ಸುದ್ದಿಒನ್, ಚಳ್ಳಕೆರೆ, ಜುಲೈ. 31 : ತಾಲ್ಲೂಕಿನ ನಾಯಕನಹಟ್ಟಿ ಸಮೀಪದ ರೇಖಲಗೆರೆ ಲಂಬಾಣಿ ಹಟ್ಟಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜುಲೈ 28 ರಂದು ಚಳ್ಳಕೆರೆಯಲ್ಲಿ ನಡೆದ ನಾಯಕನಹಟ್ಟಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಾಲಕರ ಕಬಡ್ಡಿ ಮತ್ತು ವಾಲಿಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಬಡ್ಡಿ : ಪ್ರಥಮ – ನಿತೀಶ್ ಮತ್ತು ತಂಡ
ವಾಲಿಬಾಲ್ : ಪ್ರಥಮ -ವಿನಯ್ ಕುಮಾರ್ ಮತ್ತು ತಂಡ
ಖೋ ಖೋ : ದ್ವಿತೀಯ – ತ್ರಿಶಾ ಮತ್ತು ತಂಡ
ಎತ್ತರ ಜಿಗಿತ : ತೃತೀಯ – ಮೇಘನಾ
400 ಮೀಟರ್ ಓಟ : ತೃತೀಯ- ತಿಪ್ಪೇಸ್ವಾಮಿ

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಶ್ ಕೆ.ಎಸ್,ಮುಖ್ಯ ಶಿಕ್ಷಕಕರಾದ ಶ್ರೀಮತಿ ನಿರ್ಮಲ B, ಎಸ್ ಡಿ ಎಂ ಸಿ ಅಧ್ಯಕ್ಷರಾದ ಕಾಟಯ್ಯ , ಶಿಕ್ಷಕರಾದ ಜಗದೀಶ್, ನಾಗಭೂಷಣ್, ಓಂಕಾರಪ್ಪ, ವೀರಭದ್ರಪ್ಪ, ರಂಜಿತ, ಶೈಲಜಾ, ಬೋರಮ್ಮ, ಕಾವ್ಯ, ಶೈಲಜಾ B.P
ಹಾಗೂ ಊರಿನ ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.











