Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ : ದೂರು ನೀಡಿದ ಎನ್ ಆರ್ ರಮೇಶ್

Facebook
Twitter
Telegram
WhatsApp

ಮಾಡದೇ ಇರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮತ್ತು ಒಂದೇ ಕಾಮಗಾರಿಗೆ ಎರಡೆರಡು ಬಾರಿ ಹಣ ಬಿಡುಗಡೆ ಮಾಡಲಾಗಿದೆ ಎಂದು ಎನ್ ಆರ್ ರಮೇಶ್ ಆರೋಪಿಸಿದ್ದಾರೆ. ಇಂತಹ ನೂರಾರು ಕೋಟಿ ರೂಪಾಯಿಗಳಷ್ಟು ಸಾರ್ವಜನಿಕರ ತೆರಿಗೆ ಹಣವನ್ನು ನಿರಂತರವಾಗಿ ಲೂಟಿ ಹೊಡೆದಿರುವ ಮತ್ತು ಹೊಡೆಯುತ್ತಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರ ದಲ್ಲಿ ನಡೆದಿರುವ ನೂರಾರು ವಂಚನೆ ಪ್ರಕರಣಗಳ ಪೈಕಿ ಮತ್ತೊಂದು ಅಂತಹುದ್ದೇ ಹಗರಣ ನಡೆದಿರುವ ದಾಖಲೆ ಲಭ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

KRIDL ಮೂಲಕ ನಿರ್ವಹಿಸುವ ಕಾಮಗಾರಿಗೆ ಕಾರ್ಯಾದೇಶ ಪತ್ರವನ್ನು ನೀಡಿದ್ದರು. ಅಲ್ಲದೇ, ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಛಾಯಾಚಿತ್ರಗಳ ಸಹಿತ ದಾಖಲೆಗಳನ್ನು ಒದಗಿಸಿ ಕಾಮಗಾರಿಯ ಮೊತ್ತದೊಂದಿಗೆ KRIDL ಸೇವಾ ಶುಲ್ಕ ಒಂದು ಕೋಟಿ ಒಂಬತ್ತು ಲಕ್ಷದ ಎಂಬತ್ತೈದು ಸಾವಿರದ ಐದು ನೂರಾ ಅರವತ್ತೆರಡು ರೂಪಾಯಿ ಎಂಬತ್ತೊಂದು ಪೈಸೆ ಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಾಟನ್ ಪೇಟೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಧೃಢೀಕರಣ ಪತ್ರ ನೀಡಿದ್ದರು. ಹಾಗೆಯೇ KRIDL ಸಂಸ್ಥೆಗೆ 2019 ರ ಜನವರಿಯಲ್ಲಿ ಸಂಪೂರ್ಣ ಹಣ ಬಿಡುಗಡೆಯೂ ಆಗಿತ್ತು. ಆದರೆ, ಇಲ್ಲಿ ನಡೆದಿರುವ ಮಹಾ ವಂಚನೆಯ ಪ್ರಕರಣದ ವಿವರವನ್ನು ಎನ್ ಆರ್ ರಮೇಶ್ ನೀಡಿದ್ದಾರೆ.

