ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ಮ್ಯಾಚ್ : ಏನಂದ್ರು ಸಚಿವ ಪರಮೇಶ್ವರ್..?

1 Min Read
ಸಚಿವ ಪರಮೇಶ್ವರ್

ಬೆಂಗಳೂರು: ಕಳೆದ ಬಾರಿ ಆರ್ಸಿಬಿ ಕಪ್ ಗೆದ್ದು ಬೆಂಗಳೂರಿಗೆ ಬಂದಾಗ ದಿಡ್ಡ ಅನಾಹುತವೇ ನಡೆದಿತ್ತು. ಕಾಲ್ತುಳಿತದಿಂದ ಸಾವು ನೋವು ಸಂಭವಿಸಿದ್ದವು. ಇದಾದ ಮೇಲೆ ಕಂಠೀರವ ಸ್ಟೇಡಿಯಂನಲ್ಲಿ ಆರ್ಸಿಬಿ ಮ್ಯಾಚ್ ನಡೆಯುತ್ತಾ ಇಲ್ವಾ ಎಂಬ ಅನುಮಾನ ಶುರುವಾಗಿತ್ತು. ಇದೀಗ ಅದಕ್ಕೆ ಉತ್ತರವೂ ಸಿಕ್ಕಿದೆ. ಮ್ಯಾಚ್ ಇಲ್ಲೂ ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ನಡೆಸುತ್ತಿದ್ದಾರೆ. ಈ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಜಸ್ಟೀಸ್ ವರದಿಯನ್ನ ನೀಡಿದ್ದಾರೆ. ಆ ವರದಿ ಬಗ್ಗೆ ನಾವೂ ಕೂಡ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಆರ್ಸಿಬಿ ತಂಡಕ್ಕೆ ಮಾಹಿತಿಯನ್ನ ನೀಡಿದ್ದೇವೆ. ಆ ವರದಿಯಲ್ಲಿ ಏನಿದೆ..? ಏನನ್ನ ಡಿಮ್ಯಾಂಡ್ ಮಾಡಿದ್ದಾರೆ ಎಂಬುದೆಲ್ಲವನ್ನು ಪತ್ರದ ಮೂಲಕ ತಿಳಿಸಿದ್ದೇವೆ. ಜೊತೆಗೆ ನಮ್ಮ ಸರ್ಕಾರದಿಂದ ಜಿಬಿಎ ಕಮಿಷನರ್ ಹಾಗೂ ಪೊಲೀಸ್ ಕಮಿಷನರ್ ಸೇರಿ ಒಂದು ಸಮಿತಿ ಮಾಡಿದ್ದೇವೆ. ಸ್ಟೇಡಿಯಂನಲ್ಲಿ ಏನೆಲ್ಲಾ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಬೇಕು ಎಂಬುದನ್ನ ಸೂಚನೆ ನೀಡಿದ್ದೇವೆ.

ಸಂಬಂಧಪಟ್ಟಂತೆ ನಮ್ಮ ಅಧಿಕಾರಿಗಳನ್ನು ಕರೆದು ಸಭೆ ಮಾಡ್ತೇನೆ ಎಂಬ ಮಾತನ್ನ ಹೇಳಿದ್ದಾರೆ. ಒಟ್ಟಾರೆ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಆರ್ಸಿಬಿ ಮ್ಯಾಚ್ ಗಳು ಬೆಂಗಳೂರಿನಲ್ಲಿಯೂ ನಡೆಯುತ್ತವೆ. ಈ‌ ಮ್ಯಾಚ್ ಗಳನ್ನ ನೋಡಲು ಲಕ್ಷಾಂತರ ಜನ ಬರ್ತಾರೆ. ಇಡೀ ಸ್ಟೇಡಿಯಂ ತುಂಬಿ ತುಳುಕುತ್ತಾ ಇರುತ್ತದೆ. ಅದನ್ನ ನೋಡೋದಕ್ಕೇನೆ ಚೆಂದ. ಆ ಕಹಿ ಘಟನೆ ನಡೆದಾಗ ಆರ್ಸಿಬಿ ಅಭಿಮಾನಿಗಳೆಲ್ಲಾ ಬೇಸರದಲ್ಲಿದ್ದರು. ಬಳಿಕ ಮ್ಯಾಚ್ ಗಳು ಇಲ್ಲಿಯೂ ನಡೆಯುತ್ತವೆ ಎಂದಾಗ ಖುಷಿಯಾಗಿದ್ದಾರೆ. ಸದ್ಯಕ್ಕೆ ಯಾವುದೇ ಅನಾಹುತಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.

Share This Article
Enable Notifications OK No thanks