Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕುಂಚಿಟಿಗ ಜಾತಿಯನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು : ರಾಜ್ಯ ಸರ್ಕಾರ ಸೇರಿದಂತೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದ ಶ್ರೀ ಶಾಂತವೀರ ಮಹಾಸ್ವಾಮೀಜಿ

Facebook
Twitter
Telegram
WhatsApp

 

ಸುದ್ದಿಒನ್, ಹೊಸದುರ್ಗ : ಕುಂಚಿಟಿಗ ಸಮಾಜದ  ಸಂಘಟನೆ ಸಂಸ್ಕಾರ ಸಾಮಾಜಿಕ ನ್ಯಾಯವನ್ನು ಮೀಸಲಾತಿ ಸೌಲಭ್ಯ ಕಲ್ಪಿಸುವ ಸಕಾರಾತ್ಮಕ ಸಂಕಲ್ಪದೊಂದಿಗೆ 1990 ರಿಂದ ಶ್ರೀ ಸಂಗಮೇಶ್ವರ ಜಯಂತ್ಯೋತ್ಸವ ಹಾಗೂ ಕುಂಚಿಟಿಗ ಸಮಾವೇಶ ನಡೆಸುತ್ತ ನಿರಂತರ ಪ್ರಯತ್ನ ಮಾಡಿ 1997 ರಲ್ಲಿ ಹೊಸದುರ್ಗದಲ್ಲಿ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಪ್ರಾರಂಭ ಮಾಡಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರಗಳಿಗೆ ಸಮಾವೇಶಗಳಲ್ಲಿ ಮುಖ್ಯಮಂತ್ರಿಗಳಿಗೆ, ಮಂತ್ರಿಗಳಿಗೆ, ಒತ್ತಾಯ ಒತ್ತಡ ತರುತ್ತಾ ಬಂದಿರುವ ಕಾರಣ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನಮ್ಮ ನೇತೃತ್ವದಲ್ಲಿ ದೆಹಲಿಯಾತ್ರೆ ಹಿಂದುಳಿದ ವರ್ಗದ ಅಧ್ಯಕ್ಷರು ಹಿಂದುಳಿದ ವರ್ಗದ ಸಚಿವರುಗಳು ಶಾಸಕರು ಸಂಸದರಿಗೆ ಕುಂಚಿಟಿಗ ಸಮಾಜದ ಮೀಸಲಾತಿಗೆ ಎರಡು ದಶಕಗಳ ಪ್ರಯತ್ನ ಮಾಡಿದ ಪರಿಣಾಮ ಸರ್ಕಾರ ಮಾನ್ಯ ಮಾಡಿದೆ. ಕೆಲಸ ಇನ್ನೂ ಇದೆ.
ಮುಂದೆ ಕೇಂದ್ರ ಸರ್ಕಾರದ ಗಮನ ಸೆಳೆದು ಸಂಸದರಿಗೆ ಎಲ್ಲರೂ ಸೇರಿ ಪ್ರಯತ್ನಿಸಿದರೆ ಬೇಗ ಒಬಿಸಿ ಪಡೆಯಬಹುದು.

ಕುಂಚಿಟಿಗ ಜಾತಿಯನ್ನು ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿರುವುದರಿಂದ  ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್, ರವರು ಎರಡು ದಶಕಗಳಿಂದ ಶ್ರಮವಹಿಸಿದ ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಕುಂಚಿಟಿಗ ಸಮಾಜದ ನಾಯಕ ಟಿ.ಬಿ, ಜಯಚಂದ್ರರವರು ಕುಲಶಾಸ್ತ್ರ ಅಧ್ಯಯನಕ್ಕೆ ಸಹಕಾರ ನೀಡಿದ ಮಾಜಿ ಸಚಿವರಾದ ಎಚ್, ಆಂಜನೇಯರವರು, ದೆಹಲಿಯ ತಮ್ಮ ಮನೆಯಲ್ಲಿ ಸಭೆ ಏರ್ಪಡಿಸಿದ ದಾವಣಗೆರೆ ಸಂಸದರಾದ ಸಿದ್ದೇಶ್ ಲೋಕಸಭೆಯಲ್ಲಿ ಧ್ವನಿ ಎತ್ತಿದ ತುಮಕೂರು ಮಾಜಿ ಸಂಸದರಾದ ಮುದ್ದಹನುಮೇಗೌಡರು
ದೆಹಲಿ ಯಾತ್ರೆ ಹಾಗೂ ನಿರಂತರ ಪ್ರಯತ್ನ ಮಾಡಿದ ಮುರುಳಿಧರ್ ಹಾಲಪ್ಪನವರು, ಸಹಕರಿಸಿದ ನವೀನ್ ಕೊಟ್ಟಿಗೆ,  ಎಸ್. ಲಿಂಗಮೂರ್ತಿಯವರು ಎನ್.ಹೆಚ್. ಸುರೇಶ್ ರಂಗನಗೌಡರು, ಕಲ್ಲಣ್ಣ, ಕುಲಶಾಸ್ತ್ರ ಅಧ್ಯಯನದಲ್ಲಿ ತೊಡಗಿ ಶ್ರಮ ವಹಿಸಿದ ಪತ್ರಕರ್ತರಾದ ಹೇಂಜರಪ್ಪನವರು,
ಕುಲಶಾಸ್ತ್ರ ಅಧ್ಯಯನಕ್ಕೆ ಆರ್ಥಿಕ ಸಹಾಯ ನೀಡಿ ಶ್ರಮಿಸಿದ ಕುಂಚಿಟಿಗ ಮಹಾಮಂಡಲದ ಅಂದಿನ ಅಧ್ಯಕ್ಷರಾದ ಬಸವಾನಂದರವರು ಪ್ರತಿಭಾ ಪುರಸ್ಕಾರದ ಮೂಲಕ ಸಮಾಜ ಸಂಘಟಿಸಿ ರಾಜ್ಯ ಸುತ್ತಿದ ಕುಂಚ ಪರಿವಾರ ಹಾಗೂ ಅಧ್ಯಕ್ಷರಾದ ಶಿವಭದ್ರಯ್ಯ, ತಂಡ ಮೀಸಲಾತಿಗಾಗಿ ಬೆಂಗಳೂರಿನಲ್ಲಿ ಸತ್ಯಾಗ್ರಹ ನಡೆಸಿದ ಕರ್ನಾಟಕ ಕುಂಚಿಟಿಗ ಸಂಘದ ವಿನಯ್ ಪೂಜಾರ್, ಹಾಗೂ ತಂಡ ಸತ್ಯಾಗ್ರಹ ಯಶಸ್ಸಿನಲ್ಲಿ ಭಾಗವಹಿಸಿದ ಮೈಸೂರು ಕುಂಚಿಟಿಗ ಸಂಘ, ಇತ್ತೀಚಿಗೆ ಕುಂಚಿಟಿಗ ಮಹಾ ಮಂಡಲದ ಅಧ್ಯಕ್ಷರಾಗಿ ಅತ್ಯಂತ ಕ್ರಿಯಾಶೀಲರಾಗಿ ಹಲವು ಜಿಲ್ಲೆಗಳಿಗೆ ಪ್ರಯಾಣ ಮಾಡಿ ಒತ್ತಡ ಹೇರಿದ ರಂಗಹನುಮಯ್ಯನವರು, ರಾಮಾಂಜನೇಯ. ಚಂದ್ರಯ್ಯ. ಕಾಂತರಾಜ್, ಚಂದ್ರಣ್ಣ,