ಯಾವ ಕಾಮಗಾರಿಯನ್ನು 2018 ರ ಅಂತ್ಯದಲ್ಲಿ ಪೂರ್ಣಗೊಳಿಸಲಾಗಿತ್ತೋ, ಅದೇ ಕಾಮಗಾರಿಗೆ ಮತ್ತೊಮ್ಮೆ – “Providing Asphalting CC Road & Improvements drain culverts at Gopalapura surrounding area in Ward – 121” ಅನ್ನುವ ಅದೇ ಹೆಸರಿನಲ್ಲಿ ದಿನಾಂಕ 23/03/2020 ರಂದು ಅದೇ KRIDL ಗೆ “ಕಾರ್ಯಾದೇಶ ಪತ್ರ” ವನ್ನು ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು ನೀಡಿದ್ದರು. ಅಲ್ಲದೇ, ಸದರಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಛಾಯಾಚಿತ್ರಗಳ ಸಹಿತ ದಾಖಲೆಗಳನ್ನು ಒದಗಿಸಿ ಸೇವಾ ಶುಲ್ಕ ಸೇರಿಸಿ KRIDL ಗೆ ರೂ. 99,65,630.68 ಬಿಡುಗಡೆ ಮಾಡುವ ಬಗ್ಗೆ ಕಾಟನ್ ಪೇಟೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಧೃಢೀಕರಣ ಪತ್ರ ನೀಡಿದ್ದರಲ್ಲದೇ, 2020 ರ ಜುಲೈ ತಿಂಗಳಿನಲ್ಲಿ KRIDL ಗೆ ಸಂಪೂರ್ಣ ಬಿಡುಗಡೆಯೂ ಆಗಿತ್ತು.

ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, 2018 ರ ಅಂತ್ಯದಲ್ಲಿ ನಡೆದಿದ್ದ ಮೊದಲ ಕಾಮಗಾರಿಗೆ ಸಂಬಂದಿಸಿದಂತೆ ಯಾವ ಛಾಯಾಚಿತ್ರಗಳನ್ನು ಒದಗಿಸಿ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿತ್ತೋ – ಅದೇ ಛಾಯಾಚಿತ್ರಗಳನ್ನು 2020 ರ ಪ್ರಾರಂಭದಲ್ಲಿ ನಡೆದಿದೆ ಎಂದು ದಾಖಲೆಗಳಲ್ಲಿ ತೋರಿಸಲಾಗಿರುವ (?) ಕಾಮಗಾರಿಗೆ ಸಂಬಂಧಿಸಿದಂತೆಯೂ ಲಗತ್ತಿಸಿ ಮತ್ತೊಮ್ಮೆ ಎರಡನೇ ಬಾರಿ ಸಂಪೂರ್ಣ ಹಣ ಬಿಡುಗಡೆ ಮಾಡಿಸಿಕೊಳ್ಳಲಾಗಿತ್ತು.

ಒಂದೇ ಕಾಮಗಾರಿಗೆ ಎರಡು ಬಿಲ್ಲುಗಳ ಹಗರಣದಲ್ಲಿ ಗಾಂಧಿನಗರ ವಿಭಾಗದ ಕಾರ್ಯಪಾಲಕ ಅಭಿಯಂತರರು, ಕಾಟನ್ ಪೇಟೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು KRIDL ನ ಅಧಿಕಾರಿಗಳು ಹಾಗೂ ಉಪ ಗುತ್ತಿಗೆದಾರರು ಸಂಪೂರ್ಣವಾಗಿ ಭಾಗಿಗಳಾಗಿರುವುದನ್ನು ಎರಡೂ ದಾಖಲೆಗಳು ಎತ್ತಿ ತೋರಿಸುತ್ತವೆ.

