ಬೆಂಗಳೂರು: ನಿನ್ನೆ ಸಿಲಿಕಾನ್ ಸಿಟಿಯಲ್ಲಿ ನಡೆದ ಚಂದ್ರು ಕೊಲೆ ಬಗ್ಗ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿ ಟಿ ರವಿ ಹೋಗಿ ಹಿಂಗೆ ಹೇಳಮ್ಮ ಅನ್ನೋದು. ಅಲ್ಲ ಇವ್ರೆಲ್ಲಾ ಸೇರಿ ಕರ್ನಾಟಕವನ್ನು ಏನು ಮಾಡೋದಕ್ಕೆ ಹೊರಟಿದ್ದಾರೆ ನಮಗಂತು ಅರ್ಥ ಆಗ್ತಾ ಇಲ್ಲ. ಅದಕ್ಕೋಸ್ಕರ ನಾವೂ ಕೂಡಲೇ ಹೋಂ ಮಿನಿಸ್ಟರ್ ಮೇಲೆ ಕೇಸನ್ನ ಹಾಕಬೇಕು. ಸಿಎಎ ಸೇರಿದಂತೆ ಬೇರೆ ಪ್ರತಿಭಟನೆ ಸಂದರ್ಭದಲ್ಲಿ ಕೆಲವರೆಲ್ಲಾ ಹೇಳಿಕೆ ಕೊಟ್ಟರು ಅಂತ ಹೇಳಿ ಎಷ್ಟು ಕೇಸ್ ಹಾಕಿಲ್ಲ. ಪ್ರಚೋದನೆ ಮಾಡುವಂತ, ಜಾತಿಗಳ ಬಗ್ಗೆ, ಸಮಾಜದ ಬಗ್ಗೆ, ಧರ್ಮದ ಬಗ್ಗೆ ವೈಶಮ್ಯ ಮೂಡಿಸುವಂತ ಹೇಳಿಕೆಯನ್ನು ಕೊಟ್ಟಿದ್ದಾರೆ. ಅದಕ್ಕೆ ಕೂಡಲೇ ಪೊಲೀಸರು ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು. ಕೇಸ್ ಹಾಕಬೇಕು, ಅವರನ್ನು ಬಂಧಿಸಬೇಕೆಂದು ನಾನು ಆಗ್ರಹಿಸುತ್ತೇನೆ.
ಅಷ್ಟೆ ಅಲ್ಲ ಸಿಎಂ ಬೊಮ್ಮಾಯಿ ಅವರು ಈ ಕೂಡಲೇ ಅವರನ್ನು ವಜಾ ಮಾಡಬೇಕು. ಇದು ನಿಮ್ಮ ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ. ಮಾಡೋದೆಲ್ಲ ಮಾಡಿ ಸಂಜೆ ತಲೆ ಕೆರೆದುಕೊಂಡು ಅಪಾಲಜಿ ಕೇಳಿದ್ರೆ. ಇದೆಲ್ಲ ಎಷ್ಟು ಸಲ ಆಯ್ತು.
ಹೋ ಮಿನಿಸ್ಟರ್ ಗೆ ಬೇಸಿಕ್ ಕಾಮನ್ ಸೆನ್ಸ್ ಇಲ್ಲ. ಆ ಸ್ಥಾನಕ್ಕೆ ನಾವೆಲ್ಲ ಬಹಳ ಗೌರವ ಕೊಡಬೇಕು. ಆದ್ರೆ ಹೋಂ ಮಿನಿಸ್ಟರ್ ಯಾರ ಪರ ಮಾತಾಡ್ತಾ ಇದ್ದಾರೆ. ಸರ್ಕಾರದ ಪರವಾ..? ರಾಜ್ಯದ ಜನರ ಪರವಾ..? ಪಾರ್ಟಿಯ ಪರ ಮಾತಾಡ್ತಾ ಇದ್ದಾರಾ ಅಷ್ಟು ಜ್ಞಾನವೇ ಇಲ್ಲದೆ ಇರುವಂತ ಮಂತ್ರಿ ಅವರು. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಇಂಥ ಹೇಳಿಕೆಯನ್ನು ಕೊಡುತ್ತಾ ಇದ್ದಾರೆ. ಅದಕ್ಕೆ ನಾನು ಪೊಲೀಸ್ ಕಮಿಷನರ್ ಗೆ, ಡಿಜಿ ಗೆ ಒತ್ತಾಯ ಮಾಡ್ತೇನೆ. ಮೊದ್ಲು ನಿಮ್ಮ ಹೋಂ ಮಿನಿಸ್ಟರ್ ಮೇಲೆ ಕೇಸ್ ಹಾಕಿ ಎಂದು ಆಗ್ರಹಿಸಿದ್ದಾರೆ.