ಕುಂಚಿಟಿಗ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಲು ನಿರತರ ಪ್ರಯತ್ನ ಮಾಡಿ ಸಹಕಾರ ನೀಡಿದ ಕುಂಚಿಟಿಗ ಸಮಾಜದ ಪರಮಪೂಜ್ಯರು
ಕುಂಚಿಟಿಗ ಮಹಾಮಂಡಲ
ಕುಂಚ ಪರಿವಾರ
ಮೈಸೂರು ಕುಂಚಿಟಿಗ ಸಂಘ
ಚಿತ್ರದುರ್ಗ ಕುಂಚಿಟಿಗ ಸಂಘ
ದಾವಣಗೆರೆ ಕುಂಚಿಟಿಗ ಸಂಘ
ಶಿವಮೊಗ್ಗ ಕುಂಚಿಟಿಗ ಸಂಘ
ತುಮಕೂರು ಕುಂಚಿಟಿಗ ಸಂಘ
ಹಾಸನ ಕುಂಚಿಟಿಗ ಸಂಘ
ಚಿಕ್ಕಮಗಳೂರು ಕುಂಚಿಟಿಗ ಸಂಘ
ಚಿಕ್ಕಬಳ್ಳಾಪುರ ಕುಂಚಿಟಿಗ ಸಂಘ
ಹಾವೇರಿ ಕುಂಚಿಟಿಗ ಸಂಘ
ಬೆಂಗಳೂರು ಗ್ರಾಮಾಂತರ ನಗರ ಜಿಲ್ಲಾ  ಕುಂಚಿಟಿಗ ಸಂಘ
ರಾಷ್ಟ್ರೀಯ ಕುಂಚಿಟಿಗ ಸಂಘ
ಬಳ್ಳಾರಿ ಕುಂಚಿಟಿಗ ಸಂಘ
ವಿಜಯನಗರ ಕುಂಚಿಟಿಗ ಸಂಘ
ರಾಮನಗರ ಕುಂಚಿಟಿಗ ಸಂಘ ಹಾಗೂ ರಾಜ್ಯದ ಎಲ್ಲ ಕುಂಚಿಟಿಗ ಸಂಘದ ಅಧ್ಯಕ್ಷರು ಪದಾಧಿಕಾರಿಗಳಿಗೆ ಸಮಾಜ ಮಠದ ವೈಯಕ್ತಿಕವಾಗಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ
ಎಂದು ಶ್ರೀ ಶಾಂತವೀರ ಮಹಾಸ್ವಾಮೀಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

ಡಿಸೆಂಬರ್ 01 ರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ : ಜಿಲ್ಲಾಧಿಕಾರಿ ಟಿ.ವೆಂಕಟೇಶ್

  ಚಿತ್ರದುರ್ಗ. ನ.22: ಪ್ರಸಕ್ತ ಮುಂಗಾರು ಹಂಗಾಮಿನ ರಾಗಿ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಡಿಸೆಂಬರ್ 01 ರಿಂದ ನೋಂದಣಿ ಕಾರ್ಯ ಪ್ರಾರಂಭಿಸಲಾಗುವುದು. ಡಿ.31 ರವರೆಗೆ ನೋಂದಣಿ ನಡೆಯಲಿದೆ. ಪ್ರತಿ ಕ್ವಿಂಟಾಲ್

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

error: Content is protected !!