Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದ್ವೇಷವನ್ನು ಪ್ರೀತಿಯಿಂದ ಗೆದ್ದಾಗ ಮಾತ್ರ ಸಮನ್ವಯ ಸಾಧ್ಯ : ಶ್ರೀಮತಿ ತಾರಿಣಿ ಶುಭದಾಯಿನಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆ.31 : ಸಮನ್ವಯ ಮನುಷ್ಯನ ವಿಕಾಸಕ್ಕೆ ಅನುಮಾಡಿಕೊಡುವುದರಿಂದ ಸಮನ್ವಯ ತತ್ವಗಳನ್ನು ವೈರುದ್ಯದ ನೆಲೆಯಲ್ಲಿ ನೋಡಬೇಕು ಎಂದು ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ತಾರಿಣಿ ಶುಭದಾಯಿನಿ ಹೇಳಿದರು.

ಮುರುಘಾಮಠ ಬಸವಕೇಂದ್ರದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯ ನಡೆಯುತ್ತಿರುವ ಶ್ರಾವಣ ಮಾಸದ ನಿತ್ಯಕಲ್ಯಾಣ ಮನೆ ಮನೆಗೆ ಚಿಂತನ ಕಾರ್ಯಕ್ರಮದ ನಿಮಿತ್ತ ಜಿಲ್ಲಾ ವೀರಶೈವ ಲಿಂಗಾಯತ ಹೇಮರೆಡ್ಡಿ ಮಲ್ಲಮ್ಮ ಸಮಾಜದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಮನ್ವಯ ದೃಷ್ಠಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

ಎಲ್ಲಾ ಕ್ಷೇತ್ರಗಳಲ್ಲಿಯೂ ಸಮನ್ವಯ ಎನ್ನುವ ಪದ ಬಳಕೆಯಲ್ಲಿದೆ. ತತ್ವವಿಚಾರಗಳು, ವೈರುದ್ಯಗಳಿಂದ ಸಮನ್ವಯ ಕೂಡಿದೆ. ತತ್ವ ಚಿಂತನೆ, ಜಿಜ್ಞಾಸೆಯಲ್ಲಿ ಸಮನ್ವಯ ಒಂದು. ಬುದ್ದ ವೈರುದ್ಯಗಳನ್ನು ನೀಗಿಕೊಳ್ಳಲು ಧ್ಯಾನ ಮಾಡುತ್ತ ಕುಳಿತ. ಮಧ್ಯಮ ಮಾರ್ಗ ಬುದ್ದ ಸಾಧಿಸಿದ ಸಮನ್ವಯ ತತ್ವ. ಸತ್ಯದ ದರ್ಶನ ಆಗಬೇಕು. ದ್ವೇಷವನ್ನು ಪ್ರೀತಿಯಿಂದ ಗೆಲ್ಲಬೇಕು. ಆಗ ಮಾತ್ರ ಸಮನ್ವಯ ಸಾಧಿಸಬಹುದು ಎಂದು ತಿಳಿಸಿದರು.

ಸಮತೋಲನ ಸಾಧಿಸುವುದು ದೊಡ್ಡ ಸವಾಲು ಎಂದು ಬುದ್ದ ಹೇಳಿದ್ದಾನೆ. ರಾಜಕೀಯ ಎನ್ನುವುದು ಮನೆ ಮನಗಳಲ್ಲಿ ಹೊಕ್ಕಿದೆ. ರಾಜಕೀಯಕ್ಕೂ ಮೋಕ್ಷ ಮಾರ್ಗಕ್ಕೂ ಯಾವ ರೀತಿ ಸಂಬಂಧ ಇದೆ ಎನ್ನುವುದನ್ನು ತೋರಿಸಿದವರು ಗಾಂಧಿ. ವಿರೋಧಾಭಾಸದ ಜೊತೆ ಗಾಂಧಿ ದೊಡ್ಡ ಸಮನ್ವಯಕಾರರಾಗಿ ಕೆಲಸ ಮಾಡಿದ್ದಾರೆ.

ವೈರುದ್ದಗಳು ಭಾರತದಲ್ಲಿ ಸರ್ವೆ ಸಾಮಾನ್ಯ. ಸಮನ್ವಯತೆ ಬೇಕು. ಅದೊಂದು ಶಕ್ತಿ. ಸಮನ್ವಯತೆ ಎನ್ನುವುದು ಮೌಲ್ಯ. ಅದನ್ನು ಗಾಂಧಿಯಲ್ಲಿ ಕಾಣಬಹುದು. ಸಂವಿಧಾನ ಕೂಡ ಸಮನ್ವಯಕಾರನ ರೂಪದಲ್ಲಿ ನಿಂತಿರುವ ದೊಡ್ಡ ಶಕ್ತಿ. ಸಮನ್ವಯ ಎನ್ನುವುದು ನಮ್ಮ ನಿಲುವಾಗಿರಬೇಕು. ಸಂವಿಧಾನವನ್ನು ಬಾಯಲ್ಲಿ ಪಠಿಸುತ್ತೇವೆ. ಯಾರು ಪಾಲನೆ ಮಾಡುತ್ತಿಲ್ಲ. ತಾಳ್ವಿಕೆ ಎಲ್ಲಿಯವರೆಗೂ ಜೀವನ ಮೌಲ್ಯವಾಗಿ ಬರುವುದಿಲ್ಲವೋ ಅಲ್ಲಿಯತನಕ ರಾಜಕೀಯ, ಆಧ್ಯಾತ್ಮವನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಎಂದರು.

