ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ತನ್ನ ಅಭಿಮಾನಿಗಳಿಗೆ ಜೀವ ಬಾಯಿಗೆ ಬರಿಸಿತ್ತು. ಇನ್ನು ಆರ್ಸಿಬಿ ಕಥೆ ಮುಗಿದಂತೆ ಈ ವರ್ಷ ನಮ್ಮ ಟೀಂ ಆಡಿನೇ ಇಲ್ಲ ಎಂದುಕೊಳ್ಳೋಣಾ ಅಂತ ಫ್ಯಾನ್ಸ್ ತಮಗೆ ತಾವೇ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಸತತ ಸೋಲಿನಿಂದ ಕಂಗೆಟ್ಟು ಸೋಷಿಯಲ್ ಮೀಡಿಯಾದಲ್ಲಿ ಸಪೋರ್ಟ್ ಮಾಡುವುದಕ್ಕೆ ನಿಂತರು. ಆದರೆ ಆಮೇಲೆ ಶುರು ಮಾಡಿತು ನೋಡಿ ಆರ್ಸಿಬಿ ತನ್ನ ಆಟವನ್ನು ಬ್ಯಾಕ್ ಟು ಬ್ಯಾಕ್ ಸಿಕ್ಸು, ಫೋರೇ. ಸದ್ಯ ಪ್ಲೇ ಆಫ್ ಹೋಗುವ ಕನಸು ಕಾಣುತ್ತಿರುವ ತಂಡಕ್ಕೆ ಆ ಎರಡು ಮ್ಯಾಚ್ ಬಹಳ ಮುಖ್ಯವಾಗಿದೆ.
ಧರ್ಮಶಾಲಾದಲ್ಲಿ ಮುಗ್ಗರಿಸಿ ಬಿಡುತ್ತಾ ಎಂಬ ಆರಂಕದಲ್ಲಿಯೇ ಇದ್ದವರಿಗೆ ಆರ್ಸಿಬಿ ಚಮಕ್ ಕೊಟ್ಟಿದೆ. ಪಂಜಾಬ್ ವಿರುದ್ಧ 60 ರನ್ ಗಳಿಂದ ಗೆದ್ದು ಬೀಗಿದೆ. ಈ ಮೂಲಕ ಉತ್ತಮ ರನ್ ರೇಟ್ ನೊಂದಿಗೆ ಏಳನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್ ರನ್ ರೇಸ್ ನಲ್ಲಿ ಇನ್ನು ಕೂಡ ಉಳಿದುಕೊಂಡಿದೆ.
ಆರ್ಸಿಬಿ, ಡೆಲ್ಲಿ ಹಾಗೂ ಚೆನ್ನೈ ವಿರುದ್ಧ ಎರಡು ಪಂದ್ಯಗಳನ್ನು ಆಡಲಿದೆ. ಪ್ಲೇ ಆಫ್ ಗೆ ಹೋಗಬೇಕೆಂದರೆ ಈ ಎರಡು ಮ್ಯಾಚ್ ಟಾರ್ಗೆಟ್ ಇದೆ. ಅದರಲ್ಲೂ ಬಾರೀ ರನ್ ಗಳ ಮೊತ್ತದ ಅಂತರದಿಂದ ಗೆಲ್ಲಬೇಕಿದೆ. ಆಗ ಮಾತ್ರ ರನ್ ರೇಟ್ ಜಾಸ್ತಿಯಾಗುವುದು. ಆರ್ಸಿಬಿ ಬಾಯ್ಸ್ ಗೆ ಇದು ದೊಡ್ಡ ಸವಾಲು. ಯಾಕಂದ್ರೆ ಈಗಾಗಲೇ ಚೆನ್ನೈ 12 ಅಂಕಗಳನ್ನು ಗಳಿಸಿದೆ. ಮೂರು ಮ್ಯಾಚ್ ಗಳನ್ನು ಅದು ಸೋಲಬೇಕಿದೆ. ಕನಿಷ್ಠ ಎರಡು ಪಂದ್ಯಗಳನ್ನಾದರುಯ ಸೋಲಬೇಕಿದೆ. ಇನ್ನು ಆರ್ಸಿಬಿ ಆಡಿದ್ದು 12 ಪಂದ್ಯ. ಆದರೆ ಗೆದ್ದಿದ್ದು ಮಾತ್ರ 5 ಹೀಗಾಗಿ 10 ಅಂಕ ಮಾತ್ರ ಗಳಸಿದೆ.