ಮೊಬೈಲ್ ಆನ್‍ಲೈನ್ ಗೇಮ್‍ ನಿಯಂತ್ರಿಸಿ : ಕರ್ನಾಟಕ ಜನಕಲ್ಯಾಣ ಸಮಿತಿ ಮನವಿ

1 Min Read

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 : ಆನ್‍ಲೈನ್ ಗೇಮ್‍ಗಳ ಗೀಳಿಗೆ ಸಿಲುಕಿ ಚಿಕ್ಕ ಚಿಕ್ಕ ಮಕ್ಕಳು ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದಲ್ಲದೆ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನೋವಿನ ಸಂಗತಿ. ಮೊಬೈಲ್ ಆನ್‍ಲೈನ್ ಗೇಮ್ ಎನ್ನುವುದು ಡ್ರಗ್ಸ್ ಮಾದರಿಯಲ್ಲಿ ಹರಡುತ್ತಿದೆ. ಇದಕ್ಕೆ ಬಲಿಯಾಗಿರುವ ಹದಿಹರೆಯದವರು ಮಾನಸಿಕ ಅಸ್ವಸ್ಥರ ರೀತಿ ವರ್ತಿಸುತ್ತಿರುವುದಲ್ಲದೆ ಲಕ್ಷಾಂತರ ರೂ.ಗಳನ್ನು ಕಳೆದುಕೊಳ್ಳುತ್ತಿರುವುದು ಪೋಷಕರುಗಳಿಗೆ ತಲೆನೋವಾಗಿ ಪರಿಣಮಿಸಿದೆ. ತಾಂತ್ರಿಕ ವ್ಯವಸ್ಥೆ ಬಳಸಿಕೊಂಡು ಇಂತಹ ಗೇಮ್‍ಗಳಲ್ಲಿ ತೊಡಗಿರುವ ಮಕ್ಕಳನ್ನು ರಕ್ಷಿಸಬೇಕೆಂದು ಕರ್ನಾಟಕ ಜನ ಕಲ್ಯಾಣ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

 

ಕರ್ನಾಟಕ ಜನ ಕಲ್ಯಾಣ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿಜಯಕುಮಾರ್ ಕೆ.ವಿ. ರಾಜ್‍ಗಿರಿ ಸಿ. ಪಬ್ಲಿಕ್ ಬ್ರಿಗೇಡ್ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಎ. ಸಮಾಜ ಸೇವಕ ಕುಮಾರಣ್ಣ ಇವರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Enable Notifications OK No thanks