in ,

chitradurgachitradurga

ಚಿತ್ರದುರ್ಗದ ಎಸ್‌ ಆರ್‌ ಎಸ್‌ ಪಿಯು ಕಾಲೇಜಿಗೆ ದಾಖಲೆಯ ಫಲಿತಾಂಶ

suddione whatsapp group join

ಚಿತ್ರದುರ್ಗ, (ಏ.21) : ನಗರದ  ಎಸ್‌ ಆರ್‌ ಎಸ್‌ ಪಿಯು ಕಾಲೇಜಿಗೆ ಈ ಬಾರಿಯೂ ಉತ್ತಮ ಫಲಿತಾಂಶ ದಾಖಲಾಗಿದೆ.

ಮಾರ್ಚ್‌ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಏಪ್ರಿಲ್‌ 21 ಶುಕ್ರವಾರ ಪ್ರಕಟಗೊಂಡಿದ್ದು, ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಒಟ್ಟು 318 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ (ಶೇ.85ಕ್ಕಿಂತ ಹೆಚ್ಚು) ಪಡೆದರೆ, ವಿವಿಧ ವಿಷಯಗಳಲ್ಲಿ ಮತ್ತೆ ದಾಖಲೆಯ 63 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತೀ ತಂದಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಾದ ಕು. ಹೆಚ್‌ ಎಸ್‌ ಜಯಂತ್‌ ಹಾಗೂ ಕು.ಪೃಥ್ವಿ ಕೆ ಸಿ. ಸಮನಾಗಿ 600 ಕ್ಕೆ 589 ಅಂಕಗಳನ್ನು ಪಡೆದು ಜಿಲ್ಲೆಗೆ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 589 ಅಂಕಗಳಿಸಿರುವ ಕು. ಹೆಚ್ ಎಸ್ ಜಯಂತ್, ಜೆಇಇ ಮೈನ್ಸ್‌ನಲ್ಲಿ 99.06 ಪರ್ಸಂಟೈಲ್‌ ಗಳಿಸಿ ಜೆಇಇ ಅಡ್ವಾನ್ಡ ಗೆ ಆಯ್ಕೆಯಾಗಿರುತ್ತಾನೆ ಹಾಗೂ OASIS ನಲ್ಲಿ ಆಲ್‌ ಇಂಡಿಯಾ 10ನೇ ರ್ಯಾಂಕ್‌ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಹಾಗೆಯೇ ವಾಣಿಜ್ಯ ವಿಭಾಗದ  ಕು.ಪೃಥ್ವಿ ಕೆ ಸಿ.  CA ಆಗುವ ಇಚ್ಛೆ ಹೊಂದಿದ್ದಾಳೆ ಹಾಗೂ  ಕು. ಫಣೀಂದ್ರಕುಮಾರ್‌ 587, ಕು.ಹೇಮಾ ಎ. 586, ಕು.ಮಧುಸೂದನ್‌ ಕೆ ಎಂ. 585, ಕು.ಹನಿ ಎ ಜೈನ್‌ 584, ಕು. ನಿತಿನ್‌ 583, ಕು. ಹರ್ಷಿತ ಎಸ್‌ ಎನ್‌ 583, ಕು.ಮರುಳಸಿದ್ದನ ಗೌಡ, 582, ಕು.ದಿಶಾ ಡಿ ಎಸ್‌ 582, ಕು.ಸುಮಧ್ವಕೃಷ್ಣ ಹೆಚ್‌ ಎಂ. 582, ಕು.ಮಹಾಲಕ್ಷ್ಮಿ ವಿ. 582, ಕು.ಸುಷ್ಮ ಎ 580,   ಅಂಕಗಳನ್ನು ಪಡೆದುದಲ್ಲದೆ ಈ ಎಲ್ಲಾ ವಿದ್ಯಾರ್ಥಿಗಳು ಕನಿಷ್ಠ ಎರಡು ವಿಷಯಗಳಲ್ಲಿ 100 ಕ್ಕೆ 100 ಅಂಕಗಳಿಸಿರುವುದು ವಿಶೇಷ.

ಎಸ್‌ ಆರ್‌ ಎಸ್‌ ಪಿಯು ಕಾಲೇಜು ಈ ವರ್ಷ ಅದ್ಬುತ ಫಲಿತಾಂಶ ದಾಖಲಿಸಿ, ಕನ್ನಡ, ಇಂಗ್ಲೀಷ್‌, ಹಿಂದಿ, ಸಂಸ್ಕೃತ, ಭೌತಶಾಸ್ತ್ರ, ಜೀವಶಾಸ್ತ್ರ, ಅರ್ಥಶಾಸ್ತ್ರ , ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ಗಣಕ ವಿಜ್ಞಾನ ವಿಷಯಗಳಲ್ಲಿ ಶೇ.100 ಫಲಿತಾಂಶ ದಾಖಲಿಸಿ ಹೊಸ ಇತಿಹಾಸ ಬರೆದಿದೆ.

ಕಾಲೇಜಿನ ಫಲಿತಾಂಶ ವೃದ್ಧಿಗೆ ಕೈಗೊಂಡ ಕ್ರಮಗಳು ಭರ್ಜರಿ ಯಶಸ್ಸು ಗಳಿಸಿ ಎಸ್‌ ಆರ್‌ ಎಸ್‌ ಪಿಯು ತರಬೇತಿಯ ಹೊಸ ಆಶಾಕಿರಣವಾಗಿ ಹೊಮ್ಮಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಬಿ ಎ ಲಿಂಗಾರೆಡ್ಡಿ ಯವರು ಅಭಿಪ್ರಾಯ ಪಟ್ಟಿದ್ದಾರೆ.

ಕಾಲೇಜಿಗೆ ಹಾಗೂ ಜಿಲ್ಲೆಗೆ  ಕೀರ್ತೀ ತಂದಿರುವ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ  ಬಿ ಎ ಲಿಂಗಾರೆಡ್ಡಿ, ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಬಿ ಎಲ್‌ ಅಮೋಘ್‌, ಆಡಳಿತಾಧಿಕಾರಿಗಳಾದ ಡಾ. ರವಿ ಟಿ.ಎಸ್‌., ಪ್ರಾಂಶುಪಾಲರಾದ ಗಂಗಾಧರ್‌ ಈ. ಉಪ ಪ್ರಾಂಶುಪಾಲರಾದ ಅಣ್ಣಪ್ಪ ಹೆಚ್‌ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಚಿತ್ರದುರ್ಗ : 90 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದ : 8 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ದಾಳಿ ಬಳಿಕ ಶೂಟಿಂಗ್ ಸ್ಥಗಿತಗೊಳಿಸಿದ ಪುಷ್ಪ-2