ಚಿತ್ರದುರ್ಗ,(ಅಕ್ಟೋಬರ್ 03) : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ-2022ರ ಸಂಬಂಧ 1:2 ಅನುಪಾತದ ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟಿಸಲಾಗಿದೆ.
ಪಟ್ಟಿಯಲ್ಲಿನ ಅಭ್ಯರ್ಥಿಗಳು ಅಕ್ಟೋಬರ್ 06 ರಿಂದ ಅಕ್ಟೋಬರ್ 12 ರವರೆಗೆ ಕಛೇರಿಯ ನಾಮಫಲಕದಲ್ಲಿ ಪ್ರಕಟಿಸಲಾದ ವೇಳಪಟ್ಟಿಯಂತೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು ಹಾಗೂ 2 ಜೆರಾಕ್ಸ್ ಪ್ರತಿಗಳನ್ನು ಉಪನಿರ್ದೆಶಕರ ಕಛೇರಿಯಲ್ಲಿ ಹಾಜರುಪಡಿಸಬೇಕು.
ಅಕ್ಟೋಬರ್ 06ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಆಂಗ್ಲ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 01 ರಿಂದ 82 ಹಾಗೂ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕ್ರಮಸಂಖ್ಯೆ 1ರಿಂದ 20 ರವರೆಗೆ ದಾಖಲಾತಿ ಪರಿಶೀಲನೆ ನಡೆಯಲಿದೆ.
ಅಕ್ಟೋಬರ್ 7ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕ್ರಮಸಂಖ್ಯೆ 21ರಿಂದ 52 ಹಾಗೂ ಜೀವಶಾಸ್ತ್ರ ವಿಜ್ಞಾನಕ್ಕೆ ಸಂಬಂಧಿಸಿದಂತೆ ಕ್ರಮಸಂಖ್ಯೆ 1ರಿಂದ 63 ಪರಿಶೀಲನೆ ನಡೆಯಲಿದೆ.
ಅಕ್ಟೋಬರ್ 10ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಗಣಿತ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 1 ರಿಂದ 100 ದಾಖಲಾತಿ ಪರಿಶೀಲನೆ ನಡೆಯಲಿದೆ.
ಅಕ್ಟೋಬರ್ 11ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಗಣಿತ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 101 ರಿಂದ 200 ರವರೆಗೆ ದಾಖಲಾತಿ ಪರಿಶೀಲನೆ ನಡೆಯಲಿದೆ.
ಅಕ್ಟೋಬರ್ 12ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಗಣಿತ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಸಂಖ್ಯೆ 201 ರಿಂದ 272ರ ವರೆಗೆ ಮೂಲ ದಾಖಲೆಗಳ ಪರಿಶೀಲನೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿಯ ಸಹಾಯವಾಣಿ ಸಂಖ್ಯೆ ಉಪನಿರ್ದೇಶಕರಾದ ಕೆ.ರವಿಶಂಕರರೆಡ್ಡಿ-9448999336, ನೇಮಕಾತಿ ನೋಡಲ್ ಅಧಿಕಾರಿ ಸಿ.ಎಂ ತಿಪ್ಪೇಸ್ವಾಮಿ 7760604054, ಪತ್ರಾಂಕಿತ ಸಹಾಯಕರಾದ ಬಿ.ವಿ.ಪ್ರಸಾದ ಬಾಬು-9448664370, ಆಡಳಿತ ಶಾಖೆ ಅಧಿಕ್ಷಕರಾದ ರುಕ್ಸಾನಾ ಪರ್ವೀನ್-9481161868, ನೇಮಕಾತಿ ವಿಷಯ ನಿರ್ವಾಹಕ ಪ್ರಥಮ ದರ್ಜೆ ಸಹಾಯಕ ಪಿ.ನಟರಾಜ -8970835155, ಕಛೇರಿ ದೂರವಾಣಿ ಸಂಖ್ಯೆ-08194-222259, [email protected] ಗೆ ಸಂಪರ್ಕಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.