿವೃತ್ತ ದೈಹಿ ನಿರ್ದೆಶಕರಾಧ ಜಯ್ಯಣ್ಣ, ಪ್ರೇಮ್, ಮನುಕುಲ ಸಂಸ್ಥೆಯ ಸಂಸ್ಥಾಪಕ ರಾಜಪ್ಪ, ಜಿಲ್ಲಾ ವಾಲಿಬಾಲ್‍ನ ಸೋಮಣ್ಣ, ಕ್ರೀಡಾಪಟು ನಾಗಭೂಷಣ್, ಸ್ವಾಭೀಮಾನಿ ವಿಶೇಷ ಚೇತನರ ಸಂಸ್ಥೆಯ ಅಧ್ಯಕ್ಷ ಪರಶುರಾಮ್, ತಿರುಮಲ, ತಿಪ್ಪೇಸ್ವಾಮಿ, ಅಭಯ್ಯ ಶ್ರವಣಕುಮಾರ್, ಕಾರ್ತಿಕ್ ಸೇರಿದಂತೆ ಇತರರು ಭಾಗವಹಿಸಿದ್ದರು. ನಾಗಮ್ಮ ಪ್ರಾರ್ಥಿಸಿದರೆ, ಅಜಯ್ಯ ಸ್ವಾಗತಿಸಿದರು.