ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.09 : ಮಂಡ್ಯ ಜಿಲ್ಲೆಯ ಕೆರಗೋಡಿನಲ್ಲಿ ಹನುಮ ಧ್ವಜವನ್ನು ತೆರವುಗೊಳಿಸಿರುವುದನ್ನು ವಿರೋಧಿಸಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳ ಕಾರ್ಯಕರ್ತರು ಡಿಸಿಸಿ ಬ್ಯಾಂಕ್ ಎದುರುಗಡೆ ಇರುವ ಶ್ರೀರಾಮ ಮಂದಿರ
ಹನುಮಾನ್ ಚಾಲೀಸ್ ಪಠಣೆ ಮಾಡಿ ಹನುಮದ್ವಜ ಪುನಃ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.
ಶ್ರೀರಾಮ ಭಜನಾ ಮಂಡಳಿಯವರು ಕಳೆದ 40 ವರ್ಷಗಳಿಂದ ಕೆರೆಗೋಡು ಗ್ರಾಮದಲ್ಲಿ ಯಾವ ತೊಂದರೆಯನ್ನೂ ಮಾಡದೆ ಭಜನೆಯನ್ನು ಮಾಡುತ್ತಾ ಬಂದಿರುತ್ತಾರೆ. ಈ ಗ್ರಾಮದಲ್ಲಿ ಯಾವಾಗಲೂ ಹನುಮಧ್ವಜ ಹಾರಿಸುತ್ತಿದ್ದ ಧ್ವಜದ ಸ್ಥಂಭವು ಶಿಥಿಲಗೊಂಡ ಕಾರಣಕ್ಕೆ, ಶ್ರೀರಾಮ ಭಜನಾ ಮಂಡಳಿ ಮತ್ತಿತರ ಅರ್ಜಿಯ ಮೇರೆಗೆ ಕೆರೆಗೋಡು ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ಧ್ವಜ ಸ್ಥಂಭವನ್ನು ಸ್ಥಾಪಿಸಿ ಅದರಲ್ಲಿ ಹನುಮಧ್ವಜವನ್ನು ಹಾರಿಸಲಾಗಿತ್ತು.

ಹೀಗೆ ಹಾರಿಸಿದ್ದ ಹನುಮ ಧ್ವಜವನ್ನು ಸ್ಥಳೀಯ ಸರ್ಕಾರೀ ಅಧಿಕಾರಿಗಳು ಇಳಿಸಿದ್ದು, ಎಲ್ಲರಿಗೂ ನೋವನ್ನುಂಟು ಮಾಡಿದೆ. ಹಾಗೂ ಸಮಸ್ತ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಅವಮಾನ ಮಾಡಿದಂತಾಗಿದೆ. ಈ ಸ್ಥಳದಲ್ಲಿ ಎಂದಿನಂತೆ ಹನುಮಧ್ವಜವನ್ನು ಮತ್ತೆ ಹಾರಿಸಬೇಕೆಂದು ಬಹುಸಂಖ್ಯಾತ ಹಿಂದೂ ಸಮಾಜದ ಪರವಾಗಿ ಆಗ್ರಹಿಸುತ್ತಿದ್ದೇವೆ.
ಕರ್ನಾಟಕದಲ್ಲೇ ಹುಟ್ಟಿದ, ವೀರತೆಯ ಸಂಕೇತವಾಗಿರುವ, ರಾಜ್ಯದ ಯುವ ಜನತೆಗೆ ಬುದ್ಧಿ, ಯಶಸ್ಸು, ಶಕ್ತಿ, ಶೌರ್ಯ, ಪರಾಕ್ರಮ, ಇತ್ಯಾದಿ ಸದ್ಗುಣಗಳಿಗೆ ಪ್ರೇರಣೆ ನೀಡುವ ವೀರಾಗ್ರೇಸರನಾದ ಹನುಮಂತನ ಶಕ್ತಿಯ ಸಂಕೇತವಾದ ಹನುಮಧ್ವಜವನ್ನು ಗೌರವಿಸುವುದು ನಮ್ಮೆಲ್ಲರ ಮತ್ತು ನಾವು ಚುನಾಯಿಸುವ ಸರ್ಕಾರದ ಕರ್ತವ್ಯವಾಗಿದ್ದು, ಅದು ಎಲ್ಲೇ ಹಾರಲಿ ಅದಕ್ಕೆ ಹಾನಿಯಾಗದಂತೆ ಸರಕಾರ ಸಂಬಂಧಿತ ಎಲ್ಲಾ ಇಲಾಖೆಗಳಿಗೆ ಆದೇಶ ನೀಡಬೇಕೆಂದು ವಿಶ್ವಹಿಂದೂ ಪರಿಷದ್ ಜಿಲ್ಲಾ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಭಜಂನ್ ದಕ್ಷಿಣ ಪ್ರಾಂತ ಸಹ ಸಂಯೋಜಕರು ಬಜರಂಗದಳ, ಪಿ ರುದ್ರೇಶ್ ಜಿಲ್ಲಾ ಕಾರ್ಯದರ್ಶಿ ವಿಶ್ವ ಎಂದು ಪರಿಷದ್, ಕೇಶವ್ ಜಿಲ್ಲಾ ಸಹ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್, ಬಾಲಕೃಷ್ಣ ಜಿಲ್ಲಾ ಸಹ ಸಂಯೋಜಕರು ಬಜರಂಗದಳ, ರಂಗಸ್ವಾಮಿ ನಗರ ಸಹ ಕಾರ್ಯದರ್ಶಿ ವಿಶ್ವ ಹಿದೂ ಪರಿಷದ್, ಶಶಿಧರ್ ಗ್ರಾಮಾಂತರ ಅಧ್ಯಕ್ಷರು ವಿಶ್ವ ಹಿಂದೂ ಪರಿಷದ್, ಹಾಗೂ ಪ್ರಮುಖರಾದ ವಿಠಲ್, ತೇಜು ,ಪ್ರಮೋದ ,ರಾಜೇಶ್, ದಿನೇಶ್, ದೀಪಕ್ ರಾಜ್ ಇತರರು ಇದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್