ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ನಿಂದ ಡಿಕೆ ಶಿವಕುಮಾರ್ ವಿರುದ್ಧ ತನಿಖೆಯನ್ನು ಸಿಬಿಐ ವಾಪಾಸ್ ಪಡೆದುಕೊಂಡಿದೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರದಿಂದಾನೂ ರಿಲೀಫ್ ನೀಡಿತ್ತು.
ದ್ವಿಸದಸ್ಯ ಮತ್ತು ಏಕಸದಸ್ಯ ಪೀಠದಲ್ಲಿ ಸಲ್ಲಿದ್ದ ಎರಡೂ ಮೇಲ್ಮನವಿಯನ್ನು ವಾಪಸ್ ಪಡೆಯುವ ಡಿ.ಕೆ.ಶಿವಕುಮಾರ್ ನಿರ್ಧಾರವನ್ನು ಹೈಕೋರ್ಟ್ ಪುರಸ್ಕರಿಸಿದೆ. ಈ ಸಂಬಂಧ ಮಾತನಾಡಿದ ಡಿಕೆ ಶಿವಕುಮಾರ್, ಕೋರ್ಟ್ ನಲ್ಲಿ ಏನಾಯಿತು ಎಂಬುದು ಗೊತ್ತಿಲ್ಲ. ವಕೀಲರು ತಿಳಿಸಿದ ಬಳಿಕ ನಾನು ಮಾತನಾಡಬೇಕು ಎಂದಿದ್ದಾರೆ.
ಯತ್ನಾಳ್ ಸೇರಿದಂತೆ ಯಾರ್ಯಾರು ಏನು ಮಾತನಾಡುತ್ತಾರೆ ಎಂಬುದನ್ನು ನಮ್ರತೆಯಿಂದ ನೋಡಿದ್ದೇನೆ. ಸೂಕ್ತ ಸಮಯದಲ್ಲಿ ಅದಕ್ಕೆಲ್ಲ ಉತ್ತರ ಕೊಡುತ್ತೇನೆ. ನಾನೇನೂ ತಪ್ಪು ಮಾಡಿಲ್ಲ. ನಾನು ಮಾಡಿದ್ದೆಲ್ಲ ಪಾರ್ಟಿ ಸಲುವಾಗಿ ಮಾಡಿದ ಕೆಲಸ. ಪಕ್ಷಕ್ಕೋಸ್ಕರ ನಾನು ಕೆಲಸ ಮಾಡಿದ್ದು. ಸಾಕಷ್ಟು ಅನುಭವಿಸಿದ್ದೇನೆ. ಮುಂದೆಯೂ ಕೂಡ ತೊಂದರೆ ಕೊಡ್ತೀನಿ ಅಂದರೆ ಅದನ್ನು ನೋಡಲು ಭಗವಂತ ಇದ್ದಾನೆ ಎಂದಿದ್ದಾರೆ.