ನಿಜವಾದ ಸಮನ್ವಯಕಾರರು ಒಳತಂತುಗಳಲ್ಲಿ ಬೆಸೆಯಬೇಕು. ಸಮನ್ವಯದ ನೆಲೆಯಲ್ಲಿ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ಹೇಳಿದರು. ತಿಪ್ಪೇರುದ್ರಸ್ವಾಮಿ ಮಾತನಾಡಿ ಯುಗ ಯುಗಗಳಿಂದಲೂ ಮಾನವ ಈ ಭೂಮಿ ಮೇಲೆ ಜೀವನ ನಡೆಸಿದ್ದಾನೆ. ಶ್ರೇಷ್ಠ-ಕನಿಷ್ಠ ಎನ್ನುವುದು ಕೇವಲ ಮನುಷ್ಯನಲ್ಲಿ ಅಲ್ಲ.

ಪ್ರಾಣಿ, ಪಕ್ಷಿಗಳಲ್ಲಿಯೂ ಇದೆ. ಸ್ತ್ರೀ-ಪುರುಷರ ನಡುವೆ ದೊಡ್ಡ ಕಂದಕವಿದೆ. ಸುಖ-ದುಃಖ, ಪಾಪ-ಪುಣ್ಯದ ನಡುವೆ ಸಮನ್ವಯತೆ ಬೇಕು. ಕಾಲ ನಿರ್ಣಯವಿಲ್ಲದೆ ಯಾವ ಕಾರ್ಯವನ್ನು ಮನುಷ್ಯ ಮಾಡುತ್ತಿಲ್ಲ. ಅಷ್ಟೊಂದು ಮೂಢನಂಬಿಕೆಗೆ ಬಲಿಯಾಗಿದ್ದಾನೆ. ಆಧ್ಯಾತ್ಮ ಸಾಧಿಸಲು ಸಮನ್ವಯ ಅಡ್ಡ ಬರುವುದಿಲ್ಲ. ವಚನ ಚಳುವಳಿ ಹುಟ್ಟಿದ್ದೆ ಸಮನ್ವಯ ದೃಷ್ಠಿಯಿಂದ ಎಂದು ತಿಳಿಸಿದರು.

ಮುರುಘಾಮಠದ ಬಸವಪ್ರಭು ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಬಸವೇಶ್ವರ ಆಸ್ಪತ್ರೆಯ ಡಾ.ಪಾಲಾಕ್ಷ, ಲಾಯರ್ ವಿಶ್ವನಾಥ್ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿಜೆಪಿಗೆ ಹೀನಾಯ ಸೋಲು : ಇಬ್ಬರು ಮಾಜಿ ಮುಖ್ಯಮಂತ್ರಿಗಳ ಪುತ್ರರು ಸೋಲು

ಸುದ್ದಿಒನ್, ಬೆಂಗಳೂರು, ನವೆಂಬರ್.23 : ಕರ್ನಾಟಕದಲ್ಲಿ ನಡೆದ ಎಲ್ಲಾ ಮೂರು ವಿಧಾನಸಭಾ ಉಪಚುನಾವಣೆಗಳಾದ ಶಿಗ್ಗಾಂವ್, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇಬ್ಬರು ಬಿಜೆಪಿ ಅಭ್ಯರ್ಥಿಗಳು ಮತ್ತು ಜೆಡಿಎಸ್ ಅಭ್ಯರ್ಥಿಯನ್ನು ಮತದಾರ

ರೈತ ವಿರೋಧಿ ನೀತಿ ಖಂಡಿಸಿ ನವೆಂಬರ್ 26 ರಂದು ಪ್ರತಿಭಟನೆ : ಜೆ.ಯಾದವರೆಡ್ಡಿ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 23 : ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಸಂಯಕ್ತ ಹೋರಾಟ-ಕರ್ನಾಟಕ ವತಿಯಿಂದ ನ.26 ರಂದು ಜಿಲ್ಲಾಧಿಕಾರಿ

Aus vs Ind 1st Test : ಶತಕದ ಸನಿಹದಲ್ಲಿ ಜೈಸ್ವಾಲ್ : ಎರಡನೇ ದಿನದ ಅಂತ್ಯಕ್ಕೆ ಭಾರತ 200 ರನ್‌ಗಳ ಮುನ್ನಡೆ…!

ಸುದ್ದಿಒನ್ | ಬಾರ್ಡರ್-ಗವಾಸ್ಕರ್ ಟ್ರೋಫಿ ಮೊದಲ ಟೆಸ್ಟ್, 2 ನೇ ದಿನ :  ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ 218 ರನ್ ಮುನ್ನಡೆ ಸಾಧಿಸಿದೆ. ಶನಿವಾರದ ಎರಡನೇ ದಿನದಾಟದ ಅಂತ್ಯಕ್ಕೆ

error: Content is protected !!