ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್
ಮೊಬೈಲ್ : 9886295817
ಚಿತ್ರದುರ್ಗ, (ಜೂ.06) : ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಬಂಧಿಸಿರುವ ಎಸ್.ಎಸ್.ಯು.ಐ.ನ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ರವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮತ್ತು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ಪ್ರತಿಭಟನಾಕಾರರು ದಾರಿಯುದ್ದಕ್ಕೂ ಸರ್ಕಾರ ಮತ್ತು ಶಿಕ್ಷಣ ಸಚಿವರ ವಿರುದ್ದ ಘೋಷಣೆಯನ್ನು ಕೂಗಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಶಿಕ್ಷಣ ಸಚಿವರ ಮನೆಯ ಮುಂದೆ ಪ್ರತಿಭಟನೆಯನ್ನು ನಡೆಸುತ್ತಿದ್ದ ಎನ್.ಎಸ್.ಯು.ಐ.ನ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್‍ರವರನ್ನು ಪೋಲಿಸರು ಬಂದಿಸಿದ್ದಾರೆ. ಈ ಸರ್ಕಾರದಲ್ಲಿ ಪ್ರತ್ರಗಿಭಟಿಸುವ ಹಕ್ಕನ್ನು ಸಹಾ ಕಸಿದುಕೂಳ್ಳಲಾಗಿದೆ.
ಯಾರೇ ಪ್ರತಿಭಟನೆ ಮಾಡಿದರೆ ಸಹಾ ಅವರನ್ನು ಬಂಧಿಸುತ್ತಾರೆ.ಸರ್ಕಾರ ಏನೇ ಅಕ್ರಮ ಮಾಡಿದರು ಸಹಾ ಅದನ್ನು ಒಪ್ಪಿಕೊಳ್ಳಬೇಕಿದೆ ಇಲ್ಲವಾದಲ್ಲಿ ಈ ರೀತಿಯಾದ ಪ್ರತಿಭಟನೆ ಮಾಡಿದರೆ ಕಾನೂನು ಮೂಲಕ ಶಿಕ್ಷೆಯನ್ನು ಕೂಡಿಸಲು ಮುಂದಾಗುತ್ತಿರುವುದು ದುರಂತ ಎಂದು ಪ್ರತಿಭಟನಾಕಾರರು ದೂರಿದರು.
ಬಿಜೆಪಿ ಕೋಮುವಾದವನ್ನು ಮಾತ್ರ ಮನಸ್ಸಿನಲ್ಲಿ ಇಟ್ಟುಕೊಂಡು ಆಡಳಿತವನ್ನು ಮಾಡುತ್ತಿದೆ, ಅವರ ಮುಖ್ಯವಾದ ಉದ್ದೇಶವೇ ಕೋಮುವಾದವಾಗಿದೆ ಇದು ಬಟ್ಟು ಬೇರೆ ಯಾವ ವಿಷಯವು ಸಹಾ ಅವರಲ್ಲಿ ಇಲ್ಲವಾಗಿದೆ. ಪಠ್ಯ ಪುಸ್ತಕ ಸಮಿತಿಯಲ್ಲಿ ತಪ್ಪಿದೇ ಎಂದು ತಿಳಿಸಿದವರ ಮೇಲೆ ಕಾನೂನು ಕ್ರಮ ತೆಗೆದುಕೊಂಡಿರುವುದು ಅನ್ಯಾಯ.
ಮಾಜಿ ಸಚಿವ ಈಶ್ವರಪ್ಪರವರ ಕೇಸರಿ ಧ್ವಜವನ್ನು ರಾಷ್ಟ್ರ ಧ್ವಜವನ್ನಾಗಿ ಮಾಡುತ್ತೇವೆ ಎಂದಾಗ ದೇಶ ದ್ರೋಹದ ನೆನಪು ಬರಲಿಲ್ಲ, ಈಗ ವಿರೋಧ ಪಕ್ಷದವರು ಅದರ ಬಗ್ಗೆ ಮಾತನಾಡಿದಾಗ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಿದೆ ಅದು ಸೇಡಿನ ರಾಜಕೀಯವಾಗಿದೆ ಎಂದು ಯುವ ಕಾಂಗ್ರೆಸ್ ವಕ್ತಾರ ದರ್ಶನ ಬಳ್ಳೇಶ್ವರ ದೂರಿದರು.
ಈ ಸಂದರ್ಭದಲ್ಲಿ ಎನ್.ಎಸ್.ಯು.ಐ.ನ ಅಧ್ಯಕ್ಷ ವಿನಯ ಗೋಡೆಮನೆ, ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ, ಕೆಪಿಸಿಸಿ ಸದಸ್ಯ ಮಧುಗೌಡ, ಇತರರು ಭಾಗವಹಿಸಿದ್ದರು.