ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಅವರ ಮೇಲಿದ್ದ ಹಲವು ಪ್ರಕರಣಗಳು ರದ್ದಾಗಿವೆ. ಇದೀಗ ಬಿಜೆಪಿ ಹಾಕಿದ್ದ ಐದು ಕೇಸ್ ಗಳನ್ನು ಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ. 2020ರಲ್ಲಿ ಬಿಜೆಪಿ ಹಾಕಿದ್ದ 5 ಪ್ರಕರಣಗಳು ಅದಾಗಿದೆ. ಇಂದು ಹೈಕೋರ್ಟ್ ಆ ಪ್ರಕರಣಗಳನ್ನು ರದ್ದು ಮಾಡಿ ಆದೇಶ ಹೊರಡಿಸಿದೆ.
ನೀರಿಗಾಗಿ ನಡೆ ಎಂಬ ಘೋಷವಾಕ್ಯದೊಂದಿಗೆ ಕಾಂಗ್ರೆಸ್ ನಾಯಕರು ಮೇಕೆದಾಟು ಯೋಜನೆಗೆ ಆಗ್ರಹಿಸಿ ಅಂದು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದರು. ಘಟಾನುಘಟಿ ನಾಯಕರು ಇದರಲ್ಲಿ ಹೆಜ್ಜೆ ಹಾಕಿದ್ದರು. ಪಾದಯಾತ್ರೆ ಮೇಕೆದಾಟುವಿನಿಂದ ಹಿಡಿದು ಬೆಂಗಳೂರು ತಲುಪುವ ಯೋಜನೆ ಹಾಕಿಕೊಂಡಿತ್ತು. ಆದರೆ ಆ ವೇಳೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಇದಕ್ಕೆ ಅನುಮತಿ ನೀಡುವುದಕ್ಕೆ ನಿರಾಕರಿಸಿತ್ತು.
ಆದರೂ ಪಾದಯಾತ್ರೆಯ ನೇತೃತ್ವ ವಹಿಸಿಕೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ಪಾದಯಾತ್ರೆಯನ್ನು ಮುಂದುವರೆಸಿದ್ದರು. ಅರ್ಧಕ್ಕೆ ನಿಂತಿತ್ತು ಕೂಡ. ಆದರೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಡಿಕೆ ಶಿವಕುಮಾರ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಆದರೆ ಅದನ್ನು ಮೀರಿ ಡಿಕೆ ಶಿವಕುಮಾರ್ ಅವರು ಪಾದಯಾತ್ರೆ ಮುಂದುವರೆಸಿದ್ದರು.