ಈ ಬಾರಿ ಐಪಿಎಲ್ ನಲ್ಲಿ ಆರ್ಸಿಬಿ ಟೀಂ ಅಭಿಮಾನಿಗಳ ಕನಸನ್ನು ಇನ್ನು ಜೀವಂತವಾಗಿರಿಸಿದೆ. ಪ್ಲೇ ಆಫ್ ಗೆ ಹೋಗಬೇಕೆಂದರೆ ನಾಳೆ ಇನ್ನೊಂದು ಅಗ್ನಿ ಪರೀಕ್ಷೆಯನ್ನು RCB ಎದುರಿಸಲೇಬೇಕಾಗಿದೆ. ಭಾನುವಾರ ನಡೆಯುವ ಮ್ಯಾಚ್ ನಲ್ಲಿ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ಪಂದ್ಯವಾಡಲಿದೆ. ಈ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಗೆದ್ದರೆ ಪ್ಲೇ ಆಫ್ ಕನಸಿಗೆ ಮತ್ತಷ್ಟು ಪುಷ್ಟಿ ನೀಡಿದಂತೆ ಆಗುತ್ತದೆ.
ಆರ್ಸಿಬಿ ಈಗಾಗಲೇ 13 ಪಂದ್ಯಗಳನ್ನು ಆಡಿದೆ. ಅದರಲ್ಲಿ 7 ಮ್ಯಾಚ್ ಗೆದ್ದಿದೆ. 14 ಪಾಯಿಂಟ್ ಗಳ ಜೊತೆಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ. ನಾಳೆ ನಡೆಯಿವ ಪಂದ್ಯದಲ್ಲಿ ಗುಜರಾತ್ ಟೈಮ್ಸ್ ಜೊತೆಗೆ ಗೆದ್ದರೆ ಕಪ್ ಮುಟ್ಟುವ ಅವಕಾಶವೂ ಜೀವಂತವಾಗಿರಲಿದೆ.
ನಾಳೆ ಸಂಜೆ ಆರ್ಸಿಬಿ ವರ್ಸಸ್ ಗುಜರಾತ್ ಟೈಮ್ಸ್ ಮುಖಾಮುಖಿಯಾಗಲಿದೆ. ಸಂಜೆ 7.30ಕ್ಕೆ ಕಂಠೀರವ ಸ್ಟೇಡಿಯಂ ಸಾಕ್ಷಿಯಾಗಲಿದೆ.





GIPHY App Key not set. Please check settings