ರಿಲೀಸ್ ಆಯ್ತು  ಕ್ಯೂಟ್  ‘ಟಾಮ್ ಅಂಡ್ ಚೆರ್ರಿ’ ಪ್ರೇಮಿಗಳ  ಕಹಾನಿಯ ಟ್ರೈಲರ್..ಸಿನಿಮಾ

2 Min Read

ಬೆಂಗಳೂರು : ಚಂದನವನದಲ್ಲಿ  ಟಾಮ್ ಅಂಡ್ ಜೆರ್ರಿ ಸಿನಿಮಾ ಸೆಟ್ಟೇರಿದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಕುತೂಹಲವನ್ನ ಹುಟ್ಟುಹಾಕ್ತಾನೇ ಇದೆ. ಅದರಲ್ಲೂ ಟಾಮ್ ಅಂಡ್ ಜೆರ್ರಿ  ಅನ್ನೋ ಟೈಟಲ್ ಸಖತ್ ಕ್ಯಾಚಿಯಾಗಿತ್ತು.  ಎಲ್ಲರೂ ಒಂದಲ್ಲ ಒಂದ್ಸಲ ಬೇಜಾರಾದಾಗ ವಯಸ್ಸಿನ ಅಂತರವಿಲ್ಲದೆ  ಟಾಮ್ ಅಂಡ್ ಜೆರ್ರಿ ನೋಡಿ ನಕ್ಕಿರ್ತಿರಾ. ಈಗ ಇದೇ ಹೆಸರಿನಲ್ಲೊಂದು ಸಿನೆಮಾ ಬರ್ತಿದೆ ಅಂದ್ರೆ ಕುತೂಹಲ ಸಹಜವಾಗಿನೇ ಮೂಡುತ್ತೆ.

ಕೆಜಿಎಫ್  ಸಿನಿಮಾದಲ್ಲಿ ಡೈಲಾಗ್ ಮೂಲಕವೆ ಶಿಳ್ಳೆ, ಚಪ್ಪಾಳೆ ಪಡೆದು ಮನೆಮಾತಾಗಿದ್ದ  ರೈಟರ್ ರಾಘವ್ ವಿನಯ್ ಶಿವಗಂಗೆ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳ್ತಿರೋ ಟಾಮ್ ಅಂಡ್ ಚೆರ್ರಿ ಚಿತ್ರದ ಹಾಯಾಗಿದೆ ಹಾಡು ಇಷ್ಡು ದಿನ ಎಲ್ಲರ ಬಾಯಲ್ಲೂ ಗುನುಗುವಂತೆ ಮಾಡಿ ಸಖತ್ ಇಂಟ್ರಸ್ಟಿಂಗ್ ಹುಟ್ಟು ಹಾಕಿತ್ತು. ಈಗ ಚಿತ್ರದ  ಟ್ರೈಲರ್ ರಿಲೀಸ್ ಆಗಿದ್ದು ಚಿತ್ರ ಪ್ರೇಮಿಗಳ ನಿದ್ದೆ ಕದಿಯುವಂತಿದೆ.

ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿರೋ ಸುಮಾರು  3.43 ನಿಮಿಷದ ಈ ಟ್ರೈಲರ್ ನಲ್ಲಿ ಪ್ರೀತಿ, ಜಗಳ, ತರಲೆ, ಸ್ನೇಹ, ಫೈಟಿಂಗ್ ಸೇರಿದಂತೆ ಹಲವು ವಿಷಯಗಳನ್ನ ಕಟ್ಟಿಡಲಾಗಿದೆ. ಒಟ್ಟಾರೆ ರಿಲೀಸ್ ಆಗಿರೋ ಟ್ರೈಲರ್ ನೋಡ್ತಿದ್ರೆ,  ಯುವ ಪೀಳಿಗೆಯನ್ನ ಸೆಳೆಯುವ ಇಬ್ಬರು ಸ್ನೇಹಿತರ ಕಥೆಯಿದೆ ಅನ್ನೋದು ಖಾತ್ರಿಯಾಗ್ತಿದೆ. ರಿಲೀಸ್  ಆದ ಕೆಲವೇ ಗಂಟೆಗಳಲ್ಲಿ ಅಧಿಕ ವೀವರ್ಸ್ ಗಳನ್ನ ಪಡೆದುಕೊಳ್ತಿದೆ.

ಚಿತ್ರದಲ್ಲಿ ನಿಶ್ಚಿತ್ ಕೊರೋಡಿ ನಾಯಕನಾಗಿ ನಟಿಸಿದ್ದು,  ಇವರಿಗೆ ನಾಯಕಿಯಾಗಿ ಚೈತ್ರಾ ರಾವ್  ಜೋಡಿಯಾಗಿದ್ದಾರೆ. ಸೂರ್ಯ ಶೇಖರ್ ವಿಲನ್ ಆಗಿ ಅಬ್ಬರಿಸಿದ್ದು ಉಳಿದಂತೆ, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಒಳಗೊಂಡ ದೊಡ್ಡವರ ದಂಡೇ ಚಿತ್ರದಲ್ಲಿದೆ.

ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು,
ವಿನಯ್ ಚಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಈಗಾಗಲೇ ಸಖತ್ ಹಿಟ್ ಆಗಿರುವ  ಹಾಡುಗಳಿಗೆ ಮ್ಯಾಥ್ಯೂಸ್ ಮನು ಸಂಗೀತದ ಕೈಚಳಕವಿದೆ. ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ..

ಸಿನಿಮಾಗೆ U/A ಸರ್ಟಿಫಿಕೇಟ್ ಸಿಕ್ಕಿದ್ದು, ಇಡೀ ಚಿತ್ರತಂಡಕ್ಕೆ ಸಂತಸ ತಂದಿದೆ. ಹೀಗಾಗಿ ನವೆಂಬರ್ 12ಕ್ಕೆ ಎಲ್ಲರ ಮುಂದೆ ಬರೋದಕ್ಕೆ ಸಿದ್ದವಾಗಿದೆ ಚಿತ್ರತಂಡ.

Share This Article
Leave a Comment

Leave a Reply

Your email address will not be published. Required fields are marked *