16 ವರ್ಷದ ಪ್ರಕರಣಕ್ಕೆ ಈಗ ರಿಲೀಫ್ : ಅಂಥದ್ದೇನು ಮಾಡಿದ್ದರು ಶಿಲ್ಪಾ ಶೆಟ್ಟಿ..?

1 Min Read

ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಹಲವು ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಮಧ್ಯೆ ಇದೀಗ ಶಿಲ್ಪಾ ಶೆಟ್ಟಿಗೆ ಮತ್ತೊಂದು ರಿಲೀಫ್ ಸಿಕ್ಕಿದೆ. ಅದು 16 ವರ್ಷಗಳ ಹಳೆಯ ಪ್ರಕರಣ ಅದಾಗಿದೆ. ಕಿಸ್ಸಿಂಗ್ ಸೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ಶಿಲ್ಪಾ ಶೆಟ್ಟಿಗೆ ರಿಲೀಫ್ ಸಿಕ್ಕಿದೆ.

2007ರಲ್ಲಿ ರಾಜಸ್ಥಾನದಲ್ಲಿ ಕಾರ್ಯಕ್ರಮ ಒಂದು ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಕೂಡ ಭಾಗಿಯಾಗಿದ್ದರು. ಈ ವೇಳೆ ಹಾಲಿವುಡ್ ನಟ ರಿಚರ್ಡ್ ಗಿಯರ್ ವೇದಿಕೆ ಮೇಲೆಯೇ ನಟಿಗೆ ಮುತ್ತನ್ನಿಟ್ಟಿದ್ದರು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಶಿಲ್ಪಾ ಶೆಟ್ಟಿಗೆ ಕೆನ್ನೆಗೆ ಮುತ್ತಿಟ್ಟಿದ್ದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಆ ಘಟನೆಗೆ ಸಂಬಂಧಿಸಿದಂತೆ ಶಿಲ್ಪಾ ಶೆಟ್ಟಿ ವಿರುದ್ಧ ದೂರು ದಾಖಲಾಗಿತ್ತು. ಸಾರ್ವಜನಿಕ ವೇದಿಕೆಯಲ್ಲಿ ಅಶ್ಲೀಲತೆ ಮೆರೆದಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ರಾಜಸ್ಥಾನ ಹಾಗೂ ಗಜಿಯಾಬಾದ್ ನಲ್ಲಿ ಎರಡು ಕೇಸ್ ದಾಖಲಾಗಿತ್ತು. ಇದು 2017ರಲ್ಲಿ ಸುಪ್ರೀಂಕೋರ್ಟ್ ಗೆ ಶಿಲ್ಪಾ ಶೆಟ್ಟಿ ಮನವಿ ಮಾಡಿದ್ದರು. ಈ ಕೇಸ್ ಕೈ ಬಿಡುವಂತೆ ಮನವಿ ಮಾಡಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *