ದರ್ಶನ್ ಗೆ ರಿಲೀಫ್ : ಸುಪ್ರೀಂ ಕೋರ್ಟ್ ನಲ್ಲಿ ಏನೆಲ್ಲಾ ಆಯ್ತು..?

ನವದೆಹಲಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇಲ್ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿಕೆ ಮಾಡಿದೆ. ಈ ಹಿನ್ನೆಲೆ ಗುರುವಾರದ ತನಕ ನಟನಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ವಕೀಲ ಕಪಿಲ್ ಸಿಬಲ್ ಬದಲಿಗೆ ಸಿದ್ದಾರ್ಥ್ ದಾವೆ ವಾದ ಮಂಡಿಸಲು ಕೋರ್ಟ್ ಗೆ ಹಾಜರಿದ್ದರು. ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಸಮಯ ಕೇಳಿದ್ದರು. ಈ ಸಂಬಂಧ ವಿಚಾರಣೆ ಮುಂದಕ್ಕೆ ಹೋಗಿದೆ. ಈ ಸಂಬಂಧ ಸರ್ಕಾರದ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ.

 

ಇವತ್ತು ದರ್ಶನ್ ಮತ್ತು ಸಹಚರರ ಬೇಲ್ ವಿಚಾರ ಸುಪ್ರೀಂ ಕೋರ್ಟ್ ಮುಂದೆ ಬರಬೇಕಾಗಿತ್ತು, ಬಂದಿತ್ತು ಆದರೆ ದರ್ಶನ್ ಪರ ವಕೀಲರಾದ ಕಪಿಲ್ ಸಿಬಲ್ ಅವರು ಇವತ್ತು ಹಾಜರಾಗಿರಲಿಲ್ಲ. ಅವರ ಬದಲಾಗಿ ಇವತ್ತು ಸಿದ್ದಾರ್ಥ್ ದಬೆಯವರನ್ನ ದರ್ಶನ್ ಮತ್ತೆ ಸಹಚರರು ಬದಲಾವಣೆ ಮಾಡಿದ್ದರು. ಅವರಿಗೆ ವಿವರಣೆ ನೀಡುವುದಕ್ಕೆ ಹೋಗಿದ್ದರಿಂದ ಅವರಿಗೆ ಸಮಯ ಸಿಕ್ಕಿಲ್ಲ, ಕೇಸ್ ಏನಾಯ್ತು ಎತ್ತ ಎಂಬುದೆಲ್ಲವನ್ನು ನೋಡಿಕೊಳ್ಳೋದಕ್ಕೆ. ಸದ್ಯ ಕೋರ್ಟ್ ಗುರುವಾರದವರೆಗೆ ಸಮಯ ಕೊಟ್ಟಿದೆ, ಅದಕ್ಕಾಗಿ ಸಿದ್ದಾರ್ಥ್ ದಬೆಯವರು, ಗುರುವಾರ 24 ಜುಲೈ ಈ ಕೇಸ್ ಮರು ವಿಚಾರಣೆಗೆ ಬರುತ್ತದೆ. ಅಂದು ದರ್ಶನ್ ಮತ್ತು ಸಹಚರರ ಭವಿಷ್ಯ ನಿರ್ಧಾರವಾಗಲಿದೆ ಎಂದು ನನ್ನ ಅನಿಸಿಕೆ ಎಂದರು.

ಕಕ್ಷಿದಾರರ ಹಕ್ಕು. ಕಪಿಲ್ ಸಿಬಲ್ ಅವರು ನೋಡಿಕೊಳ್ಳುತ್ತಾ ಇದ್ದರು. ಅವರು ಬರೋದಕ್ಕೆ ಆಗದೆ ಇದ್ದ ಕಾರಣ ಸಿದ್ದಾರ್ಥ್ ದಬೆ ಅವರನ್ನು ನೇಮಕ ಮಾಡಿದ್ದಾರೆ. ನಾಳೆ ಅವರು ಕೂಡ ಬದಲಾಗಬಹುದು ಹೇಳೋದಕ್ಕೆ ಆಗಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಗುರುವಾರದವರೆಗೆ ಸಮಯ ಸಿಕ್ಕಿದೆ. ಅಂದು ಸಿದ್ದಾರ್ಥ್ ದಬೆ ಅವರು ವಾದ ಮಂಡಿಸುತ್ತಾರೆ ಎಂಬ ನಂಬಿಕೆ ಇದೆ. ಅಂದೇ ಈ ಜಾಮೀನು ನಿರ್ಧಾರವಾಗುತ್ತೆ ಎಂದಿದ್ದಾರೆ ಸರ್ಕಾರದ ಪರವಾದ ವಕೀಲರು.

Share This Article
Leave a Comment

Leave a Reply

Your email address will not be published. Required fields are marked *