ಈ ಎಲ್ಲ ಕಾರ್ಯಗಳಿಗೆ ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಅವರ ಸಂಪೂರ್ಣ ಕೃಪಾ ಕಟಾಕ್ಷ ಇರುವುದೂ ಸಹ ಅತ್ಯಂತ ಸ್ಪಷ್ಟವಾಗಿದೆ. ಏಕೆಂದರೆ, ಇದೇ ವಾರ್ಡ್ ಸಂಖ್ಯೆ 121 ರಲ್ಲಿ ಒಂದೇ ಕಾಮಗಾರಿಗೆ ತಲಾ 02 ಕೋಟಿ ಯಂತೆ ಒಟ್ಟು 04 ಕೋಟಿ ಹಣ ಬಿಡುಗಡೆಯಾಗಿದ್ದ ಹಗರಣಕ್ಕೆ ಸಂಬಂಧಿಸಿದಂತೆ TVCC ನೀಡಿದ್ದ ಅತ್ಯಂತ ಸ್ಪಷ್ಟವಾದ ವರದಿಯನ್ನಾಧರಿಸಿ N. S. ರೇವಣ್ಣ ಎಂಬ ಪರಮ ಭ್ರಷ್ಟ AEE ಯವರನ್ನು ಅವರ ಮಾತೃ ಇಲಾಖೆಗೆ ವಾಪಸ್ಸು ಕಳುಹಿಸುವ ಬಗ್ಗೆ ಪಾಲಿಕೆಯ ಮುಖ್ಯ ಆಯುಕ್ತರು ಆದೇಶಿಸಿದ್ದರು. ಆದರೆ, ಅದೇ N. S. ರೇವಣ್ಣ ಅವರನ್ನು ಕಾಟನ್ ಪೇಟೆ ಉಪ ವಿಭಾಗದ AEE ಆಗಿ ಮತ್ತು ಗಾಂಧಿನಗರ ವಿಭಾಗದ ಪ್ರಭಾರಿ EE ಆಗಿ ನಿಯೋಜಿಸುವಂತೆ ಅದೇ ಪರಮ ಭ್ರಷ್ಟ ಶಾಸಕ ದಿನೇಶ್ ಗುಂಡೂರಾವ್ ಅವರು ದಿನಾಂಕ 18/08/2021 ರಂದು ಪತ್ರ ಬರೆದಿದ್ದರು. ಅವರ ಪತ್ರದ ಶಿಫಾರಸ್ಸಿನಂತೆ ಪಾಲಿಕೆಯ ಮುಖ್ಯ ಆಯುಕ್ತರೂ ಸಹ ಅನುಮೋದನೆ ನೀಡಿದ್ದರು !!!

ಆದ್ದರಿಂದ ಗಾಂಧಿನಗರ ವಿಭಾಗದ ವಾರ್ಡ್ ಸಂಖ್ಯೆ – 121 ರಲ್ಲಿ ನಡೆದಿರುವ “ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಮಾಡಿರುವ ಸಂಬಂಧಿಸಿದಂತೆ, ಇದರಲ್ಲಿ ಭಾಗಿಯಾಗಿರುವ ಗಾಂಧಿನಗರ ವಿಭಾಗದಲ್ಲಿ 2018 ರಿಂದ 2020 ರ ಅವಧಿಯಲ್ಲಿ ಕಾರ್ಯ ನಿರ್ವಹಿಸಿರುವ ಕಾರ್ಯಪಾಲಕ ಅಭಿಯಂತರರ ವಿರುದ್ಧ, ಇದೇ ಅವಧಿಯಲ್ಲಿ ಕಾಟನ್ ಪೇಟೆ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕಾರ್ಯ ನಿರ್ವಹಿಸಿರುವ ಅಧಿಕಾರಿಯ ವಿರುದ್ಧ, ಸಹಾಯಕ ಅಭಿಯಂತರರ ವಿರುದ್ಧ, EE ಕಛೇರಿಯ DM ವಿರುದ್ಧ, KRIDL ಸಂಸ್ಥೆಯ ಅಧಿಕಾರಿಗಳ ವಿರುದ್ಧ ಮತ್ತು ಉಪ ಗುತ್ತಿಗೆದಾರರ ವಿರುದ್ಧ ಅಧಿಕಾರ ದುರ್ಬಳಕೆ, ನಕಲಿ ದಾಖಲೆ ತಯಾರಿಕೆ, ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣಗಳನ್ನು ದಾಖಲಿಸಿಕೊಂಡು ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ACB ಮತ್ತು BMTF ನಲ್ಲಿ ದಾಖಲೆಗಳ ಸಹಿತ ದೂರನ್ನು ಸಲ್ಲಿಸಲಾಗಿದೆ ಎಂದು ಇಷ್ಟು ಮಾಹಿತಿಯನ್ನು ಎನ್ ಆರ್ ರಮೇಶ್ ನೀಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

error: Content is protected !!