ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲಾ ಪಕ್ಷಗಳು ಆ್ಯಕ್ಟೀವ್ ಆಗಿದ್ದಾರೆ. ಹೊಸದಾಗಿ ಪಕ್ಷ ಆರಂಭಿಸಿರುವ ಜನಾರ್ದನ ರೆಡ್ಡಿ ಹೆಚ್ಚಾಗಿ ಕಲ್ಯಾಣ ಕರ್ನಾಟಕವನ್ನು ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಮುಸ್ಲಿಂ ನಾಯಕರನ್ನು ಈ ಭಾಗದಲ್ಲಿ ಸೆಳೆಯುವ ಪ್ಲ್ಯಾನ್ ಮಾಡುತ್ತಿದ್ದಾರೆ ಜನಾರ್ದನ ರೆಡ್ಡಿ ಹಾಗೂ ಅರುಣ ಲಕ್ಷ್ಮೀ ಕೆಲಸ ಮಾಡುತ್ತಿದ್ದಾರೆ.
ಈ ಹಿನ್ನೆಲೆ ಇತ್ತೀಚೆಗಷ್ಟೇ ಅಜ್ಮೀರ್ ದರ್ಗಾಗೆ ಹೋಗಿ ಪೂಜೆ ಸಲ್ಲಿಸಿದ್ದರು. ಕೊಪ್ಪಳದ ದರ್ಗಾಗೂ ಹೋಗಿ ಹಣದ ಸಹಾಯ ಮಾಡಿ ಬಂದಿದ್ದರು. ಇಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯವೇ ಇರುವ ಕಾರಣ, ಅವರನ್ನು ಸೆಳೆದರೆ ಗೆಲುವು ಖಚಿತ ಎಂಬುದು ತಿಳಿದು ಮುಸ್ಲಿಂ ಸಮುದಾಯಗಳ ಜೊತೆಗೆ ಸಭೆ ಮಾಡುತ್ತಿದ್ದಾರೆ.
ಜನಾರ್ದನ ರೆಡ್ಡಿ ಅವರ ಈ ನಡೆ ಕಾಂಗ್ರೆಸ್, ಬಿಜೆಪಿ ಹಾಗೂ ಶ್ರೀರಾಮುಲುಗೆ ಒಂದು ಕಡೆ ಹೊಡೆತ ಬೀಳುವ ಸಾಧ್ಯತೆ ಇದೆ. ಕಾಂಗ್ರೆಸ್ ಮತಬ್ಯಾಂಕ್ ಎಂದರೆ ಅದು ಮುಸ್ಲಿಂ ಸಮುದಾಯ. ಈಗ ಜನಾರ್ದನ ರೆಡ್ಡಿಯ ನಡ ಕಾಂಗ್ರೆಸ್ ಕೂಎ ಯೋಚನೆ ಮಾಡುವಂತೆ ಮಾಡಿದೆ.
ರೆಡ್ಡಿ ಮತ್ತು ರಾಮುಲು ಆಪ್ತ ಸ್ನೇಹಿತರು. ಆದ್ರೆ ಬಿಜೆಪಿಯಲ್ಲಿ ಸರಿಯಾದ ಬೆಂಬಲ ಸಿಗದ ಕಾರಣ ಬೇರೆ ಪಕ್ಷವನ್ನೇ ಶುರು ಮಾಡಿದ್ದಾರೆ. ಶ್ರೀರಾಮುಲು ಬೇಡ ಎಂದರು ಕೇಳಲಿಲ್ಲ. ಈಗ ಇಬ್ಬರ ನಡುವೆ ಚುನಾವಣಾ ಸ್ಪರ್ಧೆ ಏರ್ಪಡಲಿದೆ. ಮುಸ್ಲೀಂರ ಜೊತೆಗೆ ಶ್ರೀರಾಮುಲು ಜೊತೆಗೆ ಉತ್ತಮ ಬಾಂಧವ್ಯವಿದೆ. ರೆಡ್ಡಿ ಮತ್ತು ಅರುಣ ಲಕ್ಷ್ಮೀ, ಮೌಲಿ ಅಫೀಜ್ ಜೊತೆಗೆ ಸಭೆ ನಡೆಸಿದ್ದಾರೆ. 40ಕ್ಕೂ ಹೆಚ್ಚು ಮಸೀದಿ ಹಾಗೂ ಮೌಲಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಸಭೆಗಳ ಮೇಲೆ ಸಭೆ ನಡೆಸುತ್ತಿದ್ದಾರೆ.