ಬೆಂಗಳೂರು : ಜನಾರ್ಧನ ರೆಡ್ಡಿ.. ಸದ್ಯ ಬಳ್ಳಾರಿಯಲ್ಲೂ ವಾಸ ಮಾಡೋದಕ್ಕೆ ಅನುಮತಿ ಸಿಕ್ಕಿದೆ. ಬಳ್ಳಾರಿಯಲ್ಲೇ ವಾಸ ಮಾಡುತ್ತಾ, ಈಗ ಮತ್ತೆ ರಾಜಕೀಯಕ್ಕೆ ಮರು ಪ್ರವೇಶಿಸಲು ಫ್ಲ್ಯಾನ್ ಮಾಡುತ್ತಿದ್ದಾರೆ. ಆದ್ರೆ ಅವರ ಶತ ಪ್ರಯತ್ನ ಫೇಲ್ ಆಗುತ್ತಲೆ ಇದೆ.
ಆಪ್ತ ಸ್ನೇಹಿತ ಶ್ರೀರಾಮುಲು ಮೂಲಕ ಹೈಕಮಾಂಡ್ ಮನವೊಲಿಕೆ ಮಾಡೋ ಮತ್ತೊಂದು ಪ್ರಯತ್ನ ನಡೆಯುತ್ತಿದೆ ಎನ್ನುತ್ತಿವೆ ಆಪ್ತ ಮೂಲಗಳು. ಆದ್ರೆ ರೆಡ್ಡಿ ಅವರಿಗೆ ರಾಜಕೀಯ ಪ್ರವೇಶ ಅಷ್ಟು ಸುಲಭವಾಗಿಲ್ಲ ಅನ್ನೋದು ಕೂಡ ಹಲವರಿಂದ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ. ಯಾಕಂದ್ರೆ ಅವರ ಮರು ಆಯ್ಕೆ ಬಿಜೆಪಿಗೇನೆ ಡ್ಯಾಮೇಜ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿಯೇ ಹೈಕಮಾಂಡ್ ಹಿಂದು ಮುಂದು ನೋಡ್ತಿದೆ ಎನ್ನಲಾಗಿದೆ.
ಯಾಕಂದ್ರೆ ಗಣಿ ದಣಿ ಎನಿಸಿಕೊಂಡಿರುವ ಜನಾರ್ದನ ರೆಡ್ಡಿ ಗಣಿ ಲೂಟಿ ಹೊಡೆದ ಆರೋಪ ಹೊತ್ತಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಹೀಗಾಗಿ ಅವರಿಗೆ ಅವಕಾಶ ನೀಡಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿರುತ್ತೆ. ಇದು ಕಾಂಗ್ರೆಸ್ ಗೆ ಅಸ್ತ್ರವಾದಂತೆ ಆಗುತ್ತದೆ ಎಂದು ಹೈಕಮಾಂಡ್ ಆಲೋಚನೆ ಎನ್ನಲಾಗಿದೆ.